Kichcha Sudeep | ಅಭಿನಯ ಚಕ್ರವರ್ತಿಗೆ ಕರುನಾಡ ಚಕ್ರವರ್ತಿ ಸರ್ಪ್ರೈಸ್
ವಿಕ್ರಾಂತ್ ರೋಣ ಸಿನಿಮಾದ ಸೂಪರ್ ಸಕ್ಸಸ್ ನಂತರ ಕಿಚ್ಚ ಸುದೀಪ್ ಬರ್ತ್ ಡೇ ಸಂಭ್ರಮಕ್ಕೆ ಕೌಂಟ್ ಡೌನ್ ಶುರುವಾಗಿದೆ.
ಈ ನಡುವೆ ಅಭಿನಯ ಚಕ್ರವರ್ತಿ ಬಾದ್ ಶಾ ಕಿಚ್ಚ ಸುದೀಪ್ ಗೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಸರ್ಪ್ರೈಸ್ ನೀಡಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು ಸುದೀಪ್ ಬರ್ತ್ ಡೇ ಗೆ ಕಾಮನ್ ಡಿಪಿ ಅನಾವರಣ ಮಾಡಿದ್ದಾರೆ.
ಸೆಪ್ಟೆಂಬರ್ 2 ಕಿಚ್ಚನ ಹುಟ್ಟುಹಬ್ಬವಾಗಿದ್ದು, ಇದನ್ನ ಸುದೀಪಿಯನ್ಸ್ ಹಬ್ಬದಂತೆ ಆಚರಿಸುತ್ತಾರೆ.

ಅವರು 49ನೇ ವರ್ಷಕ್ಕೆ ಕಾಲಿಡುತ್ತಿದ್ದು, ಸುದೀಪ್ ಹೊಸ ಸಿನಿಮಾದ ಅಪ್ ಡೇಟ್ ನೀಡುವ ಸಾಧ್ಯತೆಗಳಿವೆ.
ಅಂದಹಾಗೆ ಕಿಚ್ಚ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಸೂಪರ್ ಹಿಟ್ ಆಗಿದೆ.
ಈ ಸಕ್ಸಸ್ ಜೊತೆಗೆ ಕಿಚ್ಚನ ಹುಟ್ಟುಹಬ್ಬ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ಕೊಟ್ಟಿದೆ.
ಇನ್ನು ಕಿಚ್ಚನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡಲು ಅಭಿಮಾನಿಗಳು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ.







