ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲೇ ಇರುವ ನಟಿಯರಲ್ಲಿ ಒಬ್ರು ಅಂದ್ರೆ ಅದು ” ಕಿರಿಕ್ ಪಾರ್ಟಿಯ” ಕಿರಿಕ್ ನಟಿ ಸಂಯುಕ್ತಾ ಹೆಗ್ಡೆ. ಚಿಕ್ಕ ವಯಸ್ಸಿನಲ್ಲೇ ಸಿನಿರಂಗಕ್ಕೆ ಎಂಟ್ರಿಕೊಟ್ಟು ಸಕ್ಸಸ್ ಆಗಿ ತೆಲುಗಿನಲ್ಲೂ ಮಿಂಚಿರುವ ಸಂಯುಕ್ತಾ ತಮ್ಮ ಬೋಲ್ಡ್ ನೆಸ್ ಹಾಗೂ ಕಾಂಟ್ರವರ್ಸಿಗಳಿಂದ ಹೆಚ್ಚು ಫೇಮಸ್. ಬಿಗ್ ಬಾಸ್ ನಲ್ಲೂ ಕಾಂಟ್ರವರ್ಸಿ ಮೂಲಕವೇ ಹೊರಬಂದವರು ಸಂಯುಕ್ತಾ. ಅಷ್ಟೇ ಕಿರಿಕ್ ಪಾರ್ಟಿ ಚಿತ್ರದಲ್ಲಿನ ಅವರ ಪಾತ್ರ ಅವರಿಗೆ ಹೇಳಿ ಮಾಡಿಸಿದ್ದು. ಯಾಕೆಂದರೆ ಸಂಯುಕ್ತಾ ನಿಜ ಜೀವನದಲ್ಲೂ ಅಷ್ಟೇ ಡೇರಿಂಗ್ , ಬೋಲ್ಡ್ ಅಂಡ್ ಅಡ್ವೆಂಚರಸ್ ಇಷ್ಟ ಪಡುವ ಹುಡುಗಿ. ಇನ್ನೂ ಹಿಂದಿಯ ಖ್ಯಾತ ರಿಯಾಲಿಟಿ ಶೋ ರೋಡಿಸ್ ನಲ್ಲೂ ಸ್ಪರ್ಧಿಯಾಗಿದ್ದವರು ಸಂಯುಕ್ತಾ. ಅಷ್ಟಕ್ಕೂ ಈಗ ಸಂಯುಕ್ತಾ ಬಗ್ಗೆ ಪ್ರಸ್ತಾಪ ಮಾಡುತ್ತಿರುವುದು ಯಾಕೆ..? ಯಾವ ವಿಚಾರಕ್ಕೆ ಗೊತ್ತಾ. ಹಂಚಿಕೊಳ್ಳುತ್ತಿರುತ್ತಾರೆ.
ಸಾಹಸಗಳನ್ನ ಇಷ್ಟ ಪಡುವ ಡೇರಿಂಗ್ ಸಂಯುಕ್ತಾಗೆ ಬೆಸ್ಟ್ ಫ್ರೆಂಡ್ ಯಾರು ಗೊತ್ತಾ..? ಇದಕ್ಕೆ ಉತ್ತರ ಖುದ್ದು ಸಂಯುಕ್ತಾ ಅವರೇ ಸೋಷಿಯಲ್ ಮೀಡಿಯಾದಲ್ಲಿ ಒಮದು ವಿಡಿಯೋ ಹರಿಬಿಡುವ ಮೂಲಕ ತಿಳಿಸಿದ್ದಾರೆ. ಮೊದಲೇ ಹೇಳಿ ಕೇಳಿ ಅಡ್ವೆಂಚರ್ಸ್ ಇಷ್ಟ ಪಡುವ ಸಂಯುಕ್ತಾ ಆಗಾಗ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತವೆ. ಅದರಂತೆ ಇದೀಗ ಅವರ ಮತ್ತೊಮದು ವಿಡಿಯೋ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಹೊಸದೊಂದು ಬೈಕ್ ರೈಡ್ ವಿಡಿಯೋ ಅಪ್ಡೇಟ್ ಮಾಡಿರುವ ಸಂಯುಕ್ತಾ.. ಹುಡುಗಿಯರಿಗೆ ಡೈಮಂಡ್ ಬೆಸ್ಟ್ ಫ್ರೆಂಡ್ ಎನ್ನುತ್ತಾರೆ ಆದರೆ ನನಗೆ ಬೈಕ್ ಗಳೇ ಬೆಸ್ಟ್ ಫ್ರೆಂಡ್. ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಬೈಕ್ ರೈಡ್.. ಎಂದು ಪೋಸ್ಟ್ ಮಾಡಿದ್ದಾರೆ.ಸಂಯುಕ್ತಾ ಅವರ ಈ ಪೋಸ್ಟ್ ಗರ್ಲ್ ಪವರ್ ಸಂಕೇತ, ಹುಡುಗಿಯರು ಯಾವುದರಲ್ಲೂ ಹುಡುಗರಿಗಿಂತ ಕಮ್ಮಿಲ್ಲ ಎನ್ನುವುದನ್ನ ತೋರಿಸುತ್ತೆ ಅಂತ ಕೆಲವರು ಕಮೆಂಟ್ ಮಾಡಿದ್ರೆ, ಅನೇಕರು ಬಗೆಯ ಬಗೆಯ ಕಮೆಂಟ್ ಗಳ ಮೂಲಕ ಸಂಯುಕ್ತಾ ಅವರ ಬೈಕ್ ರೈಡ್ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.