ಕೊರೊನಾ ಸೊಂಕಿನ ಉಗಮ ಸ್ಥಾನವಾಗಿರುವ ಚೀನಾದಿಂದ ಉತ್ತರಕೊರಿಯಾ ಅದ್ಯಾವಾಗ ಮಾಂಸಾಹಾರವನ್ನು ಆಮದು ಮಾಡಿಕೊಳ್ಳುವುದನ್ನ ನಿಲ್ಲಿಸತೋ… ಆಗಲಿಂದಲೇ ಉತ್ತರಕೊರಿಯಾದಲ್ಲಿ ಮಾಂಸಾಹಾರಕ್ಕೆ ಹಾಹಾಕಾರ ಎದುರಾಗಿಬಿಟ್ಟಿದೆ. ಇತ್ತ ದೇಶದಲ್ಲಿ ಕೊರೊನಾ ಹಾವಳಿಯಿಂದಾಗಿ ಶೇ 90ರಷ್ಟು ಆಹಾರ ಪೂರೈಕೆಯೇ ನಿಂತು ಹೋಗಿದ್ದು, ದೇಶದ ಅರ್ಧಕ್ಕಿಂತ ಹೆಚ್ಚು ಜನರು ಆಹಾರಕ್ಕಾಗಿ ಪರದಾಡುವ ಸ್ಥಿತಿ ಬಂದೊದಗಿದೆ. ಈ ಸಮಸ್ಯೆಗೆ ಪರಿಹಾರ ಹುಡುಕಿರುವ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅದೆಂತಾ ನಿರ್ದಾರ ಕೈಗೊಂಡಿದ್ದಾರೆ ಅಂತೀರಾ..!
ಕಿಮ್ ಜಾಂಗ್ ಉನ್ ಯಾರಿಗೆ ತಾನೆ ಗೊತ್ತಿಲ್ಲ. ಇಡೀ ವಿಶ್ವಕ್ಕೆ ಕಿಮ್ ಜಾಂಗ್ ಉನ್ ನ ಕ್ರೂರತ್ವದ ಅರಿವಿದೆ. ಆದರೀಗ ಈತ ದೇಶದ ಸಾಕುನಾಯಿಗಳನ್ನೂ ಬಿಟ್ಟಿಲ್ಲ. ಹೌದು ಉತ್ತರಕೊರಿಯಾದಲ್ಲಿ ಬಂದೊದಗಿರುವ ಮಾಂಸಾಹಾರ ಕೊರತೆ ನಿವಾರಣೆಗೆ ಸಾಕುನಾಯಿಗಳನ್ನೇ ಬಳಸಿಕೊಳ್ಳುವಂತ ಆದೇಶ ಹೊರಡಿಸಲು ಕಿಮ್ ಸಜ್ಜಾಗಿರುವ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.
ಹೌದು ಕಿಮ್ ಜಾಂಗ್ ನೇತೃತ್ವದ ರಹಸ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆಯಂತೆ. ಶ್ರೀಮಂತರು ಹೊಂದಿರುವ ಸಾಕು ನಾಯಿಗಳನ್ನು ರೆಸ್ಟೋರೆಂಟ್‌ಗಳಿಗೆ ಬಿಟ್ಟು ಕೊಡಬೇಕು ಎಂದು ಆದೇಶಿಸಲಾಗಿದೆ ಎಂದು ಹೇಳಲಾಗುತ್ತಿದೆ.









