ADVERTISEMENT
Thursday, March 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಕ್ರಿಕೆಟ್

ರೆಡ್‌ ಬಾಲ್‌ ಕ್ರಿಕೆಟ್‌ ಗೆ ಕಿಂಗ್‌ ಕೋಹ್ಲಿ ಗುಡ್‌ ಬೈ: ದಾಖಲೆಗಳ ಸರದಾರನಿಗೊಂದು ಅಲ್ವಿದಾ ಹೇಳಲೇಬೇಕಲ್ಲವೇ?

King Kohli bids farewell to red-ball cricket: Isn't it time to say goodbye to the record-breaker?

Shwetha by Shwetha
May 14, 2025
in ಕ್ರಿಕೆಟ್, Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ರನ್‌ ಮೆಷಿನ್‌ ಕಿಂಗ್‌ ಕೊಹ್ಲಿ ತಮ್ಮ ಟೆಸ್ಟ್ ವೃತ್ತಿ ಜೀವನಕ್ಕೆ ಗುಡ್‌ ಬೈ ಹೇಳಿದ್ದಾರೆ. ಜಗತ್ತು ಕಂಡ ಅಗ್ರಗಣ್ಯ ಬ್ರಾಟರ್‌ ಗಳಲ್ಲಿ ಅಗ್ರಸ್ಥಾನ ಸಂಪಾದಿಸಿಕೊಂಡಿದ್ದ ವಿರಾಟ್‌ ರೆಡ್‌ ಬಾಲ್‌ ಕ್ರಿಕೆಟ್‌ ನಲ್ಲಿ ತಮ್ಮ ಅಭಿಯಾನ ಮುಗಿಸಿದ್ದಾರೆ. ಒಂದೂವರೆ ವರ್ಷದಲ್ಲಿ ಬರೋಬ್ಬರಿ ಆರು ದ್ವಿಶತಕಗಳು ಹಾಗು ಟೆಸ್ಟ್‌ ಕ್ರಿಕೆಟ್‌ ನಲ್ಲಿ ಯಶಸ್ವಿ ಭಾರತೀಯ ನಾಯಕರಲ್ಲಿ ಒಬ್ಬರು, ಇವಿಷ್ಟೂ ಕಿಂಗ್‌ ಕೋಹ್ಲಿಯ ರೆಡ್‌ ಬಾಲ್‌ ಕ್ರಿಕೆಟ್‌ ಲೆಗಸಿಯ ಪ್ರಮುಖ ಸಾರಾಂಶ.
ಟೆಸ್ಟ್‌ ಕ್ರಿಕೆಟ್‌ ನಲ್ಲಿ ಕೊಹ್ಲಿ ಸಾಧನೆ: ಒಟ್ಟು ಟೆಸ್ಟ್‌ ಪಂದ್ಯಗಳು 123, ಒಟ್ಟು ರನ್‌ ಗಳಿಕೆ 9230, ಸರಾಸರಿ 46.9, ಸ್ಟ್ರೈಕ್‌ ರೇಟ್‌ 55.6, ಪಡೆದುಕೊಂಡ ಕ್ಯಾಚ್‌ 121 ರನ್‌ ಔಟ್‌ 4, ಒಟ್ಟು ಶತಕಗಳು 30 ಹಾಗೂ ಅರ್ಧ ಶತಕಗಳು 31

