ಹಾರ್ದಿಕ್ ಪಾಂಡ್ಯ ಇನ್ಮುಂದೆ FOUR D player..
ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಫೋರ್ ಡಿ ಪ್ಲೇಯರ್ ಎಂದು ಟೀಂ ಇಂಡಿಯಾದ ಮಾಜಿ ವಿಕೆಟ್ ಕೀಪರ್ ಕಿರಣ್ ಮೋರೆ ಬಣ್ಣಿಸಿದ್ದಾರೆ.
“ಹಾರ್ದಿಕ್ ಪಾಂಡ್ಯ ಈಗ ನಾಲ್ಕು ಡೈಮನ್ಷನಲ್ ಆಟಗಾರ. ಇದಕ್ಕು ಮುನ್ನಾ ಆಟ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮಾಡುತ್ತಿದ್ದರು, ಈಗ ಈ ತ್ರಿಡಿ ಪ್ಲೇಯರ್ ಗೆ ಕ್ಯಾಪ್ಟನ್ಸಿ ಕೂಡ ಜೊತೆಯಾಗಿದೆ.
ನಾಯಕತ್ವದಲ್ಲೂ ಅವರು ಮಿಂಚಿದ್ದಾರೆ. ಆತನಲ್ಲಿ ಎಷ್ಟು ಪ್ರತಿಭೆ ಇದೆ ಎಂದು ಇದರಿಂದ ಅರ್ಥವಾಗುತ್ತದೆ.
ಐಪಿಎಲ್ ಸೀಜನ್ 15ರಲ್ಲಿ ಗುಜರಾತ್ ಟೈಟಾನ್ಸ್ ತಂಡ ನೀಡಿದ ಪ್ರದರ್ಶನ ಅದ್ಭುತ. ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಆಗುವುದು, ಚೊಚ್ಚಲ ಬಾರಿ ಚಾಂಪಿಯನ್ ಆಗಿದ್ದು, ವ್ಯಕ್ತಿಗತವಾಗಿ ಬ್ಯಾಟಿಂಗ್, ಬೌಲಿಂಗ್ ನಲ್ಲಿ ಮಿಂಚಿದ್ದಾರೆ.

ಈ ಸಂದರ್ಭದಲ್ಲಿ ಪಾಂಡ್ಯ ವೃತ್ತಿಜೀವನದ ಆರಂಭದ ದಿನಗಳಲ್ಲಿ ಹಾರ್ದಿಕ್ ತಮ್ಮ ಅಕಾಡೆಮಿಯಲ್ಲಿ ಕ್ರಿಕೆಟ್ ಆಡಿದ ದಿನಗಳನ್ನು ನೆನಪಿಸಿಕೊಂಡ ಕಿರಣ್ ಮೋರೆ, ”ಕೃನಾಲ್ ಪಾಂಡ್ಯ ನನ್ನ ಅಕಾಡೆಮಿ ಸೇರಿ ಕ್ರಿಕೆಟಿಗನಾಗಲು ತರಬೇತಿ ಪಡೆಯುತ್ತಿದ್ದರು.
ಆಗ ಹಾರ್ದಿಕ್ ಪಾಂಡ್ಯ ಪ್ರತಿದಿನ ಅಕಾಡೆಮಿಗೆ ಬರುತ್ತಿದ್ದ. ಬಾಲ್ಯದಲ್ಲಿ ನೆಟ್ ನಲ್ಲಿ ಓಡಿ ಕ್ಯಾಚ್‌ಗಳನ್ನು ಪಡೆಯುತ್ತಿದ್ದ. ಆಗ ನಾನು ಕೃನಾಲ್ ಪಾಂಡ್ಯಗೆ ನಿಮ್ಮ ತಮ್ಮನ್ನು ಪ್ರಾಕ್ಟೀಸ್ ಗೆ ಕರೆದುಕೊಂಡು ಬಾ ಅಂತಾ ಹೇಳಿದ್ದೆ.
ಆಗ ಅವನ ಕಣ್ಣಲ್ಲಿ ಆಟದ ಮೇಲೆ ಆಸೆಯನ್ನ ನೋಡಿದೆ. ಚಿಕ್ಕ ವಯಸ್ಸಿನಿಂದಲೂ ಎಲ್ಲಾ ಪಂದ್ಯಗಳಲ್ಲಿ ಮಿಂಚಬೇಕು ಎಂಬ ಹಂಬಲವನ್ನು ಹಾರ್ದಿಕ್ ಪಾಂಡ್ಯದಲ್ಲಿ ನೋಡಿದ್ದೇನೆ ಎಂದು ಮೋರೆ ಹೇಳಿದ್ದಾರೆ.








