ಬೆಳಗಾವಿ: ಸ್ಯಾಂಡಲ್‍ವುಡ್‍ನ ಪ್ರೇಮಕವಿ ಎಂದೇ ಖ್ಯಾತರಾದ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಕಲ್ಯಾಣ್ ಪತ್ನಿ ಅಶ್ವಿನಿ ವಿವಾಹ ವಿಚ್ಛೇದನ ಕೋರಿ ಬೆಳಗಾವಿಯ ಮಾಳಮಾರುತಿ ಠಾಣೆಗೆ ದೂರು ನೀಡಿದ್ದಾರೆ. ಆದರೆ, ಪತ್ನಿ ದೂರಿಗೆ ಪ್ರತಿಯಾಗಿ ಕೆ.ಕಲ್ಯಾಣ್ ಕೂಡ ನನ್ನ ಪತ್ನಿಯನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಸೆ.30ರಂದು ದೂರು ನೀಡಿದ್ದಾರೆ.
ಮಾಟ-ಮಂತ್ರದ ಮೂಲಕ ನನ್ನ ಪತ್ನಿ ಹಾಗೂ ಅತ್ತೆ ಮಾವನನ್ನು ಬ್ಲಾಕ್‍ಮೇಲ್ ಮಾಡಿ ಕಿಡ್ನಾಪ್ ಮಾಡಿದ್ದಾರೆ. ನಾನು ಕಿಡ್ನಾಪ್ ಕೇಸ್ ಹಾಕುತ್ತಿದ್ದಂತೆ 3 ತಿಂಗಳಿಂದ ನಾಪತ್ತೆಯಾದವರು ಪ್ರತ್ಯಕ್ಷರಾಗಿದ್ದು, ಪತ್ನಿ ಮೂಲಕ ಡೈವೋರ್ಸ್‍ಗೆ ಅರ್ಜಿ ಹಾಕಿಸಿದ್ದಾರೆ ಎಂದು ಕಲ್ಯಾಣ್ ಆರೋಪಿಸಿದ್ದಾರೆ.
ಕೆ.ಕಲ್ಯಾಣ್ ಪತ್ನಿ ಅಶ್ವಿನಿ ಆರೋಪವೇನು..!
ಕೆ.ಕಲ್ಯಾಣ್‍ರ ನಡೆ-ನಡತೆಯಿಂದ ಬೇಸತ್ತಿದ್ದೇನೆ. ಮಾನಸಿಕ, ದೈಹಿಕ ಕಿರುಕುಳದಿಂದ ಬೇಸತ್ತು ವಿಚ್ಚೇದನ ಕೋರಿ ದೂರು ನೀಡಿದ್ದೇನೆ. ನಾನು ಪತಿ ಕಲ್ಯಾಣ್‍ರಿಂದ ದೂರವಾಗಿಲ್ಲ. ನನ್ನನ್ನು ಯಾರೂ ಕಿಡ್ನಾಪ್ ಮಾಡಿಲ್ಲ. ಕಿರುಕುಳದಿಂದಾಗಿ ನಾನು ಬೆಳಗಾವಿಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದೇನೆ ಎಂದು ಕಲ್ಯಾಣ್ ಪತ್ನಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಹೇಳದೇ ಕೇಳದೆ ನಮ್ಮ ಮನೆಯ ಸದಸ್ಯರನ್ನು ಬಂಧಿಸಿದ್ದಾರೆ. ನಮ್ಮ ಸಂಬಂಧಿಕರ ವಿರುದ್ಧ ಕಲ್ಯಾಣ್ ದೂರು ನೀಡಿದ್ದಾರೆ. ಸೆ.26ರಂದು ನಾನು ದೂರು ನೀಡಿದ್ರೂ ನನ್ನ ಕಂಪ್ಲೆಂಟ್ ಸ್ವೀಕರಿಸಲಿಲ್ಲ. ನನ್ನ ನಂತರ ದೂರು ನೀಡಿದ ಕಲ್ಯಾಣ್ ದೂರಿನ ಮೇಲೆ ಎಫ್‍ಐಆರ್ ಮಾಡಿದ್ದಾರೆ. ಹೇಳದೆ ಕೇಳದೆ ನಮ್ಮ ಮನೆಯ ಸದಸ್ಯರನ್ನು ಬಂಧಿಸಿದು. ಮೊನ್ನೆ ರಾತ್ರೋರಾತ್ರಿ 11 ಗಂಟೆಗೆ ಬಂದು ನಮ್ಮ ಮನೆಯ ಸದಸ್ಯರನ್ನು ಬಂಧಿಸಿದ್ರು. ಪೊಲೀಸರು ಕೌನ್ಸೆಲಿಂಗ್ ನಡೆಸುತ್ತಿದ್ದಾರೆ. ಕೌನ್ಸೆಲಿಂಗ್ ಕಳಿಕ ಎಲ್ಲವನ್ನು ಹೇಳುತ್ತೇನೆ ಎಂದು ಕಲ್ಯಾಣ್ ಪತ್ನಿ ಅಶ್ವಿನಿ ಹೇಳಿದ್ದಾರೆ.