ಟೆಸ್ಟ್‌ ಕ್ರಿಕೆಟ್‌ ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದಿಟ್ಟ ಕಿಂಗ್‌ ವಿರಾಟ್:‌
ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 46.85 ಸರಾಸರಿಯಲ್ಲಿ 9230 ರನ್‌ಗಳೊಂದಿಗೆ ಭಾರತದ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ. ಅವರ 30 ಶತಕಗಳು ಟೆಸ್ಟ್‌ನಲ್ಲಿ ಭಾರತದ ಬ್ಯಾಟ್ಸ್‌ಮನ್‌ನಿಂದ ಗಳಿಸಿದ ನಾಲ್ಕನೇ ಅತ್ಯಧಿಕ ಶತಕಗಳ ದಾಖಲೆ. ಕೊಹ್ಲಿಯ ಏಳು ದ್ವಿಶತಕಗಳು ಭಾರತೀಯ ಬ್ಯಾಟ್ಸ್‌ಮನ್‌ನಿಂದ ಗಳಿಸಿದ ಅತ್ಯಧಿಕ ವೈಯಕ್ತಿಕ ಮೊತ್ತ ಮತ್ತು ವಿಶ್ವ ಟೆಸ್ಟ್‌ ಇತಿಹಾಸದಲ್ಲಿ ಯಾವುದೇ ಬ್ಯಾಟ್ಸ್‌ಮನ್‌ನಿಂದ ಗಳಿಸಿದ ಅತ್ಯಧಿಕ ರನ್‌ಗಳು. ಸತತ ಎರಡು ಕ್ಯಾಲೆಂಡರ್ ವರ್ಷಗಳಲ್ಲಿ 75 ಅಥವಾ ಅದಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ 1000 ಕ್ಕೂ ಹೆಚ್ಚು ರನ್‌ಗಳನ್ನು ಕಲೆಹಾಕಿದ ಏಕೈಕ ಬ್ಯಾಟ್ಸ್‌ಮನ್ ಕೊಹ್ಲಿ.
2014-15ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿ ಅವರ ಸ್ಮರಣೀಯ ಟೆಸ್ಟ್‌ ಸರಣಿ. 86.50 ಸರಾಸರಿಯಲ್ಲಿ ಬರೋಬ್ಬರಿ 692 ರನ್‌ಗಳನ್ನು ಗಳಿಸಿದ್ದ ಕಿಂಗ್ ಖಾತೆಗೆ, ನಾಲ್ಕು ಶತಕಗಳು ಸೇರಿದ್ದು ಇದೇ ಸರಣಿಯಲ್ಲಿ. 2019-20ರಲ್ಲಿ ಬಾಂಗ್ಲಾದೇಶದ ಭಾರತ ಪ್ರವಾಸದ ಅಂತ್ಯದವರೆಗೆ, ಟೆಸ್ಟ್‌ನಲ್ಲಿ 63.65 ಸರಾಸರಿಯಲ್ಲಿ 5347 ರನ್‌ಗಳನ್ನು ಗಳಿಸಿದ್ದರು ವಿರಾಟ್. ತಮ್ಮ ಒಟ್ಟು 30 ಶತಕಗಳಲ್ಲಿ 21 ಶತಕಗಳನ್ನು ಅವರು ಸಿಡಿಸಿದ್ದು ಕೇವಲ 90 ಇನ್ನಿಂಗ್ಸ್‌ಗಳಲ್ಲಿ.

Related posts

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

March 12, 2026
ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

March 12, 2026

ಟೆಸ್ಟ್‌ ವೃತ್ತಿ ಬದುಕಿನ ಉತ್ತರಾರ್ಧದಲ್ಲಿ ಆತ್ಮವಿಶ್ವಾಸ ಕಳೆದುಕೊಂಡರಾ ವಿರಾಟ್?

