ಬೆಂಗಳೂರಿನಲ್ಲಿ ಪುಂಡರ ಪುಂಡಾಟ ಹಿನ್ನೆಲೆ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಲಾಗಿದೆ. ಸಭೆಯಲ್ಲಿ IGP ಚಂದ್ರಶೇಖರ್ , ಸಿಸಿಬಿ ಜಂಟಿ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ , ಹೆಚ್ಚುವರಿ ಪೊಲೀಸ್ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಸೇರಿದಂತೆ ಇತರರು ಬಾಗಿಯಾಗಿದ್ದರು. ಸಭೆಯಲ್ಲಿ ಹೇಮಂತ್ ನಿಂಬಾಳ್ಕರ್ ಅವರೊಂದಿಗೆ ಚಂದ್ರಶೇಖರ್ ಮತ್ತು ಸಂದೀಪ್ ಅವರು ಪ್ರಕರಣ ಸಂಬಂಧ ಹಾಗೂ ಮುಮದಿನ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇನ್ನೂ ಘಟನೆ ಸಂಬಂಧ ಚಂದ್ರಶೇಖರ್ ಮತ್ತು ಸಂದೀಪ್ ಪಾಟೀಲ್ ರಿಂದ ಹೇಮಂತ್ ನಿಂಬಾಳ್ಕರ್ ಅವರು ಮಾಹಿತಿ ಸಂಗ್ರಹಿಸಿದ್ದಾರೆ. ಇಲ್ಲಿಯವರೆಗೂ ಎಷ್ಟು ಜನ ಆರೋಪಿಗಳ ಬಂಧನವಾಗಿದೆ. ಎಷ್ಟು ಜನ ಭಾಗಿಯಾಗಿದ್ರು. ಎರಡು ಠಾಣೆಗಳ ವಸ್ತು ಸ್ಥಿತಿ , ಇನ್ನೂ ಎಷ್ಟು ಪ್ರಮುಖ ಆರೋಪಿಗಳ ಬಂಧನವಾಗಬೇಕು , ಯಾವ ಯಾವ ರೌಡಿಶೀಟರ್ ನಿನ್ನೆ ಎಲ್ಲಿ ಎಲ್ಲಿಗೆ ಹೋಗಿದ್ರು ಎಂಬುದರ ಕುರಿತಾದ ಸವಿವರವಾದ ಮಾಹಿತಿ ಪಡೆದುಕೊಂಡಿದ್ದಾರೆ.
ಈ ವೇಳೆ ಯಾವ ರೌಡಿಶೀಟರ್ ಏರಿಯಾದಿಂದ ನಾಪತ್ತೆಯಾಗಿದ್ದಾರೆ, ಅವರ ಮೇಲೆ ನಿಗಾ ವಹಿಸುವಂತೆ ಹೇಮಂತ್ ನಿಂಬಾಳ್ಕರ್ ಸೂಚನೆ ನೀಡಿದ್ದಾರೆ. ಇದರ ಜೊತೆಗೆ ಸಿಸಿಬಿ ಪೊಲೀಸರ ಮುಖಾಂತರ ಡಿಜೆ ಹಳ್ಳಿ , ಕೆಜಿಹಳ್ಳಿ ರೌಡಿ ಗಳ ಪಟ್ಟಿ ತಯಾರಿಸಿ ನಿನ್ನೆ ಎಲ್ಲಿದ್ದರೂ ಎಂಬುದರ ಬಗ್ಗೆ ಮಾಹಿತಿ ಪಡೆಯಬೇಕು ಎಂದು ಸೂಚಿಸಿದ್ದಾರೆ.








