ಸುಶಾಂತ್ಗೆ ಕ್ರಿಕೆಟ್ ಪಾಠ ಹೇಳಿಕೊಟ್ಟಿದ್ದ ಕಿರಣ್ ಮೊರೆ
2016ರಲ್ಲಿ ತೆರೆಕಂಡ ಎಂ.ಎಸ್. ಧೋನಿ ದಿ ಅನ್ ಟೋಲ್ಡ್ ಸ್ಟೋರಿ ಸುಶಾಂತ್ಗೆ ದೊಡ್ಡ ಬ್ರೇಕ್ ಕೊಟ್ಟ ಚಿತ್ರ. ಈ ಚಿತ್ರದ ಮೂಲಕವೇ ಸುಶಾಂತ್ ಭಾರತೀಯ ಚಿತ್ರರಂಗದಲ್ಲೇ ಗಮನ ಸೆಳೆದಿದ್ದರು. ಯಾಕಂದ್ರೆ ಎಂ,ಎಸ್, ಧೋನಿಯ ಪಾತ್ರಕ್ಕೆ ಜೀವ ತುಂಬುವುದು ಅಷ್ಟು ಸುಲಭದ ಕೆಲಸವಲ್ಲ. ಧೋನಿಯ ಹಾವಭಾವಗಳನ್ನು ಅನುಕರಣೆ ಮಾಡುವುದು ಕೂಡ ಅಂದುಕೊಂಡಂಷ್ಟು ಸುಲಭವಿರಲಿಲ್ಲ.
ಯಾಕಂದ್ರೆ ಧೋನಿಯ ವ್ಯಕ್ತಿತ್ವವೇ ಡಿಫರೆಂಟ್. ಹೇರ್ ಸ್ಟೈಲ್, ಬ್ಯಾಟಿಂಗ್ ಶೈಲಿ, ನಡೆಯುವ ಶೈಲಿ, ಕೀಪಿಂಗ್ ಶೈಲಿ, ಸ್ಮೈಲ್ ಹೀಗೆ
ಎಲ್ಲವೂ ಡಿಫರೆಂಟ್. ಹೀಗಾಗಿ ಸುಶಾಂತ್ ಅವರು ಚಿತ್ರದ ಪಾತ್ರಕ್ಕಾಗಿ ತುಂಬಾನೇ ಕಷ್ಟಪಟ್ಟಿದ್ದಾರೆ. ಸತತವಾಗಿ ನೆಟ್ಸ್ ನಲ್ಲಿ ಅಭ್ಯಾಸ ನಡೆಸಿದ್ದಾರೆ. ಹಾಗಂತ ಹತ್ತು ಹದಿನೈದು ದಿನವಲ್ಲ. ಸರಿ ಸುಮಾರು ಮೂರು ತಿಂಗಳು ನೆಟ್ಸ್ ನಲ್ಲಿ ಬೆವರು ಸುರಿಸಿದ್ದಾರೆ.
ಅಂದ ಹಾಗೇ ಸುಶಾಂತ್ಗೆ ಧೋನಿ ಚಿತ್ರಕ್ಕಾಗಿ ಕ್ರಿಕೆಟ್ ತರಬೇತಿ ನೀಡಿದ್ದು ಭಾರತದ ಮಾಜಿ ವಿಕೆಟ್ ಕೀಪರ್ ಕಿರಣ್ ಮೊರೆ. ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಶೈಲಿಯನ್ನು ಹೇಳಿಕೊಟ್ಟಿರುವ ಕಿರಣ್ ಮೊರೆ ಇದೀಗ ಸುಶಾಂತ್ ಸಾವಿನ ಸುದ್ದಿ ಕೇಳಿ ಶಾಕ್ ಆಗಿದ್ದಾರೆ. ಹಾಗೇ ಸಚಿನ್, ರೈನಾ, ಅಶ್ವಿನ್, ವಿರಾಟ್ ಕೊಹ್ಲಿ ಹೀಗೆ ಎಲ್ಲರಿಗೂ ಸುಶಾಂತ್ ಸಾವಿನ ಸುದ್ದಿ ಕೇಳಿ ದಿಗ್ಭ್ರಮೆಗೊಂಡಿದ್ದಾರೆ.
ಕಿರುತೆರೆ ನಟನಾಗಿ ಆ ನಂತರ ಬಾಲಿವುಡ್ ನಟನಾಗಿ ಬೆಳ್ಳಿ ಪರದೆಯ ಮೇಲೆ ಕಂಗೊಳಿಸಿದ್ದ ಸುಶಾಂತ್ ಪ್ರತಿಭಾವಂತ ನಟ. ಅದರಲ್ಲೂ ಸುಶಾಂತ್ ಅವರು ಧೋನಿ ಚಿತ್ರದ ನಂತರ ತುಂಬಾನೇ ಜನಪ್ರಿಯತೆಯನ್ನು ಗಳಿಸಿದ್ದರು. ಕಷ್ಟಪಟ್ಟು ಚಿತ್ರದ ಪಾತ್ರಗಳಿಗೆ ಜೀವ ತುಂಬಿದ್ದ ನಟ ತನ್ನ ಜೀವಕ್ಕೆ ಜೀವ ತುಂಬುವ ಮನಸ್ಸು ಆಗಲಿಲ್ಲ. ಬದಲಾಗಿ ತನ್ನ ಜೀವವನ್ನೇ ಬಿಟ್ಟುಬಿಟ್ಟರು.