ಇತ್ತೀಚೆಗಿನ ವರ್ಷಗಳಲ್ಲಿ ವಿರಾಟ್‌ ಟೆಸ್ಟ್‌ ಕ್ರಿಕೆಟ್‌ ನಲ್ಲಿ ಆತ್ಮವಿಶ್ವಾಸ ಕಳೆದುಕೊಂಡಿದ್ದರಾ? ಹೌದು ಅನ್ನುತ್ತದೆ ಅಂಕಿ ಸಂಖ್ಯೆಗಳ ಮಾಹಿತಿ. 2020ರ ನಂತರ ಕೊಹ್ಲಿ 39 ಟೆಸ್ಟ್ ಪಂದ್ಯಗಳಲ್ಲಿ 30.72ರ ಸರಾಸರಿಯಲ್ಲಿ 2000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದು ಕೊಹ್ಲಿ ಟೆಸ್ಟ್‌ ಜೀವನದ ಅತ್ಯಂತ ಕಳಪೆ ಪ್ರದರ್ಶನ. ಕೊನೆಯ ಹತ್ತು ಟೆಸ್ಟ್‌ಗಳಲ್ಲಿ 19 ಇನ್ನಿಂಗ್ಸ್‌ಗಳಲ್ಲಿ 22.47 ರ ಸರಾಸರಿಯಲ್ಲಿ ಕೇವಲ 382 ರನ್‌ಗಳನ್ನು ಗಳಿಸಿದ್ದರು ಕಿಂಗ್. ಕಳೆದ ವರ್ಷ ಪರ್ತ್‌ನಲ್ಲಿ ಅಜೇಯ 100 ರನ್ ಗಳಿಸಿದ್ದು ಕೊಂಚ ಸಮಾಧಾನಪಡಬಹುದಾದ ಪ್ರದರ್ಶನ ಅಷ್ಟೆ.

2014ರಲ್ಲಿ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಕೊಹ್ಲಿ ಆಡಿದ್ದ ಮೊದಲ 24 ಟೆಸ್ಟ್‌ಗಳಲ್ಲಿ, ಅವರು 46.51 ಸರಾಸರಿಯಲ್ಲಿ 1721 ರನ್ ಗಳಿಸಿದ್ದರು; ಇದರಲ್ಲಿ ಆರು ಶತಕಗಳು ಸೇರಿದ್ದವು ಹಾಗೂ 119 ಗರಿಷ್ಠ ರನ್ ಗಳಿಕೆ. ಆದರೂ ಇಂಗ್ಲೆಂಡ್‌ನಲ್ಲಿ ನಡೆದ ಸರಣಿಯಲ್ಲಿ, ಕೋಹ್ಲಿಯ ಪೂರ್‌ ಫುಟ್ವರ್ಕ್‌ ನೀರಸ ಪ್ರದರ್ಶನಕ್ಕೆ ಕಾರಣವಾಗಿತ್ತು. ಕೊಹ್ಲಿ ಸರಣಿಯಲ್ಲಿ ಹತ್ತು ಇನ್ನಿಂಗ್ಸ್‌ಗಳಲ್ಲಿ ಗಳಿಸಿದ್ದು ಕೇವಲ 134 ರನ್‌ಗಳನ್ನು ಮಾತ್ರ. ಆದರೆ 2014-15ರ ಋತುವಿನ ಆರಂಭದಿಂದ 2019ರ ಕ್ಯಾಲೆಂಡರ್ ವರ್ಷದ ಅಂತ್ಯದವರೆಗೆ, ಕೊಹ್ಲಿ ಟೆಸ್ಟ್‌ನಲ್ಲಿ ಗಳಿಸಿದ್ದು 5347 ರನ್‌. ಸ್ಟೀವನ್ ಸ್ಮಿತ್ ಮತ್ತು ಜೋ ರೂಟ್ ಹಿಂದಿಕ್ಕಿ ದಾಖಲೆ ಬರದರು ಕಿಂಗ್.

180 ದಿನಗಳಲ್ಲಿ 6 ದ್ವಿಶತಕ ಸಿಡಿಸಿ ಕ್ರಿಕೆಟ್‌ ದಂತಕಥೆ ಬ್ರಾಡ್ಮನ್‌ ನಂತರದ ಸ್ಥಾನ ಪಡೆದುಕೊಂಡ ವಿರಾಟ:

