ಅಭಿಮಾನಿ ತಾಯಿಯ ಆಸ್ಪತ್ರೆ ಬಿಲ್ ಪಾವತಿಸಿದ ಕಿಚ್ಚ ಸುದೀಪ್..!
ಬೆಂಗಳೂರು: ಕಿಚ್ಚ ಸುದೀಪ್ ಅವರ ಮಾನವೀಯ ಗುಣ, ಸಮಾಜ ಸೇವೆ ಎಂಥಹದ್ದು ಎಂದು ಎಲ್ಲರಿಗೂ ಗೊತ್ತೇ ಇದೆ. ಕಷ್ಟ ಎಂವರಿಗೆ ಕಿಚ್ಚ ಸುದೀಪ್ ಸದಾ ನೆರವಾಗ್ತಾರೆ. ಅದ್ರಂತೆ ಇತ್ತೀಚೆಗೆ ಅಭಿಮಾನಿಯೊಬ್ಬರಿಗೆ ಸುದೀಪ್ ನೆರವಾಗಿದ್ದಾರೆ.
ಅಭಿಮಾನಿಯೊಬ್ಬರ ತಾಯಿ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ತಾಯಿಯ ಆಸ್ಪತ್ರೆ ಬಿಲ್ ಭರಿಸಲು ಶಕ್ತಿಯಿಲ್ಲದೇ ಕಿಚ್ಚನ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬಿಲ್ ಸಮೇತ ಪ್ರಕಟಿಸಿ ಸಹಾಯಕ್ಕೆ ಮೊರೆ ಇಟ್ಟಿದ್ದರು.
ಇದಾದ ಕೆಲವೇ ನಿಮಿಷಗಳಲ್ಲಿ ಆಸ್ಪತ್ರೆಯಿಂದ ಅಭಿಮಾನಿಗೆ ಆಸ್ಪತ್ರೆ ಬಿಲ್ ಪಾವತಿಯಾದ ವಿವರ ಸಿಕ್ಕಿದೆ. ಈ ಬಗ್ಗೆ ಆಸ್ಪತ್ರೆಯನ್ನು ವಿಚಾರಿಸಿದಾಗ ಸ್ವತಃ ಕಿಚ್ಚ ಸುದೀಪ್ ಬಿಲ್ ಪಾವತಿ ಮಾಡಿರುವುದಾಗಿ ತಿಳಿದುಬಂದಿದೆ. ಹೀಗೆ ಕಿಚ್ಚ ಸುದೀಪ್ ಸದ್ದಿಲ್ಲದೇ ಸಹಾಯ ಮಾಡಿದ್ದು ರಿಯಲ್ ಹೀರೋ ಎನಿಸಿಕೊಂಡಿದ್ದಾರೆ.
‘ರಾಮಾಯಣ’ ದಿಂದ ‘ಕ್ರಿಶ್’ ಗೆ ಔಟ್..! ಹೃತಿಕ್ ಜಾಗಕ್ಕೆ ‘ಟಾಲಿವುಡ್ ಪ್ರಿನ್ಸ್’..!
‘ವಕೀಲ್ ಸಾಬ್’ ಮುಂದೆ ‘ಬಾಹುಬಲಿ’ಯ ರೆಕಾರ್ಡ್ ಪೀಸ್ ಪೀಸ್..!
ದಿ ಬಿಗ್ ಬುಲ್ ನಲ್ಲಿ ಹರ್ಷ ಮೆಹ್ತಾವನ್ನು ವೈಟ್ವಾಶ್ ಮಾಡಲು ಯಾವುದೇ ಪ್ರಯತ್ನವಿಲ್ಲ – ಅಭಿಷೇಕ್ ಬಚ್ಚನ್