‘ಕಿಮ್ ಸಮ್ರಾಜ್ಯ’ದಲ್ಲಿ ಆಹಾರ ಸಮಸ್ಯೆ : ಬಾಳೆಹಣ್ಣಿಗೆ 3,336 ರೂ., ಬ್ಲಾಕ್ ಟೀ ಬೆಲೆ 5,167 ರೂ.
ಉತ್ತರಕೊರಿಯಾ : ಉತ್ತರ ಕೊರಿಯಾ ಸದ್ಯ ತೀರಾ ಆರ್ಥಿಕ ಸಂಕಷ್ಟದಲ್ಲಿದೆ.. ಈ ಬಗ್ಗೆ ಹಲವು ದಿನಗಳ ಹಿಂದೆ ಖುದ್ದು ಅಲ್ಲಿನ ಹುಚ್ಚು ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರೇ ಹೇಳಿಕೊಂಡಿದ್ದರು ಕೂಡ.. ಸದಾ ನ್ಯೂಕ್ಲಿಯರ ಬಾಂಬ್ ಗಳನ್ನ ತಯಾರು ಮಾಡಿ ಬೇರೆ ದೇಶಗಳನ್ನ ಹೆದರಿಸಿಕೊಂಡು ತಿರುಗುವ ಕಿಮ್ ತಮ್ಮದೇ ಪ್ರಜೆಗಳ ಸ್ವಾತಂತ್ರ್ಯವನ್ನ ಕಿತ್ತುಕೊಂಡಿದ್ದು, ಅಲ್ಲಿನ ಜನರ ಜೀವನವನ್ನ ಹೀನಾಯವಾಗಿಸಿದ್ದಾರೆ..
ಇದೀಗ ಉತ್ತರ ಕೊರಿಯಾದಲ್ಲಿ ಈಗ ಭಾರೀ ಆಹಾರ ಸಮಸ್ಯೆ ಎದುರಾಗಿದೆ. ಬ್ಲಾಕ್ ಟೀ ಪ್ಯಾಕೆಟ್ ಬೆಲೆ 5,167 ರೂಪಾಯಿ ಆಗಿದ್ದರೆ ಒಂದು ಕೆಜಿ ಬಾಳೆಹಣ್ಣಿನ ಬೆಲೆ 3,336 ರೂ.ಗೆ ಏರಿಕೆಯಾಗಿದೆ. ಇತ್ತೀಚೆಗೆ ಆರ್ಥಿಕ ಬಿಕ್ಕಟ್ಟಿನಲ್ಲಿರುವ ದೇಶವನ್ನ ಪಾರು ಮಾಡುವುದಾಗಿ ಕಿಮ್ ಜಾಂಗ್ ಉನ್ ಪ್ರಮಾಣ ಮಾಡಿದ್ದರು. ಪಕ್ಷವು ಜತೆಯಾಗಿ ಆರ್ಥಿಕ ಬಿಕ್ಕಟ್ಟು ಎದುರಿಸಲಿದೆ. ಕ್ರಾಂತಿಯ ಹಾದಿಯಲ್ಲಿರುವ ತೊಂದರೆಗಳನ್ನು ನಾವು ಬಗೆಹರಿಸಲಿದ್ದೇವೆ ಎಂದು ಪಕ್ಷದ ಪರವಾಗಿ ಪ್ರತಿಜ್ಞೆ ಮಾಡುತ್ತೇನೆ ಎಂದು ಕಿಮ್ ಜಾಂಗ್ ಉನ್ ಹೇಳಿದ್ದರು.
ಈ ಪ್ರಪಂಚದ ನಕಲಿ ದೇಶ… ಇವರು ತಿನ್ನದೇ ಇರುವ ಜೀವಿ ಇಲ್ಲ.. ಕಾಪಿ ಮಾಡೋದ್ರಲ್ಲಿ ಈ ದೇಶ ಎಕ್ಸ್ ಪರ್ಟ್..!
ಮಿಲಿಟರಿಯಲ್ಲಿ ಪ್ರಭುತ್ವ ಸಾಧಿಸಲು ಅಣ್ವಸ್ತ್ರ ಮತ್ತು ಕ್ಷಿಪಣಿ ಪ್ರಯೋಗ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಹಲವು ದೇಶಗಳು ಉತ್ತರ ಕೊರಿಯಾ ಮೇಲೆ ನಿರ್ಬಂಧ ವಿಧಿಸಿದ್ದರಿಂದ ಮೊದಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿತ್ತು. ಈಗ ಕೋವಿಡ್‍ನಿಂದಾಗಿ ದೇಶದ ಗಡಿಯನ್ನು ಮುಚ್ಚಿದೆ. ರಫ್ತು ಮಾಡಲು ಉತ್ಪನ್ನಗಳ ಸಂಖ್ಯೆ ಕಡಿಮೆಯಾಗಿರುವ ಕಾರಣ ಆಮದು ಆಗುತ್ತಿಲ್ಲ. ಇದರಿಂದಾಗಿ ಆರ್ಥಿಕತೆಯ ಮೇಲೆ ಭಾರೀ ಹೊಡೆತ ಬಿದ್ದಿದೆ.
ಆಹಾರ ಉತ್ಪನ್ನವೇ ದುಬಾರಿಯಾಗಿರುವ ಕಾರಣ ರಸಗೊಬ್ಬರ ಆಮದು ಅಥವಾ ಖರೀದಿ ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೀಗಾಗಿ ರೈತರು ಪ್ರತಿನಿತ್ಯ ಕನಿಷ್ಠ 2 ಲೀಟರ್ ನಷ್ಟು ತಮ್ಮ ಮೂತ್ರಗಳನ್ನು ಸಂಗ್ರಹಿಸಿ ರಸಗೊಬ್ಬರ ಉತ್ಪಾದಿಸಲು ನೆರವಾಗಬೇಕು ಎಂದು ಆದೇಶಿಸಲಾಗಿದೆ.