2016 ಮತ್ತು 2018-19ರ ಋತುಗಳ ನಡುವಿನ 18 ತಿಂಗಳ ಅವಧಿಯಲ್ಲಿ ಕೊಹ್ಲಿ ಉತ್ತುಂಗದಲ್ಲಿದ್ದರು. ಕಿಂಗ್‌ ಕೋಹ್ಲಿಯ ಮೊದಲ ದ್ವಿಶತಕ ದಾಖಲಾಗಿದ್ದು, ಜುಲೈ 2016 ರಲ್ಲಿ ನಾರ್ತ್ ಸೌಂಡ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ. 2017ರ ಅಂತ್ಯದ ವೇಳೆಗೆಲ್ಲಾ ಅವರು ತಮ್ಮ ಮುಂದಿನ 33 ಇನ್ನಿಂಗ್ಸ್‌ಗಳಲ್ಲಿ ಆ ಸಂಖ್ಯೆಗೆ ಐದು ಎಚ್ಚುವರಿ ದ್ವಿಶತಕಗಳನ್ನು ಸೇರಿಸಿದ್ದರು. ಇದು ಸರ್‌ ಡಾನ್ ಬ್ರಾಡ್ಮನ್ ನಂತರ 34 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ದ್ವಿಶತಕಗಳ ವಿಷಯದಲ್ಲಿ ಎರಡನೇ ಅತ್ಯಂತ ಫಲಪ್ರದ ರನ್ ಗಳಿಕೆ. ಕೊಹ್ಲಿ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್‌ಮನ್ ಆಗಿದ್ದ ಕಾಲ ಇದು. ಕ್ಷಿಪ್ರಗತಿಯಲ್ಲಿ ಅವರಿಗಿಂತ ಹೆಚ್ಚು ರನ್ ಗಳಿಸಿದವರು ಯಾರೂ ಇರಲಿಲ್ಲ ಮತ್ತು ಈ ಅವಧಿಯಲ್ಲಿ ಕನಿಷ್ಠ 250 ರನ್ ಗಳಿಸಿದವರು ಯಾರೂ ಅವರಿಗಿಂತ ಹೆಚ್ಚಿನ ಸರಾಸರಿಯನ್ನೂ ಹೊಂದಿರಲಿಲ್ಲ.
2016-17ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಈಡನ್ ಗಾರ್ಡನ್ಸ್ ಟೆಸ್ಟ್‌ನಿಂದ 2018-19ರಲ್ಲಿ ಮೆಲ್ಬೋರ್ನ್‌ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್‌ಗಳವರೆಗೆ, ಕೊಹ್ಲಿ 50 ಇನ್ನಿಂಗ್ಸ್‌ಗಳಲ್ಲಿ 71.93 ಸರಾಸರಿಯಲ್ಲಿ 3304 ರನ್ ಗಳಿಸಿದ್ದಾರೆ. ಟೆಸ್ಟ್‌ಗಳಲ್ಲಿ 50 ಇನ್ನಿಂಗ್ಸ್‌ಗಳಲ್ಲಿ ಕೇವಲ ಆರು ಇತರ ಬ್ಯಾಟ್ಸ್‌ಮನ್‌ಗಳು ಮಾತ್ರ ಈ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. 1930 ಮತ್ತು 1946 ರ ನಡುವೆ 5000 ಕ್ಕೂ ಹೆಚ್ಚು ರನ್ ಗಳಿಸುವ ಮೂಲಕ ಬ್ರಾಡ್‌ಮನ್ ಈ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದ್ದರೇ. ಈ ಪಟ್ಟಿಯಲ್ಲಿರುವ ಇತರರು ಎಂದರೆ ವಿವ್ ರಿಚರ್ಡ್ಸ್, ಕುಮಾರ್ ಸಂಗಕ್ಕಾರ, ಮಹೇಲಾ ಜಯವರ್ಧನೆ, ಬ್ರಿಯಾನ್ ಲಾರಾ ಮತ್ತು ರಿಕಿ ಪಾಂಟಿಂಗ್.

ಇಂಗ್ಲೆಂಡ್‌, ಆಸ್ಟ್ರೇಲಿಯಾ ಮತ್ತು ಸೌತ್‌ ಆಫ್ರಿಕಾ ನೆಲದಲ್ಲಿ ವಿರಾಟ್‌ ಬ್ಯಾಟ್‌ ಅಬ್ಬರ ಹೇಗಿತ್ತು ನೋಡಿ!

