Kichcha Sudeepa : ಕ್ರಾಂತಿ ಪ್ರಚಾರದ ವೇಳೆ ಚಪ್ಪಲಿ ಎಸೆದ ಪ್ರಕರಣ – ದರ್ಶನ್ ಪರ ಸುದೀಪ್ ಪೋಸ್ಟ್
ಇತ್ತೀಚೆಗೆ ಕ್ರಾಂತಿ ಸಿನಿಮಾದ ಹಾಡು ರಿಲೀಸ್ ಗಾಗಿ ಬಳ್ಳಾರಿಗೆ ಸಿನಿಮಾತಂಡ ತೆರಳಿತ್ತು.. ಈ ವೇಳೆ ದರ್ಶನ್ ಮೇಲೆ ಕಿಡಿಗೇಡಿಯೋರ್ವ ಚಪ್ಪಲಿ ಎಸೆದ ಘಟನೆ ನಡೆದಿತ್ತು.. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿ ವೈರಲ್ ಕೂಡ ಆಗಿತ್ತು..
ಇದ್ರಿಂದಾಗಿ ದರ್ಶನ್ ಅಭಿಮಾಣಿಗಳು ತೀವ್ರ ಾಕ್ರೋಶಗೊಂಡಿದ್ದಾರೆ.. ಇತ್ತ ಸೆಲೆಬ್ರಟಿಗಳು ಸಹ ದರ್ಶನ್ ಪರ ನಿಂತಿದ್ದಾರೆ..
ವಿಶೇಷ ಅಂದ್ರೆ ಕಿಚ್ಚ ಸುದೀಪ್ ಅವರು ಸುಧೀರ್ಘವಾದ ಪತ್ರ ಬರೆದು ಈ ಬಗ್ಗೆ ಮಾತನಾಡಿದ್ದಾರೆ.. ಈ ಪೋಸ್ಟ್ ಈಗ ಭಾರೀ ವೈರಲ್ ಆಗ್ತಿದೆ..
“ ಬೇಸರ, ಅಸಮಾಧಾನ ಇರಬಹುದು. ಆದರೆ ಇಂತಹ ಪ್ರತಿಕ್ರಿಯೆ ನೀಡುವುದನ್ನು ಸ್ವತಃ ಪುನೀತ್ ಅವರೇ ಪ್ರೋತ್ಸಾಹಿಸುತ್ತಿದ್ದರೇ, ಪುನೀತ್ ಹೇಗಿದ್ದರು, ಅವರು ಹೇಗೆ ಬಾಳಿ ಬದುಕಿದ್ದರು ಎಂದು ಅವರ ಅಭಿಮಾನಿಗಳಿಗೆ ಚೆನ್ನಾಗಿ ಗೊತ್ತಿದೆ ಎಂದು ಭಾವಿಸುತ್ತೇನೆ.
ತುಂಬಿದ ಜನರ ಮಧ್ಯೆ ಒಬ್ಬರ ಕ್ಷುಲ್ಲಕ ನಡವಳಿಕೆ ಇಡೀ ವ್ಯವಸ್ಥೆಯನ್ನು ಹಾಳು ಮಾಡಬಾರದು, ಪ್ರೀತಿ, ಗೌರವ ಮತ್ತು ಘಟನೆಯನ್ನು ಎತ್ತಿ ತೋರಿಸುವ ಪುನೀತ್ ಅಭಿಮಾನಿಗಳು ಅದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರಬಹುದು.
ದರ್ಶನ್ ಚಿತ್ರೋದ್ಯಮಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ನಮ್ಮ ನಡುವೆ ಭಿನ್ನಾಭಿಪ್ರಾಯವಿದೆ ಎಂದಾಕ್ಷಣ ನನ್ನ ಮನಸ್ಸಿಗೆ ತಟ್ಟಿದ ವಾಸ್ತವ ವಿಷಯಗಳ ಬಗ್ಗೆ ಮಾತನಾಡುವುದನ್ನು ನಾನೆಂದಿಗೂ ನಿಲ್ಲಿಸುವುದಿಲ್ಲ. ಚಪ್ಪಲಿ ಎಸೆಯುವಂತಹ ಕೃತ್ಯಗಳಿಗೆ ಖಂಡಿತಾ ದರ್ಶನ್ ಅರ್ಹರಲ್ಲ, ಈ ಘಟನೆ ನನ್ನ ಮನಸ್ಸನ್ನು ಘಾಸಿಗೊಳಿಸಿದೆ.
