kirik party 2
ಸ್ಯಾಂಡಲ್ ವುಡ್ ನಲ್ಲಿ ರಿಷಬ್ ಶೆಟ್ಟಿ – ರಕ್ಷಿತ್ ಶೆಟ್ಟಿ ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ ಸೂಪರ್ ಹಿಟ್ ಯುವಕರು ಅದ್ರಲ್ಲೂ ಕಾಲೇಜು ವಿದ್ಯಾರ್ಥಿಗಲ ಫೇವರೇಟ್ ಸಿನಿಮಾವಾಗಿ ಬ್ಲಾಕ್ ಬಾಸ್ಟರ್ ಸಕ್ಸಸ್ ಕಂಡಿದ್ದ ಸಿನಿಮಾ ಅಂದ್ರೆ ಅದು ಕಿರಿಕ್ ಪಾರ್ಟಿ. ಈ ಚಿತ್ರದ ಯಶಸ್ಸಿನ ನಂತರ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಮತ್ತು ರಿಷಬ್ ಶೆಟ್ಟಿ ಸಹ ಸಾಲು ಸಾಲು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾದ್ರು. ಇದೀಗ ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಕಾಂಬಿನೇಷನ್ ಮತ್ತೆ ಒಂದಾಗ್ತಾಯಿದೆ. ಅದು ಕೂಡ “ಕಿರಿಕ್ ಪಾರ್ಟಿ -2” ಗೆ.. ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ನಟಿಸಿದ್ದ ‘ಕಿರಿಕ್ ಪಾರ್ಟಿ’ ಸಿನಿಮಾ ಪ್ರೇಕ್ಷಕರನ್ನು ಮೋಡಿಗೊಳಿಸಿತ್ತು. ಸಿನಿಮಾದಲ್ಲಿದ್ದ ಲವ-ಲವಿಕೆ, ಹಾಸ್ಯ, ತೆಳುವಾದ ಪ್ರೇಮಕತೆ ಪ್ರೇಕ್ಷಕರನ್ನು ಫಿದಾಗೊಳಿಸಿತ್ತು. ಹೌದು, ಕಿರಿಕ್ ಪಾರ್ಟಿಯ ಎರಡನೇ ಭಾಗ ಮಾಡುವುದು ಖಚಿತವಾಗಿದೆ.
ಹೌದು ಸದ್ಯ ರಕ್ಷಿತ್ ಶೆಟ್ಟಿ ಅವರೇ ಸಿನಿಮಾದ ನಾಯಕರಾಗಲಿದ್ದು, ಕಿರಿಕ್ ಪಾರ್ಟಿ 1 ರಲ್ಲಿದ್ದ ರಾರಾಬಳಗ ಈ ಚಿತ್ರದಲ್ಲೂ ಇರಲಿದೆ ಎನ್ನಲಾಗಿದೆ. ಆದ್ರೆ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಚಿತ್ರದಲ್ಲಿರುವುದು ಅನುಮಾನ. ಆದ್ರೆ ಮತ್ತೊಬ್ಬ ಕಿರಿಕ್ ಬೆಡಗಿ ಸಂಯುಕ್ತಾ ಹೆಗ್ಡೆ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಚಾನ್ಸ್ ಇದೆ. ಇನ್ನೂ ಈ ಸಿನಿಮಾಗೆ ರಿಷಬ್ ಶೆಟ್ಟಿ ಅವರೇ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗಿದೆ
‘ಕಿರಿಕ್ ಪಾರ್ಟಿ 2’ ಕತೆ ರೆಡಿಯಾಗುತ್ತಿದ್ದು, ಪುಣ್ಯಕೋಟಿ ಸಿನಿಮಾಕ್ಕೂ ಮುನ್ನಾ ಕಿರಿಕ್ ಪಾರ್ಟಿ 2 ಸಿನಿಮಾ ಪ್ರಾರಂಭವಾಗಲಿದೆಯಂತೆ. ಸದ್ಯ ರಕ್ಷಿತ್ ಶೆಟ್ಟಿ ಚಂದನವನದ ಟಾಪ್ ನಟರಲ್ಲಿ ಒಬ್ಬರಾಗಿದ್ದು, ಸದ್ಯ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವನೇ ಶ್ರೀಮನ್ ನಾರಾಯಣದ ಬಳಿಕ ರಕ್ಷಿತ್ ಶೆಟ್ಟಿ ಅವರು ‘777 ಚಾರ್ಲಿ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ನಂತರ ‘ಸಪ್ತಸಾಗರದಾಚೆ ಯೆಲ್ಲೊ’ ಸಿನಿಮಾದಲ್ಲಿ ನಟಿಸಬೇಕಿದೆ. ಅದರ ನಂತರ ತಮ್ಮದೇ ಸ್ವಂತ ಸಿನಿಮಾದ ನಿರ್ದೇಶನ ಮಾಡಲಿದ್ದಾರೆ. ಅದರ ಕತೆ ಈಗಾಗಲೇ ತಯಾರಾಗಿದೆ. ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
kirik party 2
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel