ಐಪಿಎಲ್ 2021- ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಇನ್ನು ಮುಂದೆ ಕಿಂಗ್ಸ್ ಪಂಜಾಬ್
2021ರ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕಿಂಗ್ಸ್ ಪಂಜಾಬ್ ತಂಡವಾಗಿ ಬದಲಾಗಿದೆ.
ಕಳೆದ 13 ವರ್ಷಗಳಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಆಡುತ್ತಿದೆ. ಆದ್ರೆ ಪ್ರಶಸ್ತಿ ಗೆಲ್ಲಲು ವಿಫಲವಾಗಿತ್ತು. ಅತ್ಯುತ್ತಮ ತಂಡವಾಗಿದ್ರೂ ಕೊನೆಯ ಕ್ಷಣಗಳಲ್ಲಿ ಎಡವಿ ನಿರಾಸೆ ಅನುಭವಿಸುತ್ತಿತ್ತು.
ಹೀಗಾಗಿ ಲೆಕ್ಕಚಾರ, ನಂಬಿಕೆ ಆಧಾರದಲ್ಲಿ ಈ ಬಾರಿ ಹೊಸ ಹೆಸರಿನಲ್ಲಿ ಕಣಕ್ಕಿಳಿಯಲು ಫ್ರಾಂಚೈಸಿ ಮಾಲೀಕರು ನಿರ್ಧರಿಸಿದ್ದರು. ಸಾಕಷ್ಟು ಯೋಚನೆ ಮಾಡಿ ಕೊನೆಗೆ ಕಿಂಗ್ಸ್ ಪಂಜಾಬ್ ಹೆಸರಿನೊಂದಿಗೆ ಈ ಬಾರಿಯ ಐಪಿಎಲ್ ನಲ್ಲಿ ಕಣಕ್ಕಿಳಿಯಲು ನಿರ್ಧರಿಸಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮಾಲೀಕರು ಈ ಹಿಂದೆಯೇ ತಂಡದ ಹೆಸರು ಬದಲಾವಣೆ ಮಾಡಲು ನಿರ್ಧರಿಸಿದ್ದರು. ಈ ಬಾರಿ ಕಿಂಗ್ಸ್ ಪಂಜಾಬ್ ತಂಡವಾಗಿದೆ. ಇದು ತಕ್ಷಣ ತೆಗೆದುಕೊಂಡ ನಿರ್ಧಾರವಲ್ಲ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.
ಮೋಹಿತ್ ಬರ್ಮನ್, ನೆಸ್ ವಾಡಿಯಾ, ಪ್ರೀತಿ ಝಿಂಟಾ ಮತ್ತು ಕರಣ್ ಪೌಲ್ ಮಾಲೀಕತ್ವದ ಕಿಂಗ್ಸ್ ಪಂಜಾಬ್ ತಂಡಕ್ಕೆ ಕೆ.ಎಲ್. ರಾಹುಲ್ ನಾಯಕನಾಗಿದ್ದಾರೆ. ಅನಿಲ್ ಕುಂಬ್ಳೆ ಹೆಡ್ ಕೋಚ್ ಆಗಿದ್ದಾರೆ.
ಕಳೆದ 13 ಟೂರ್ನಿಗಳಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ (ಪಂಜಾಬ್ ಕಿಂಗ್ಸ್) ಪ್ರಶಸ್ತಿ ಗೆದ್ದಿಲ್ಲ. ಒಂದು ಬಾರಿ ರನ್ನರ್ ಅಪ್ ಆಗಿರೋದೇ ತಂಡದ ದೊಡ್ಡ ಸಾಧನೆಯಾಗಿದೆ. ಹಾಗೇ ಒಂದು ಬಾರಿ ಮೂರನೇ ಸ್ಥಾನ ಪಡೆದುಕೊಂಡಿದೆ.
2021ರ ಐಪಿಎಲ್ ಟೂರ್ನಿಯ ಬಿಡ್ಡಿಂಗ್ ಫೆಬ್ರವರಿ 18ರಂದು ಚೆನ್ನೈ ನಲ್ಲಿ ನಡೆಯಲಿದೆ. ಹಾಗೇ ಏಪ್ರಿಲ್ ಎರಡನೇ ವಾರ ಐಪಿಎಲ್ ಟೂರ್ನಿ ನಡೆಯಲಿದೆ.