200ನೇ ಪಂದ್ಯ ಆಡಲಿರುವ ಕಿಂಗ್ ಕೊಹ್ಲಿ
ಆರ್ ಸಿಬಿ ಪರ ಕಳೆದ 14 ವರ್ಷಗಳಿಂದ ಆಡುತ್ತಿರುವ ವಿರಾಟ್ ಕೊಹ್ಲಿ ಅಬುಧಾಬಿಯಲ್ಲಿ ಹೊಸ ದಾಖಲೆ ಸೃಷ್ಟಿ ಮಾಡಲಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯದ ಮೂಲಕ ಕೊಹ್ಲಿ 200ನೇ ಪಂದ್ಯ ಆಡುತ್ತಿದ್ದಾರೆ. ಎಂ.ಎಸ್.ಧೋನಿ, ದಿನೇಶ್ ಕಾರ್ತಿಕ್, ರೋಹಿತ್ ಶರ್ಮಾ ಮತ್ತು ಸುರೇಶ್ ರೈನಾ ಬಳಿಕ 200 ಐಪಿಎಲ್ ಪಂದ್ಯ ಆಡಿದ 5ನೇ ಆಟಗಾರನಾಗಿ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದಲ್ಲದೇ ಬ್ಯಾಟಿಂಗ್ ನಲ್ಲಿ ಕಿಂಗ್ ಕೊಹ್ಲಿಗೆ ಯಾರೂ ಸರಿಸಮಾನರಿಲ್ಲ. ಟಿ20 ಪಂದ್ಯಗಳಲ್ಲೂ ಕೊಹ್ಲಿ ರನ್ ಶಿಖರವೇರಿದ್ದಾರೆ. ಇನ್ನು 71 ರನ್ ಗಳಿಸಿದ್ರೆ ಕೊಹ್ಲಿ 10 ಸಾವಿರ ಟಿ20 ರನ್ ಗಳಿಸಿದ 5ನೇ ಆಟಗಾರನಾಗುತ್ತಾರೆ. ಈಗಾಗಲೇ ಕ್ರಿಸ್ ಗೇಲ್, ಕಿರಾನ್ ಪೆÇಲ್ಲಾರ್ಡ್, ಶೋಯೆಬ್ ಮಲಿಕ್ ಮತ್ತು ಡೇವಿಡ್ ವಾರ್ನರ್ ಈ ಸಾಧನೆ ಮಾಡಿದ್ದಾರೆ.
ನಾಯಕತ್ವಕ್ಕೆ ಗುಡ್ ಬೈ
ಪ್ರಪಂದಾದ್ಯಂತ ಇರುವ ಕೋಟ್ಯಾಂತರ ಆರ್ ಸಿಬಿ ಅಭಿಮಾನಿಗಳಿಗೆ ಕಿಂಗ್ ಕೊಹ್ಲಿ ಶಾಕ್ ನೀಡಿದ್ದಾರೆ. ಈಗಾಗಲೇ ಟೀಂ ಇಂಡಿಯಾದ ಟಿ-20 ತಂಡದ ಕ್ಯಾಪ್ಟನ್ಸಿಗೆ ಗುಡ್ ಬೈ ಹೇಳೋದಾಗಿ ತಿಳಿಸಿರುವ ಇದೀಗ ರಾಯಲ್ ಚಾಲೆಂಜಸ್ ಬೆಂಗಳೂರು ತಂಡ ನಾಯಕತ್ವದಿಂದ ಕೆಳಗಿಳಿಯುವುದಾಗಿ ತಿಳಿಸಿದ್ದಾರೆ. ಮುಂದಿನ ಸೀಸನ್ನಿಂದ ಆರ್ ಸಿಬಿ ತಂಡವನ್ನು ಮುನ್ನಡೆಸುವುದಿಲ್ಲ ಎಂದು ವಿರಾಟ್ ಸ್ಪಷ್ಟಪಡಿಸಿದ್ದಾರೆ.









