‘83’ ಸಿನಿಮಾ ಜೊತೆ ಥಿಯೇಟರ್ ನಲ್ಲಿ ‘ವಿಕ್ರಾಂತ್ ರೋಣ’ನ ಗ್ಲಿಂಪ್ಸ್ 3Dಯಲ್ಲಿ ರಿಲೀಸ್
ಭಾರತ ತಂಡ ಮೊದಲ ವಿಶ್ವಪಕ್ ಗೆದ್ದ 1983 ರ ಐತಿಹಾಸಿಕ ಗೆಲುವು ಮತ್ತೆ ಕಪಿಲ್ ದೇವ್ ಜೀವನವನ್ನ ತೆರೆ ಮೇಲೆ ತೋರಿಸುತ್ತಿರುವ ಬಾಲಿವುಡ್ ನ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ “83” ಭಾರತದಾದ್ಯಂತ 5 ಭಾಷೆಗಳಲ್ಲಿ ರಿಲೀಸ್ ಆಗಿ ಧೂಳೆಬ್ಬಿಸುತ್ತಿದೆ.. ಧೂಳೆಬ್ಬಿಸಲಿದೆ..
ಅಂದ್ಹಾಗೆ ಕ್ರಿಕೆಟ್ ಲವರ್ ಕೂಡ ಆಗಿರುವ ಸ್ಯಾಂಡಲ್ ವುಡ್ ನ ಸ್ಟಾರ್ ನಟ ಕಿಚ್ಚು ಸುದೀಪ್ ಅವರು ಈ ಸಿನಿಮಾವನ್ನ ಬೆಂಗಳೂರಿನಲ್ಲಿ ಪ್ರಸ್ತುತ ಪಡಿಸಿರುವುದು ವಿಶೇಷ.. ಸಿನಿಮಾದ ಪ್ರಚಾರದಲ್ಲೂ ಭಾಗಿಯಾಗಿದ್ದರು.. ಆದ್ರೆ ಕಿಚ್ಚನ ಫ್ಯಾನ್ಸ್ ಗೆ ಇಲ್ಲೊಂದು ಭರ್ಜರಿ ಗುಡ್ ನ್ಯೂಸ್ ಇದೆ.. ಹೌದು.. ‘83’ ಸಿನಿಮಾದ ಜೊತೆಗೆ ಥಿಯೇಟರ್ ನಲ್ಲಿ ಕಿಚ್ಚನ ಬಹುನಿರೀಕ್ಷೆಯ ಸಿನಿಮಾ “ ವಿಕ್ರಾಂತ್ ರೋಣ”ನ ಗ್ಲಿಂಪ್ಸ್ ಕೂಡ ರಿಲೀಸ್ ಆಗಿದೆ. ಅದು ಕೂಡ 3Dಯಲ್ಲಿ ಅನ್ನೋದು ವಿಶೇಷ..
ವಿಕ್ರಾಂತ್ ರೋಣ ಒಂದು ಅಡ್ವೆಂಚರಸ್ ಫ್ಯಾಂಟಸಿ ಸಿನಿಮಾವಾಗಿದ್ದು , ಮತ್ತೊಂದು ಲೋಕಕ್ಕೆ ಕರೆದೊಯ್ಯುವ ಈ ಸಿನಿಮಾದ ಗ್ಲಿಂಪ್ಸ್ ನೋಡಿ ದೇಶಾದ್ಯಂತ ಜನ ಇದನ್ನ ಹಾಲಿವುಡ್ ಸಿನಿಮಾಗಳಿಗೆ ಹೋಲಿಸುತ್ತಿದ್ದಾರೆ.. ವಿಕ್ರಾಂತ್ ರೋಣ 2022ರ ಫೆಬ್ರವರಿ 24ರಂದು ಅದ್ದೂರಿಯಾಗಿ 3ಡಿ ಹಾಗೂ 2ಡಿ ತಂತ್ರಜ್ಞಾನದಲ್ಲಿ ರಿಲೀಸ್ ಆಗಲಿದೆ.
ಸಿನಿಮಾ , ರಾಜ್ಯ , ದೇಶ , ವಿದೇಶ, ಕ್ರೀಡೆ , ಇತ್ತೀಚೆಗಿನ ಸುದ್ದಿಗಳ ಅಪ್ ಡೇಟ್ಸ್ ಗಾಗಿ ಸಾಕ್ಷಾ ಟಿವಿ ಫಾಲೋ ಮಾಡಿ








