ಬೆಂಗಳೂರು : ಅಭಿನಯ ಚಕ್ರವರ್ತಿ, ಅಭಿಮಾನಿಗಳ ಅಭಿಮಾನಿ ಕಿಚ್ಚ ಸುದೀಪ್, ತಮ್ಮ ಆಪ್ತ ಸಹಾಯಕರೊಬ್ಬರ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಕೋರುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆಕ್ಟೀವ್ ಆಗಿರುವ ಸುದೀಪ್, ತಮ್ಮ ಆಪ್ತ ಸಹಾಯಕ ಮಹದೇವ್ ಅವರ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಕೋರಿದ್ದಾರೆ. ಮೇ 31ರಂದು ಮಹದೇವ್ ಬರ್ತ್ ಡೇ ಇತ್ತು. ಅಂದು ಸುದೀಪ್ ಪಿಯಾನೋ ನುಡಿಸುವ ಮೂಲಕ ಮಹದೇವ್ ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಈ ವಿಡಿಯೋವನ್ನು ಸುದೀಪ್ ಟ್ವಿಟ್ಟರಿನಲ್ಲಿ ಶೇರ್ ಮಾಡಿಕೊಂಡಿದ್ದು, ಈಗ ಭಾರಿ ವೈರಲ್ ಆಗುತ್ತಿದೆ.
Also,,,,,Happy returns to all my frnzz who are celebrating their b’days today.
Stay blessed.🤗🤗
And pls pls be extra cautious frm today as this unlocking wil also be unlocking many gates for covid to get closer to everyone.#ExtraMeasurementExtraSafety.
Luv you all. pic.twitter.com/2TxGUEH9Oo— Kichcha Sudeepa (@KicchaSudeep) June 1, 2020
ಮೊದಲಿಗೆ ವಿಡಿಯೋದಲ್ಲಿ ಸುದೀಪ್, ಕೀಬೋರ್ಡ್ ನಲ್ಲಿ ‘ಹ್ಯಾಪಿ ಬರ್ತ್ ಡೇ ಟೂ ಯೂ’ ಟ್ಯೂನ್ ನುಡಿಸಿದ್ದಾರೆ. ಈ ವೇಳೆ ಸುದೀಪ್ ಪಕ್ಕದಲ್ಲಿಯೇ ಮಹದೇವ್ ನಿಂತಿರುವುದನ್ನು ಕಾಣಬಹುದಾಗಿದೆ. ಕೀ ಬೋರ್ಡ್ ನುಡಿಸಿದ ಬಳಿಕ ಸುದೀಪ್, ‘ಹ್ಯಾಪಿ ಬರ್ತ್ ಡೇ ಮಹದೇವ್’ ಎಂದು ಅವರನ್ನು ಶುಭಾಶಯ ಕೋರಿದ್ದಾರೆ.








