KKR vs DC | ಕೊಲ್ಕತ್ತಾ vs ಡೆಲ್ಲಿ ಕಾಳಗ ಗೆಲುವು ಯಾರಿಗೆ..?
ಇಂಡಿಯನ್ ಪ್ರಿಮಿಯರ್ ಲೀಗ್ ನ 19 ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸವಾಲು ಎದುರಿಸಲಿದೆ. ಬ್ರೆಬೋರ್ನ್ ಮೈದಾನದಲ್ಲಿ ಇಂದಿನ ಪಂದ್ಯ ನಡೆಯಲಿದ್ದು, ಉಭಯ ತಂಡಗಳು ಗೆಲುವಿಗಾಗಿ ಗುದ್ದಾಟ ನಡೆಸಲಿದೆ.
ಸ್ಟ್ರೆಂಥ್ ಮತ್ತು ವೀಕ್ನೆಸ್
ಕೊಲ್ಕತ್ತಾ ನೈಟ್ ರೈಡರ್ಸ್ ತಂಡ, ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ ತಂಡ ಬಲಿಷ್ಠವಾಗಿದೆ. ಬ್ಯಾಟಿಂಗ್, ಬೌಲಿಂಗ್ ನಲ್ಲಿ ಅದ್ಭುತ ಆಟಗಾರರಿದ್ದಾರೆ. ಮುಖ್ಯವಾಗಿ ಆಲ್ ರೌಂಡರ್ ಗಳು ತಂಡದ ಪ್ರಮುಖ ಬ್ರಹ್ಮಾಸ್ತ್ರವಾಗಿದ್ದಾರೆ.
ಆ್ಯಂಡ್ರೆ ರಸೆಲ್, ಪ್ಯಾಟ್ ಕಮಿನ್ಸ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ಸುನೀಲ್ ನರೈನ್ ತಂಡದ ಕೀ ಪ್ಲೇಯರ್ ಗಳಾಗಿದ್ದಾರೆ. ಇವರ ಜೊತೆಗೆ ಬೌಲಿಂಗ್ ನಲ್ಲಿ ಉಮೇಶ್ ಯಾದವ್ ಮ್ಯಾಚ್ ವಿನ್ನರ್ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಪೇಪರ್ ಮೇಲೆ ಬಲಿಷ್ಠವಾಗಿ ಕಂಡರೂ ತಾಕತ್ತಿಗೆ ತಕ್ಕ ಆಟವನ್ನಾಡುತ್ತಿಲ್ಲ. ಟೂರ್ನಿಯಲ್ಲಿ ಈ ವರೆಗೂ ಮೂರು ಪಂದ್ಯಗಳನ್ನಾಡಿರುವ ಡೆಲ್ಲಿ ತಂಡ, ಎರಡು ಗೆಲುವು ದಾಖಲಿಸಿ ಏಳನೇ ಸ್ಥಾನದಲ್ಲಿದ್ದಾರೆ.
ಡೇವಿಡ್ ವಾರ್ನರ್, ಪೃಥ್ವಿ ಷಾ, ರೋಮ್ವನ್ ಪೊವೆಲ್, ರಿಷಬ್ ಪಂತ್, ಸರ್ಫರಾಜ್ ಖಾನ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೀಪ್ಲೇಯರ್ ಗಳಾಗಿದ್ದಾರೆ.
ಸಣ್ಣಪುಟ್ಟ ಬದಲಾವಣೆಗಳು ದೆಹಲಿ ತಂಡದ ವಿಶ್ವಾಸ ಹೆಚ್ಚಿಸಬಹದು.
ಪಿಚ್ ಕಂಡೀಷನ್:
ಬ್ರೆಬೋರ್ನ್ ಮೈದಾನದಲ್ಲಿ ಎಷ್ಟು ರನ್ಗಳಿಸಿದರೂ ಸಾಕಾಗುವುದಿಲ್ಲ ಅನ್ನುವ ಹಾಗಾಗಿದೆ. ಹೀಗಾಗಿ ಬ್ಯಾಟ್ಸ್ಮನ್ಗಳ ಆಟದ ಮೇಲೆ ಬೌಲರ್ಗಳು ಪಂದ್ಯ ಗೆಲ್ಲಿಸಿಕೊಡಬಹುದಾದ ಮಾತು ಹೆಚ್ಚಾಗಿದೆ.
KKR vs DC Match Prediction