ಕನ್ನಡ ಚಿತ್ರರಂಗ, ಈ ನಾಡಿನ ಜನರು ಉತ್ತಮ ನಡವಳಿಕೆಗೆ ಹೆಸರಾಗಿದೆ. ಭಾರತದಲ್ಲಿ ಕರ್ನಾಟಕ ಸಂಸ್ಕೃತಿಯಲ್ಲಿ ಎತ್ತರದ ಸ್ಥಾನದಲ್ಲಿ ನಿಲ್ಲುತ್ತದೆ. ಹೀಗಿರುವಾಗ ನಾವು ಖಂಡಿತಾ ಇಂತಹ ಸಂದೇಶ ಹರಡಬಾರದು. ಪರಿಸ್ಥಿತಿಗೆ ಈ ರೀತಿ ಉದ್ರೇಕದಿಂದ ಕ್ರೋಧದಿಂದ ವರ್ತಿಸುವುದು ಖಂಡಿತಾ ಉತ್ತರವಲ್ಲ.
ನಟರು, ಅವರ ಅಭಿಮಾನಿಗಳ ಮಧ್ಯೆ ಭಿನ್ನಾಭಿಪ್ರಾಯಗಳಿರಬಹುದು, ಅದರ ಬಗ್ಗೆ ಮಾತನಾಡಲು ನಾನು ಯಾರೂ ಅಲ್ಲ, ಆದರೆ ನಾನು ದರ್ಶನ್ ಮತ್ತು ಪುನೀತ್ ಅವರಿಗೆ ಆಪ್ತನಾಗಿದ್ದವನು, ಅವರ ಜೀವನದಲ್ಲಿ ಹೊಂದಿದ್ದ ಸ್ಥಾನದಿಂದ ಇಂದು ನಾನು ಈ ರೀತಿ ನನ್ನ ಭಾವನೆಗಳನ್ನು ಬರೆಯಲು ಅರ್ಹನಾಗಿದ್ದೇನೆ ಎಂದು ಭಾವಿಸುತ್ತೇನೆ.
ಅಗತ್ಯಕ್ಕಿಂತ ಹೆಚ್ಚು ಮಾತನಾಡಿದ್ದರೆ ನನ್ನನ್ನು ಕ್ಷಮಿಸಿ, ಈ ಚಿತ್ರರಂಗದಲ್ಲಿ 27 ವರ್ಷಗಳಿಂದ ಪ್ರಯಾಣ ಮಾಡುತ್ತಿರುವ ನಾನು ಒಂದು ವಿಷಯವನ್ನಂತೂ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ. ಯಾವುದೂ, ಯಾರೂ ಕೂಡ ಶಾಶ್ವತವಲ್ಲ, ಇರುವಷ್ಟು ದಿನ ಪ್ರೀತಿ, ಗೌರವವನ್ನು ಹಂಚಿ ಬೇರೆಯವರಿಂದ ಅದನ್ನು ಪಡೆಯೋಣ. ಇದೊಂದೇ ಕೊನೆಯವರೆಗೂ ಇರುವುದು, ಗೆಲ್ಲುವುದು ಮತ್ತು ಪರಿಸ್ಥಿತಿಯನ್ನು ಗೆಲ್ಲಿಸುವುದು” ಎಂದಿದ್ದಾರೆ..
❤️🙏🏼 pic.twitter.com/PbR5RzCLTn
— Kichcha Sudeepa (@KicchaSudeep) December 20, 2022








