ಉಡುಪಿ: 2,500 ರೂಪಾಯಿ ಬಾಕಿ ಹಣಕ್ಕಾಗಿ ಸ್ನೇಹಿತನನ್ನೇ ಬಾವಿಗೆ ತಳ್ಳಿ ಹತ್ಯೆಗೈದ ಘಟನೆ ಉಡುಪಿಯ ಮಂದಾರ್ತಿ ಸಮೀಪದ ಹೆಗ್ಗುಂಜೆ ಗ್ರಾಮದ ಪಡುಕೋಮೆ ನಿರ್ಜೆಡ್ಡುವಿನಲ್ಲಿ ನಡೆದಿದೆ. 21 ವರ್ಷದ ಮನೋಜ್ ಮೃತ ಯುವಕನಾಗಿದ್ದು, ಆರೋಪಿ ಸುನಿಲ್ ಶೆಟ್ಟಿ ತಲೆಮರೆಸಿಕೊಂಡಿದ್ದಾನೆ. 2 ವರ್ಷಗಳ ಹಿಂದೆ ಮನೋಜ್, ಸುನಿಲ್ನಿಂದ 2,500 ರೂಪಾಯಿ ಹಣ ಪಡೆದಿದ್ದು ಅದನ್ನು ವಾಪಾಸ್ ಮಾಡಿರಲಿಲ್ಲ. ಫೋನ್ ಮಾಡಿದರೂ ಉತ್ತರಿಸುವುದಿಲ್ಲ ಎಂಬ ಕಾರಣಕ್ಕಾಗಿ ಮನೋಜ್ ಮನೆಯವರ ಜೊತೆ ಸುನಿಲ್ ಗಲಾಟೆ ಮಾಡಿದ್ದಾನೆ. ಈ ಸಂದರ್ಭದಲ್ಲಿ ಮನೆಯೊಳಗೆ ಮಲಗಿದ್ದ ಮನೋಜ್ ಹೊರಗೆ ಬಂದು ಹಣ ನೀಡುವುದಾಗಿ ಹೇಳಿ, ಹಲ್ಲು ಉಜ್ಜಲೆಂದು ಬಾವಿ ಕಟ್ಟೆಗೆ ಹೋಗಿದ್ದಾನೆ. ಈ ವೇಳೆ ಸುನಿಲ್ ಶೆಟ್ಟಿ ಕೂಡಾ ಬಾವಿಯ ಬಳಿಗೆ ಹೋಗಿದ್ದಾನೆ. ಆದ್ರೆ ಸ್ವಲ್ಪ ಹೊತ್ತಿನಲ್ಲೇ ಸುನಿಲ್ ಶೆಟ್ಟಿ, ಮನೋಜ್ ತಾಯಿ ರಾಧಾಬಾಯಿಗೆ ನಿಮ್ಮ ಪುತ್ರ ಬಾವಿಗೆ ಬಿದ್ದಿದ್ದಾನೆ ಎಂದು ಹೇಳಿ ಅಲ್ಲಿಂದ ಓಡಿ ಹೋಗಿದ್ದಾನೆ ಎಂದು ಹೇಳಲಾಗುತ್ತಿದೆ. ಇನ್ನು ಸುನಿಲ್ ಶೆಟ್ಟಿಯೇ ನನ್ನ ಮಗನನ್ನು ಬಾವಿಗೆ ದೂಡಿ ಹತ್ಯೆ ಮಾಡಿದ್ದಾನೆ ಎಂದು ರಾಧಾಬಾಯಿ ಬ್ರಹ್ಮಾವರ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ದೂರು ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಸುನಿಲ್ ಶೆಟ್ಟಿಗಾಗಿ ಬಲೆ ಬೀಸಿದ್ದಾರೆ.
ಸ್ವಂತ ದುಡ್ಡಲ್ಲಿ ಫಾರಿನ್ ಟ್ರಿಪ್ ಹೋದ್ರೆ ತಪ್ಪೇನು? ವಿಪಕ್ಷಗಳ ಬಾಯಿ ಮುಚ್ಚಿಸಿದ ಯತೀಂದ್ರ ಸಿದ್ದರಾಮಯ್ಯ
ಬೆಂಗಳೂರು/ಮೈಸೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಪ್ರಮುಖ ಶಾಸಕರು ಹಾಗೂ ಸಚಿವರುಗಳ ತಂಡ ವಿದೇಶ ಪ್ರವಾಸ ಕೈಗೊಂಡಿರುವುದು ರಾಜಕೀಯ ವಲಯದಲ್ಲಿ ಭಾರೀ...








