ಇಡೀ ವಿಶ್ವವನ್ನು ತೀವ್ರ ಆತಂಕದ ಕೂಪಕ್ಕೆ ತಳ್ಳಿ ಚೀನಾವನ್ನು ಅಲ್ಲೋಲ-ಕಲ್ಲೋಲ ಮಾಡಿರುವ ಮಾರಕ ಕೊರೋನಾ ವೈರಸ್ ನ ಹಾವಳಿಗೆ ಬಲಿಯಾದವರ ಸಂಖ್ಯೆ 1,200ಕ್ಕೇರಿದೆ. ಅಲ್ಲದೆ, ಸುಮಾರು 45,000 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಎಲ್ಲಾ ಲಕ್ಷಣಗಳು ಸ್ಪಷ್ಟವಾಗಿ ಕಾಣುತ್ತಿವೆ.
ಕೊರೋನಾ ಮೃತ್ಯಕೋಟೆಯ ಕೇಂದ್ರ ಬಿಂದುವಾದ ಹುಬೇ, ವುಹಾನ ಪ್ರಾಂತ್ಯದಲ್ಲಿ ಸಾವಿನ ವೇಗ ಮತ್ತಷ್ಟು ಹೆಚ್ಚಿದೆ. ಒಂದು ದಿನದಲ್ಲೇ 94 ಮಂದಿ ಬಲಿಯಾಗಿದ್ದು, ಪ್ರತಿದಿನ ಸಾಯುವವರ ಸಂಖ್ಯೆ ಹೆಚ್ಚುತ್ತಿದೆ. ಈ ಮಾರಕ ಪಿಡುಗಿಗೆ ಒಳಗಾದವರ ಸಂಖ್ಯೆ 45,000ಕ್ಕೂ ಮಿಗಿಲಾಗಿದ್ದು ಜನರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದೆ. ಇನ್ನೂ ವಿಶ್ವ ಸಂಸ್ಥೆ ಆತಂಕ ವ್ಯಕ್ತಪಡಿಸಿದ್ದು, ಪರಿಸ್ಥಿತಿ ಅಧ್ಯಯನಕ್ಕಾಗಿ ನಿಯೋಗವೊಂದನ್ನು ಚೀನಾಗೆ ಕಳಿಸುವ ನಿರ್ಧಾರ ಮಾಡಿದೆ. ಅಷ್ಟೇ ಅಲ್ಲದೆ ಇನ್ನೂ 18 ತಿಂಗಳು ಕೊರೋನಾ ವೈರಸ್ ಗೆ ಔಷಧಿ ಕಂಡುಹಿಡಿಯಲು ಸಮಯ ಬೇಕಾಗುತ್ತದೆ ಎಂಬ ಆತಂಕದ ವಿಚಾರವನ್ನು ಹೊರಹಾಕಿದೆ.