ದ್ರಾವಿಡ್ ಜೀವನಾಧಾರಿತ ಸಿನಿಮಾದಲ್ಲಿ ಕಿಚ್ಚ ಸುದೀಪ್..!
ಭಾರತೀಯ ಕ್ರಿಕೆಟ್ ದಿಗ್ಗಜರ ಪೈಕಿ ಒಬ್ರು ನಮ್ಮ ಕನ್ನಡದ ರಾಹುಲ್ ದ್ರಾವಿಡ್.. ಪ್ರಸ್ತುತ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ , ಕ್ರಿಕೆಟ್ ಆಟಗಾರರಿಗೆ ಮಾರ್ಗದರ್ಶಕರಾಗಿರುವ ಇವರು , ಅನೇಕ ಕ್ರಿಕೆಟ್ ಅಭಿಮಾನಿಗಳ ಪಾಲಿನ ಆರಾಧ್ಯ ದೈವವೂ ಆಗಿದ್ದಾರೆ..
ಅಂದ್ಹಾಗೆ ಕ್ರಿಕೆಟ್ ನ ದಂಥಕತೆಯಾಗಿರುವ ರಾಹುಲ್ ದ್ರಾವಿಡ್ ಅವರ ಜೀವನಾಧಾರಿತ ಸಿನಿಮಾ ಮೂಡಿಬರುತ್ತಾ ಅನ್ನೋ ಪ್ರಶ್ನೆ ಎದ್ದಿದೆ.. ಅದ್ರಲ್ಲೂ ಈ ಸಿನಿಮಾದಲ್ಲಿ ಕಿಚ್ಚ ಸುದೀಪ ಅಭಿನಯಿಸಲಿದ್ದಾರಾ ಅನ್ನೋ ಚರ್ಚೆ ಆರಂಭವಾಗಿದೆ.. ಅವರು ದ್ರಾವಿಡ್ ಬಯೋಪಿಕ್ ನಲ್ಲಿ ಅಭಿನಯಿಸಬೇಕೆಂಬ ಆಸೆಯೂ ವ್ಯಕ್ತವಾಗಿದೆ..
ಪ್ರಸ್ತುತ ದೇಶದಲ್ಲಿ ಬಯೋಪಿಕ್ ಮೇನಿಯಾ ಇದೆ.. ಅದಕ್ಕೆ ತಾಜಾ ಉದಾಹರಣೆ ಅಂದ್ರೆ ಕಪಿಲ್ ದೇವ್ ಅವರ ಬಯೋಪಿಕ್ ಸಿನಿಮಾ ‘83’.. ರಣವೀರ್ ಸಿಂಗ್ ನಟನೆಯ ಈ ಸಿನಿಮಾ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ.. ’83’ ಸಿನಿಮಾಕ್ಕೆ ಕನ್ನಡದಲ್ಲಿ ಸುದೀಪ್ ಬೆಂಬಲ ದೊರಕಿದ್ದು, ನಿನ್ನೆಯಷ್ಟೆ ಸಿನಿಮಾದ ಪ್ರಚಾರ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದಿದೆ. ಕಾರ್ಯಕ್ರಮದಲ್ಲಿ ನಟ ರಣ್ವೀರ್ ಸಿಂಗ್, ಕ್ರಿಕೆಟ್ ಕಪಿಲ್ ದೇವ್, ಕೃಷ್ಣಮಾಚಾರಿ ಶ್ರೀಕಾಂತ್, ನಿರ್ದೇಶಕ ಕಬೀರ್ ಸಿಂಗ್ ಹಾಗೂ ನಟ ಸುದೀಪ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕನ್ನಡಿಗ ಕ್ರಿಕೆಟಿಗ ರಾಹುಲ್ ದ್ರಾವಿಡ್ ವಿಷಯವೂ ಚರ್ಚೆಗೆ ಬಂತು. ಲೆಜೆಂಡ್ ಕ್ರಿಕೆಟಿಗ ರಾಹುಲ್ ದ್ರಾವಿಡ್ ಜೀವನ ಸಿನಿಮಾ ಆಗಬೇಕು ಎಂಬ ಇಂಗಿತವೂ ವ್ಯಕ್ತವಾಗಿತ್ತು.. ಅಲ್ಲದೇ ಅದರಲ್ಲಿ ಸುದೀಪ್ ಅವರು ರಾಹುಲ್ ದ್ರಾವಿಡ್ ಪಾತ್ರ ಮಾಡಬೇಕೆಂಬ ಇಚ್ಛೆ ವ್ಯಕ್ತಪಡಿಸಿದರು. ಅದಕ್ಕೆ ಉತ್ತರಿಸಿದ ನಟ ಸುದೀಪ್, ‘ನಾನು ನಟಿಸಲು ತಯಾರಿದ್ದೀನಿ, ನಿರ್ದೇಶಕ ಕಬೀರ್ ಸಿಂಗ್ ಇಲ್ಲಿಯೇ ಇದ್ದಾರೆ. ನೀವು ನೇರವಾಗಿ ಅವರನ್ನೇ ಕೇಳಿ ಬಿಡಿ ನಾನಂತೂ ನಟಿಸಲು ತಯಾರಾಗಿದ್ದೀನಿ’ ಎಂದರು.
ಅದಕ್ಕೆ ಉತ್ತರಿಸಿದ ಕಬೀರ್ ಸಿಂಗ್, ‘ಹಕ್ಕು ತಂದುಕೊಟ್ಟರೆ ಖಂಡಿತವಾಗಿಯೂ ರಾಹುಲ್ ದ್ರಾವಿಡ್ ಜೀವನದ ಬಗ್ಗೆ ಸಿನಿಮಾ ಮಾಡುತ್ತೇನೆ’ ಎಂದಿದ್ದಾರೆ. ಕೂಡಲೇ ಮಾತನಾಡಿದ ನಟ ರಣ್ವೀರ್ ಸಿಂಗ್, ಅದ್ಭುತ, ನಿರ್ದೇಶಕ ಇಲ್ಲಿಯೇ ಇದ್ದಾರೆ, ನಿರ್ಮಾಪಕ ಇಲ್ಲಿಯೇ ಇದ್ದಾರೆ. ನಟ ಇಲ್ಲಿಯೇ ಇದ್ದಾರೆ. ಎಲ್ಲರೂ ಒಪ್ಪಿಕೊಂಡು ಆಗಿದೆ. ನಾನು ಈ ಸಿನಿಮಾದಲ್ಲಿ ಯಾವ ಪಾತ್ರ ಮಾಡಬಹುದು, ಎಂದಿದ್ದಾರೆ.
ಬಳಿಕ ಮಾತನಾಡಿರೋ ಸುದೀಪ್, ‘ನೀವು ನಮ್ಮ ಸಿನಿಮಾವನ್ನು ಮುಂಬೈನಲ್ಲಿ ಪ್ರೆಸೆಂಟ್ ಮಾಡಿ ಕೊಡಿ ಸರ್,’ ಎಂದಿದ್ದಾರೆ. ಇದಕ್ಕೆ ಒಪ್ಪಿಕೊಂಡ ರಣ್ವೀರ್ ಸಿಂಗ್ ಜೋರಾಗಿ ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದಾರೆ. ’83’ ಸಿನಿಮಾವು ಡಿಸೆಂಬರ್ 24 ರಂದು ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದ್ದು, ಸಿನಿಮಾವನ್ನು ಕರ್ನಾಟಕದಲ್ಲಿ ನಟ ಸುದೀಪ್ ಪ್ರೆಸೆಂಟ್ ಮಾಡುತ್ತಿದ್ದಾರೆ. ಸಿನಿಮಾದ ಹಂಚಿಕೆಯೂ ಅವರದ್ದೇ ಎನ್ನಲಾಗುತ್ತಿದೆ.








