ಆರ್ಥಿಕ ಸಂಕಷ್ಟದಲ್ಲಿ ಉತ್ತರ ಕೊರಿಯಾ – ಸಮಸ್ಯೆಯಿಂದ ಹೊರತರುತ್ತೇವೆ ಎಂದ ಕಿಮ್…!
ಉತ್ತರ ಕೊರಿಯಾ : ಉತ್ತರ ಕೊರಿಯಾ ಸದ್ಯ ತೀರಾ ಆರ್ಥಿಕ ಸಂಕಷ್ಟದಲ್ಲಿದೆ.. ಈ ಬಗ್ಗೆ ಹಲವು ದಿನಗಳ ಹಿಂದೆ ಖುದ್ದು ಅಲ್ಲಿನ ಹುಚ್ಚು ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರೇ ಹೇಳಿಕೊಂಡಿದ್ದರು ಕೂಡ.. ಇದೀಗ ಈ ಬಿಕ್ಕಟ್ಟಿನಿಂದ ಪಾರು ಮಾಡುವುದಾಗಿ ಕಿಮ್ ಜಾಂಗ್ ಉನ್ ಅವರು ಪ್ರತಿಜ್ಞೆ ಮಾಡಿದ್ದಾರೆ.
ಸದಾ ನ್ಯೂಕ್ಲಿಯರ ಬಾಂಬ್ ಗಳನ್ನ ತಯಾರು ಮಾಡಿ ಬೇರೆ ದೇಶಗಳನ್ನ ಹೆದರಿಸಿಕೊಂಡು ತಿರುಗುವ ಕಿಮ್ ತಮ್ಮದೇ ಪ್ರಜೆಗಳ ಸ್ವಾತಂತ್ರ್ಯವನ್ನ ಕಿತ್ತುಕೊಂಡಿದ್ದು, ಅಲ್ಲಿನ ಜನರ ಜೀವನವನ್ನ ಹೀನಾಯವಾಗಿಸಿದ್ದಾರೆ..
ಇದೀಗ ಆರ್ಥಿಕ ಬಿಕ್ಕಟ್ಟಿನಲ್ಲಿರುವ ದೇಶವನ್ನ ಪಾರು ಮಾಡುವುದಾಗಿ ಪ್ರಮಾಣ ಮಾಡಿದ್ದಾರೆ. ಕಿಮ್ ಜಾಂಗ್ ಉನ್ ಅಧ್ಯಕ್ಷತೆಯಲ್ಲಿ ಆಡಳಿತಾರೂಢ ವರ್ಕರ್ಸ್ ಪಾರ್ಟಿಯ ಕೇಂದ್ರೀಯ ಸಮಿತಿ ಸಭೆಯಲ್ಲಿ ಕಿಮ್ ಈ ಹೇಳಿಕೆ ನೀಡಿದ್ದಾರೆ.
ಪಕ್ಷವು ಜತೆಯಾಗಿ ಆರ್ಥಿಕ ಬಿಕ್ಕಟ್ಟು ಎದುರಿಸಲಿದೆ. ಕ್ರಾಂತಿಯ ಹಾದಿಯಲ್ಲಿರುವ ತೊಂದರೆಗಳನ್ನು ನಾವು ಬಗೆಹರಿಸಲಿದ್ದೇವೆ ಎಂದು ಪಕ್ಷದ ಪರವಾಗಿ ಪ್ರತಿಜ್ಞೆ ಮಾಡುತ್ತೇನೆ ಎಂದು ಕಿಮ್ ಜಾಂಗ್ ಉನ್ ಹೇಳಿದ್ದಾರೆ.
ಆರ್ಥಿಕ ನಿರ್ವಹಣೆಯಲ್ಲಿ ಲೋಪಗಳು, ಸಾಂಕ್ರಾಮಿಕದಿಂದಾಗಿ ಮುಚ್ಚಲಾಗಿರುವ ಗಡಿಗಳು ಮತ್ತು ಅಮೆರಿಕ ಹೇರಿದ ನಿರ್ಬಂಧಗಳಿಂದಾಗಿ ಸೃಷ್ಟಿಯಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದ ಬಳಿಕ ಈ ಹೇಳಿಕೆ ನೀಡಿದ್ದಾರೆ.