ವಿದೇಶದ ನೆಲದಲ್ಲಿ ಹಾಗೂ ತವರಿನಲ್ಲಿ ನಡೆದ ಟೆಸ್ಟ್‌ ಸರಣಿಗಳಲ್ಲಿ ಕೊಹ್ಲಿ ರನ್‌ ಗಳಿಕೆಯಲ್ಲಿ ಭಾಗಶಃ ಸಮಾನ ಫಲಿತಾಂಶ ಹೊಂದಿದ್ದಾರೆ ಆದರೆ ಸರಾಸರಿಯನ್ನು ಗಮನಿಸಿದರೆ ತವರಿನಲ್ಲಿ ಕಿಂಗ್‌ ಹೆಚ್ಚು ಯಶಸ್ವಿಯಾಗಿದ್ದಾರೆ. ಭಾರತದಲ್ಲಿ ನಡೆದ 55 ಟೆಸ್ಟ್‌ಗಳಲ್ಲಿ 55.58 ಸರಾಸರಿಯಲ್ಲಿ 4336 ರನ್ ಗಳಿಸಿದ್ದಾರೆ. ವಿದೇಶದಲ್ಲಿ ನಡೆದ ಟೆಸ್ಟ್‌ಗಳಲ್ಲಿ (ಎರಡು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಳನ್ನು ಹೊರತುಪಡಿಸಿ) ಅವರು 41.51 ಸರಾಸರಿಯಲ್ಲಿ 4774 ರನ್ ಗಳಿಸಿದ್ದಾರೆ. 2014-15ರಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ, ಅವರು 86.50 ಸರಾಸರಿಯಲ್ಲಿ 692 ರನ್ ಗಳಿಸಿದ್ದರು. ಕೊಹ್ಲಿಯ 692 ರನ್‌ಗಳು ಆಸ್ಟ್ರೇಲಿಯಾದಲ್ಲಿ ನಡೆದ ಸರಣಿಯಲ್ಲಿ ಪ್ರವಾಸಿ ಬ್ಯಾಟ್ಸ್‌ಮನ್ ಗಳಿಸಿದ ಐದನೇ ಅತ್ಯಧಿಕ ರನ್‌ಗಳಾಗಿವೆ.

2008 ರಲ್ಲಿ ಇಂಗ್ಲೆಂಡ್‌ ವಿರುದ್ಧದ ಹತ್ತು ಇನ್ನಿಂಗ್ಸ್‌ಗಳಲ್ಲಿ ಎರಡು ಶತಕ ಮತ್ತು ಮೂರು ಅರ್ಧಶತಕಗಳನ್ನು ಒಳಗೊಂಡಂತೆ 59.30 ಸರಾಸರಿಯಲ್ಲಿ 593 ರನ್ ಗಳಿಸಿದ್ದಾರೆ ಕಿಂಗ್‌ ಕೋಹ್ಲಿ. ಇಂಗ್ಲೆಂಡ್‌ನಲ್ಲಿ ನಡೆದ ಸರಣಿಯೊಂದರಲ್ಲಿ ಭಾರತದ ಬ್ಯಾಟ್ಸ್‌ಮನ್ ಗಳಿಸಿದ ಎರಡನೇ ಅತ್ಯಧಿಕ ರನ್‌ಗಳಿವು. 2002ರ ಸರಣಿಯಲ್ಲಿ ಕೇವಲ ಆರು ಇನ್ನಿಂಗ್ಸ್‌ಗಳಿಂದ 602 ರನ್ ಗಳಿಸಿದ ದಿ ವಾಲ್‌ ರಾಹುಲ್ ದ್ರಾವಿಡ್ ಮೊದಲ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಎರಡೂ ಪ್ರವಾಸ ಸರಣಿಯಲ್ಲಿ 50 ಅಥವಾ ಅದಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ 500 ಕ್ಕೂ ಹೆಚ್ಚು ರನ್ ಗಳಿಸಿದ ಇಬ್ಬರು ಪ್ರವಾಸಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ ವಿರಾಟ್‌, ಇನ್ನೊಬ್ಬರು ನೋ ಡೌಟ್‌ ದಿ ಗ್ರೇಟ್‌ ವಾಲ್ ರಾಹುಲ್‌ ದ್ರಾವಿಡ್.

