ಬದುಕಿದ್ದಾಗ ಮಾತಾಡಿದ್ರೆ ಗಂಡಸ್ತನ : ತೆಲುಗು ನಟನಿಗೆ ಕಿಚ್ಚ ವಾರ್ನಿಂಗ್
ಚಂದನವನದ ಯಜಮಾನ, ಸಾಹನ ಸಿಂಹ ವಿಷ್ಟುವರ್ಧನ್ ಕುರಿತಂತೆ ತೆಲುಗು ನಟ ವಿಜಯ್ ರಂಗರಾಜು ನಾಲಿಗೆ ಹರಿಬಿಟ್ಟಿದ್ದು, ಇದೀಗ ಸ್ಯಾಂಡಲ್ ವುಡ್ ನಟರು ಸೇರಿದಂತೆ ವಿಷ್ಣುದಾದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಇನ್ನು ರಂಗರಾಜು ಹೇಳಿಕೆ ಬಗ್ಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದು, ನಟನಾಗಿ, ಅದಕ್ಕಿಂತು ಮುಖ್ಯವಾಗಿವಿಷ್ಣು ಸರ್ ಅಭಿಮಾನಿಯಾಗಿ ಮಾತನಾಡುತ್ತಿದ್ದೇನೆ. ವಿಜಯ್ ರಂಗರಾಜು ಅವರೇ ಒಬ್ಬ ವ್ಯಕ್ತಿಯ ಬಗ್ಗೆ ಏನ್ ಮಾತನಾಡಬೇಕು ಅನ್ನೋದು ನಿಮಗೆ ಬಿಟ್ಟಿದ್ದು.
ಆ ವ್ಯಕ್ತಿ ಬದುಕಿದ್ದಾಗ ಮಾತನಾಡಿದ್ರೆ ಗಂಡಸ್ತನ ಇರತ್ತೆ ಎಂಬ ನಂಬಿಕೆ ಇದೆ. ಅವರು ನಿಧನರಾದ ಮೇಲೆ ಕೆಟ್ಟದಾಗಿ ಮಾತನಾಡುವುದು ಸರಿಯಲ್ಲ. ಕೋಟ್ಯಾಂತರ ಮಂದಿ ಆರಾಧ್ಯ ದೇವರಾದಂತಹವಿಷ್ಣು ಸರ್ ಬಗ್ಗೆ ನೀವು ಈ ರೀತಿ ಮಾತನಾಡೋದು ತುಂಬಾ ದೊಡ್ಡ ತಪ್ಪು.
ಭಾರತದ ಎಲ್ಲ ಚಿತ್ರರಂಗವರೂ ಒಟ್ಟಿಗೆ ಚೆನ್ನಾಗಿರಬೇಕಾದ್ರೆ ನೀವು ವಿಷ್ಣು ಸರ್ ಬಗ್ಗೆ ಕೆಟ್ಟದಾಗಿ ಮಾತನಾಡಿರುವುದು ಸರಿಯಲ್ಲ. ನಿಮ್ಮ ಮಾತನ್ನು ವಾಪಸ್ ತಗೊಳ್ಳಿ. ವಾನಿರ್ಂಗ್ ಕೊಡೊ ಮಟ್ಟಕ್ಕೆ ಹೋಗಬೇಡಿ.
ಅವರಿಲ್ಲದೇ ಇರಬಹುದು ಕೋಟ್ಯಾಂತರ ಮಕ್ಕಳನ್ನು ಬಿಟ್ಟು ಹೋಗಿದ್ದಾರೆ ಎಂದು ತೆಲುಗು ನಟನ ಮೇಲೆ ಕಿಚ್ಚ ಗರಂ ಆಗಿದ್ದಾರೆ.
ಇನ್ನು ಪುನೀತ್ ರಾಜ್ ಕುಮಾರ್ ಕೂಡ ಟ್ವೀಟ್ ಮೂಲಕ ಕಿಡಿಕಾರಿದ್ದು, ನಮ್ಮ ನಾಡಿನ ಮೇರು ನಟರಲ್ಲಿ ಒಬ್ಬರಾದ ವಿಷ್ಣು ಸರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಆ ಕಲಾವಿದ ಕ್ಷಮೆ ಕೇಳಿ ತನ್ನ ಮಾತುಗಳನ್ನ ಹಿಂಪಡಿಯಬೇಕು.
ಭಾರತೀಯ ಚಿತ್ರರಂಗ ನಮ್ಮ ಮನೆ ಎಲ್ಲ ಕಲಾವಿದರು ಒಂದು ಕುಟುಂಬ ಇದ್ದ ಹಾಗೆ, ಕಲೆಗೆ ಕಲಾವಿದರಿಗೆ ಗೌರವಿಸೋದು ನಮ್ಮ ಕರ್ತವ್ಯ.
ಅಯ್ಯೋ ಮದುವೆಯಾಗಿ ತಪ್ಪು ಮಾಡಿದೆ… ನಾನು ದಿವಾಳೆಯಾದೆ : ರಾಖಿ ಸಾವಂತ್
“ಮೊದಲು ಮಾನವನಾಗು” ಒಬ್ಬ ಕಲಾವಿದನಾಗಬೇಕಾದರೆ ಅವನಿಗಿರಬೇಕಾದ ಮೊದಲ ಅರ್ಹತೆ ತನ್ನ ಸಹದ್ಯೋಗಿ ಕಲಾವಿದರ ಬಗ್ಗೆ ಗೌರವ ಹಾಗೂ ಪ್ರೀತಿಯನ್ನು ತೋರುವುದು ಯಾವುದೇ ಭಾಷೆಯ ನಟರಾದರು ಗೌರವ ಮೊದಲು ಅಂತ ಬರೆದುಕೊಂಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









