Kirik Party : ಕಿರಿಕ್ ಪಾರ್ಟಿ ನೆನಪಿಸಿಕೊಂಡ ರಶ್ಮಿಕಾ ಮಂದಣ್ಣ…
ರಿಷಭ್ ಶೆಟ್ಟಿ ನಿರ್ದೇಶನದಲ್ಲಿ ರಕ್ಷಿತ್ ಶೆಟ್ಟಿ ನಟನೆಯ ಕಿರಿಕ್ ಪಾರ್ಟಿ ಸಿನಿಮಾ ತೆರೆಗೆ ಬಂದು ಡಿಸೆಂಬರ್ 30 ಕ್ಕೆ 6 ವರ್ಷ ತುಂಬಿದೆ. 2016 ರಲ್ಲಿ ತೆರೆಕಂಡ ಈ ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣ ಎಂಬ ನಾಯಕ ನಟಿ ಸಿನಿಮಾ ರಂಗಕ್ಕೆ ಪರಿಚಯವಾಗಿದ್ದರು.
ಹೊಸ ಅಲೆ ಸೃಷ್ಟಿಸಿದ ಈ ಚಿತ್ರದ ಮೂಲಕ ರಶ್ಮಿಕ ಕರ್ನಾಟಕ ಕ್ರಶ್ ಆಗಿದ್ದರು. ಜನಪ್ರಿಯತೆ ಸಿಕ್ಕಂತೆ ರಶ್ಮಿಕಾ ತೆಲುಗು ಮತ್ತು ಹಲವು ಭಾಷೆಗಳಿಗೆ ಎಂಟ್ರಿ ಕೊಟ್ಟರು. ಕನ್ನಡಕ್ಕಿಂತ ಹೆಚ್ಚಾಗಿ ಪರಭಾಷೆಯಲ್ಲಿ ಅವಕಾಶ ಪಡೆದ ನಂತರ ರಶ್ಮಿಕಾ ಕನ್ನಡವನ್ನ ಕನ್ನಡ ಚಿತ್ರಗಳನ್ನ ಕಡೆಗಣಿಸಿದ್ದಿದೆ. ಇದು ಹಲವರ ಕಣ್ಣು ಕಂಪಗಾಗಿಸಿತ್ತು.
ತೀರ ಇತ್ತೀಚೆಗೆ ರಶ್ಮಿಕಾ ಮಂದಣ್ಣ ಸಂದರ್ಶನವೊಂದರಲ್ಲಿ ತಮ್ಮ ಮೊದಲ ಚಿತ್ರದ ಬ್ಯಾನರ್ ಹೆಸರು ಹೇಳದೇ ಮಾತನಾಡಿದ್ದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು, ಇದೀಗ ಕಿರಿಕ್ ಪಾರ್ಟಿ ಬಿಡುಗಡೆಯಾಗಿ 6 ವರ್ಷ ಕಳೆದ ನೆನಪಲ್ಲಿ ರಶ್ಮಿಕಾ ಈ ಚಿತ್ರವನ್ನ ನೆನಪಿಸಿಕೊಂಡಿದ್ದಾರೆ.
‘ಕಿರಿಕ್ ಪಾರ್ಟಿಗೆ ಆರು ವರ್ಷ. ಎಲ್ಲವೂ ಆರಂಭವಾದ ದಿನ’ ಎಂದು ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ. ಜತೆಗೆ ‘ಕಿರಿಕ್ ಪಾರ್ಟಿ’ ಪೋಸ್ಟರ್ ಹಂಚಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಹಂಚಿಕೊಂಡಿರುವ ಈ ಸ್ಟೇಟಸ್ನ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.
Kirik Party: Rashmika Mandanna remembers the Kirik Party…