ದಕ್ಷಿಣ ಆಫ್ರಿಕಾ ವಿರುದ್ಧವೂ ವಿರಾಟ್ ಕೊಹ್ಲಿ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ನಾಲ್ಕು ಸರಣಿಗಳಲ್ಲಿ 49.50 ಸರಾಸರಿಯಲ್ಲಿ ಅವರು ಗಳಿಸಿದ 891 ರನ್‌ಗಳ ಗಳಿಕೆ ಇದನ್ನು ಸಾರುತ್ತದೆ. 1992ರ ನಂತರದ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಗಳಲ್ಲಿ ಆ ದೇಶದಲ್ಲಿ ಯಾವುದೇ ಪ್ರವಾಸಿ ಬ್ಯಾಟ್ಸ್‌ಮನ್ ಗಳಿಸಿದ ನಾಲ್ಕನೇ ಗರಿಷ್ಠ ರನ್‌ ಮೊತ್ತ ಇದು. ದಕ್ಷಿಣ ಆಫ್ರಿಕಾ ನೆಲದಲ್ಲಿ ಆ ತಂಡದ ವಿರುದ್ಧ ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್ ಮತ್ತು ಸ್ಟೀಫನ್ ಫ್ಲೆಮಿಂಗ್ ಮಾತ್ರ ಕೊಹ್ಲಿಗಿಂತ ಹೆಚ್ಚಿನ ಸರಾಸರಿಯಲ್ಲಿ ರನ್‌ ಗಳಿಸಿದ್ದಾರೆ.

ಭಾರತ ಟೆಸ್ಟ್‌ ಇತಿಹಾಸದ ಸಮರ್ಥ ಕ್ಯಾಪ್ಟನ್‌ ಗಳಲ್ಲಿ ಒಬ್ಬರಾದ ವಿರಾಟ್‌ ಕೋಹ್ಲಿ:

ಟೆಸ್ಟ್ ನಾಯಕನಾಗಿ, ಕೊಹ್ಲಿ ಈ ಸ್ವರೂಪದಲ್ಲಿ ಅತ್ಯಂತ ಫಲಪ್ರದ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂಬುದು ನಿಸ್ಸಂಶಯ. 54.80 ಸರಾಸರಿಯಲ್ಲಿ 5864 ರನ್‌ಗಳನ್ನು ಗಳಿಸಿರುವ ಕಿಂಗ್‌, ತಮ್ಮ ನಾಯಕತ್ವದ ಅವಧಿಯಲ್ಲಿ 20 ಶತಕಗಳನ್ನು ಗಳನ್ನು ಗಳಿಸಿ ಎರಡನೆ ಯಶಸ್ವಿ ನಾಯಕರೆನಿಸಿದ್ದಾರೆ. ಟೆಸ್ಟ್ ನಾಯಕನಾಗಿ 25 ಶತಕಗಳನ್ನು ಗಳಿಸಿದ ಗ್ರೇಮ್ ಸ್ಮಿತ್ ಮೊದಲ ಸ್ಥಾನದಲ್ಲಿದ್ದಾರೆ.