ಮಾಟ ಮಂತ್ರವೇ ದಾಂಪತ್ಯ ಕಲಹಕ್ಕೆ ಕಾರಣ: ಕೆ.ಕಲ್ಯಾಣ್
ಮಾಟ ಮಂತ್ರದಿಂದಲೇ ನಮ್ಮ ದಾಂಪತ್ಯದಲ್ಲಿ ಕಲಹ ಮೂಡಿಸಲಾಗಿದೆ. ನಮ್ಮ ಮನೆಯಲ್ಲಿ ಮನೆಗೆಲಸ ಮಾಡಿಕೊಂಡಿದ್ದ ಗಂಗಾ ಕುಲಕರ್ಣಿ ಹಾಗೂ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಡಗಿ ಗ್ರಾಮದ ಶಿವಾನಂದ ವಾಲಿ ಎಂಬುವರೇ ನಮ್ಮ ಗಲಾಟೆಗೆ ಕಾರಣ ಎಂದು ಕಲ್ಯಾಣ್ ಆರೋಪಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಚಿತ್ರಸಾಹಿತಿ ಕೆ.ಕಲ್ಯಾಣ್, ಕಳೆದ ಜನವರಿಯಿಂದ ನನ್ನ ಪತ್ನಿ ಅಶ್ವಿನಿ ನನ್ನಿಂದ ದೂರವಾಗಿದ್ದಾಳೆ. ಬೆಳಗಾವಿಯಲ್ಲಿ ಬೇರೆ ಮನೆಯಲ್ಲಿ ವಾಸವಾಗಿದ್ದಾರೆ. ಕಳೆದ ವರ್ಷದ ಸೆಪ್ಟೆಂಬರ್‍ನಲ್ಲಿ ಮನೆಕೆಲಸಕ್ಕೆಂದು ಬಂದ ಗೀತಾ ಕುಲಕರ್ಣಿ ಎಂಬಾಕೆ, ದೆವ್ವ-ಭೂತದ ಕತೆ ಕಟ್ಟಿ, ಮಾನಸಿಕವಾಗಿ ಭಯ ಹುಟ್ಟಿಸಿದ್ದಾಳೆ. ಶಿವಾನಂದ ವಾಲಿ ಮೂಲಕ ಮಾಟ-ಮಂತ್ರ ಮಾಡಿಸಿ ನಮ್ಮನ್ನು ದೂರ ಮಾಡಿದ್ದಾರೆ ಎಂಬುದು ಕೆ.ಕಲ್ಯಾಣ್ ಆರೋಪವಾಗಿದೆ.
ನಾನು ನನ್ನ ಹೆಂಡತಿ ಚೆನ್ನಾಗಿದ್ದೇವೆ. ಪ್ರತಿಯೊಬ್ಬರ ಸಂಸಾರದಲ್ಲಿ ಏಳುಬೀಳು ಸಹಜ. ಗಂಗಾ ಕುಲಕರ್ಣಿ ನಮ್ಮ ಮನೆಗೆ ಕೆಲಸಕ್ಕೆ ಬಂದ ಮೇಲೆ ಪತ್ನಿ ಬದಲಾಗಿದ್ದಾಳೆ. ನನ್ನ ಪತ್ನಿ ಭೇಟಿಗೆ ಬಿಡುತ್ತಿಲ್ಲ, ನಮ್ಮಿಬ್ಬರ ನಡುವೆ ಯವುದೇ ಮನಸ್ತಾಪ ಇಲ್ಲ ಎಂದು ಕಲ್ಯಾಣ್ ಹೇಳಿದ್ದಾರೆ.
ಶಿವಾನಂದ ವಾಲಿ ಅರೆಸ್ಟ್ ಆಗುವವರೆಗೆ ಸುಮ್ಮನೇ ಇದ್ದ ಪತ್ನಿ, ಈಗ ನನ್ನ ಮೇಲೆ ಲೈಂಗಿಕ, ದೈಹಿಕ ದೌರ್ಜನ್ಯ ಎಂದು ದೂರು ನೀಡಿದ್ದಾರೆ. ವಿಚ್ಛೇದನ ಬೇಕು ಎಂದು ನನ್ನ ಪತ್ನಿ ಅಶ್ವಿನಿ ದೂರು ನೀಡಿರುವುದರ ಹಿಂದೆ ಯಾರದ್ದೂ ಕೈವಾಡವಿದೆ. ಎಲ್ಲಾ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ. ನಮ್ಮ ಕುಟುಂಬದವರು, ಪತ್ನಿ ಕುಟುಂಬದರು ಸೇರಿ ಬಗೆಹರಿಸುವ ವಿಶ್ವಾಸವಿದೆ ಎಂದು ಕೆ.ಕಲ್ಯಾಣ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.