ಕೊಹ್ಲಿ ನಾಯಕತ್ವದ ಮತ್ತೊಂದು ವಿಶೇಷವೆಂದರೆ ವೇಗದ ಬೌಲರ್‌ಗಳಿಗೆ ಹೆಚ್ಚಿನ ಪ್ರಧಾನ್ಯತೆ ಸಿಕ್ಕಿದ್ದು. ಕೊಹ್ಲಿ ಟೆಸ್ಟ್‌ ನಾಯಕನಾಗಿ ಹೊರಹೊಮ್ಮಿದ ನಂತರ, ಭಾರತದ ವೇಗದ ಬೌಲರ್‌ಗಳು 26.00 ಸರಾಸರಿ ಮತ್ತು 51.84 ಸ್ಟ್ರೈಕ್ ರೇಟ್‌ನಲ್ಲಿ 591 ವಿಕೆಟ್‌ಗಳನ್ನು ಪಡೆದಿದ್ದಾರೆ. ನಾಯಕರಾಗಿ 68 ಟೆಸ್ಟ್‌ಗಳಲ್ಲಿ 40 ಗೆಲುವುಗಳನ್ನು ಸಾಧಿಸಿರುವ ಕೋಹ್ಲಿ ಭಾರತದ ಟೆಸ್ಟ್‌ ಕ್ರಿಕೆಟ್‌ ತಂಡದ ಅತ್ಯಂತ ಯಶಸ್ವಿ ನಾಯಕ ಮತ್ತು ಕಳೆದ ಒಂದೂವರೆ ದಶಕದಲ್ಲಿ ಎಲ್ಲಾ ನಾಯಕರಿಗಿಂತ ಉತ್ತಮವಾಗಿ ತಂಡವನ್ನು ಮುನ್ನಡೆಸಿದ್ದಾರೆ.

ಎನಿವೆ ನೀವು ನನ್ನದೇ ಪ್ರಾಯ. ಪ್ರಾಯಶಃ ನನಗಿಂತ ಚಿಕ್ಕವರು. ಆದರೆ ನಿಮ್ಮ ಒಟ್ಟಾರೆ ಟೆಸ್ಟ್‌ ಕ್ರಿಕೆಟ್‌ ಬದುಕನ್ನು ನಾವೆಲ್ಲರೂ ಇನ್ನಿಲ್ಲದಂತೆ ಎಂಜಾಯ್‌ ಮಾಡಿದ್ದೇವೆ. ನಿಮ್ಮ ನಿಗಿನಿಗಿ ತಾರುಣ್ಯದ ಸಂದರ್ಭದಲ್ಲಿ ವೈಯಕ್ತಿಕವಾಗಿ ನಿಮ್ಮ ವರ್ತನೆ ಕುರಿತು ನಾನು ತಕರಾರು ವ್ಯಕ್ತಪಡಿಸಿದ್ದಿದೆ. ಆದರೆ ಒಬ್ಬ ಆಟಗಾರನಾಗಿ ನಿಮ್ಮ ಅಗ್ರೆಸ್ಸೀವ್‌ ನೆಸ್‌ ನನಗೆ ಸಾಕಷ್ಟು ಮೆಚ್ಚುಗೆ ಮೂಡಿಸಿದ್ದಿದೆ. ನಮ್ಮ ಇಡೀ ಜನರೇಷನ್‌ ಅನ್ನು ಮನೋರಂಜಿಸಿದ್ದಾಕ್ಕಾಗಿ ಥ್ಯಾಂಕ್‌ ಯೂ ಕಿಂಗ್..‌ ಮಿಸ್‌ ಯೂ ವಿರಾಟ್..‌ ಅಲ್ವಿದಾ

-ವಿ.ಭಾ

ShareTweetSendShare
Join us on:

Related Posts

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

by Shwetha
March 12, 2026
0

ಭಾರತೀಯ ಜನತಾ ಪಾರ್ಟಿ ಉತ್ತರ ಪ್ರದೇಶದಲ್ಲಿ ಸತತ ಮೂರನೇ ಅವಧಿಗೆ ಅಧಿಕಾರವನ್ನು ಮರಳಿ ಪಡೆಯಲು ಹೊಸ ರಾಜಕೀಯ ತಂತ್ರವನ್ನು ರೂಪಿಸಿದೆ. ಈ ತಂತ್ರಕ್ಕೆ ಆರ್‌ಎಸ್‌ಎಸ್ ಸಹ ಒಪ್ಪಿಗೆ...

ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

by Shwetha
March 12, 2026
0

ಮಾರ್ಚ್ 28ರಿಂದ ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿ ಮುಂದೂಡಲಾಗುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿ ಮತ್ತು ಅದರ ಪರಿಣಾಮಗಳಿಂದ ಹಲವು ವ್ಯವಸ್ಥಾತ್ಮಕ ಸಮಸ್ಯೆಗಳು...

ಸುಪ್ರೀಂ ಕೋರ್ಟ್ ಅಸಮಾಧಾನ ಬಳಿಕ  ಇಡೀ ಪಠ್ಯಪುಸ್ತಕ ಹಿಂಪಡೆದು ಕ್ಷಮೆಯಾಚಿಸಿದ NCERT

NCERT ಪಠ್ಯಪುಸ್ತಕಗಳ ಸಮಗ್ರ ಪರಿಶೀಲನೆ: ಸುಪ್ರೀಂ ಕೋರ್ಟ್ ಸೂಚನೆ

by Shwetha
March 12, 2026
0

ಸುಪ್ರೀಂ ಕೋರ್ಟ್ ಎನ್‌ಸಿಇಆರ್‌ಟಿ ಪಠ್ಯಪುಸ್ತಕ ವಿವಾದದ ಹಿನ್ನೆಲೆಯಲ್ಲಿ ಮಹತ್ವದ ಸೂಚನೆ ನೀಡಿದೆ. NCERT ಪ್ರಕಟಿಸಿರುವ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿನ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ವಿಷಯಕ್ಕೆ...

ಇರಾನ್ ಬೆದರಿಕೆ ನಡುವೆಯೂ ಮುಂಬೈ ತಲುಪಿದ ತೈಲ ಟ್ಯಾಂಕರ್: ಜಾಗತಿಕ ಮಟ್ಟದಲ್ಲಿ ಭಾರತದ ದರ್ಬಾರ್ ಶುರು!

ಇರಾನ್ ಬೆದರಿಕೆ ನಡುವೆಯೂ ಮುಂಬೈ ತಲುಪಿದ ತೈಲ ಟ್ಯಾಂಕರ್: ಜಾಗತಿಕ ಮಟ್ಟದಲ್ಲಿ ಭಾರತದ ದರ್ಬಾರ್ ಶುರು!

by Shwetha
March 12, 2026
0

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡಗಳು ಕವಿದಿರುವ ಪ್ರಸ್ತುತ ಸಂದರ್ಭದಲ್ಲಿ, ಇಡೀ ವಿಶ್ವದ ಜೀವನಾಡಿಯಾಗಿರುವ ತೈಲ ಪೂರೈಕೆ ಮಾರ್ಗ 'ಹಾರ್ಮುಜ್ ಜಲಸಂಧಿ' ಬಹುತೇಕ ಸ್ತಬ್ಧಗೊಂಡಿದೆ. ಇರಾನ್ ನೀಡಿದ್ದ ನೇರ...

ಗ್ಯಾಸ್ ಕೊರತೆ ಪರಿಣಾಮ: ಬೆಂಗಳೂರಿನ ಹೋಟೆಲ್‌ಗಳಲ್ಲಿ ಕೆಲವು ತಿಂಡಿಗಳಿಗೆ ತಾತ್ಕಾಲಿಕ ಬಂದ್

ಗ್ಯಾಸ್ ಕೊರತೆ ಪರಿಣಾಮ: ಬೆಂಗಳೂರಿನ ಹೋಟೆಲ್‌ಗಳಲ್ಲಿ ಕೆಲವು ತಿಂಡಿಗಳಿಗೆ ತಾತ್ಕಾಲಿಕ ಬಂದ್

by Shwetha
March 12, 2026
0

ಬೆಂಗಳೂರು ನಗರದಲ್ಲಿನ ಹೋಟೆಲ್‌ಗಳಲ್ಲಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿರುವ ಹಿನ್ನೆಲೆ ಕೆಲವು ತಿಂಡಿಗಳನ್ನು ತಾತ್ಕಾಲಿಕವಾಗಿ ತಯಾರಿಸದಂತೆ ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ. ವಿಶೇಷವಾಗಿ ಹೆಚ್ಚು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram