1 ಓವರ್ 5 ರನ್ 4 ವಿಕೆಟ್ – ಆಂಡ್ರೆ ರಸೆಲ್ ಬೆಂಕಿ ಬೌಲಿಂಗ್
ಇಂದು ನಡೆಯುತ್ತಿರುವ ವೀಕೆಂಡ್ ಐಪಿಎಲ್ ನ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಕೋಲ್ಕತ್ತಾಗೆ 157 ರನ್ಗಳ ಗುರಿ ನೀಡಿದೆ. ಉತ್ತರವಾಗಿ ಕೆಕೆಆರ್ 10 ಓವರ್ಗಳಲ್ಲಿ 4 ವಿಕೆಟ್ಗೆ 63 ರನ್ ಗಳಿಸಿ ಆಟ ಮುಂದುವರೆಸುತ್ತಿದೆ. ವೆಂಕಟೇಶ್ ಮತ್ತು ರಿಂಕು ಸಿಂಗ್ ಕ್ರೀಸ್ನಲ್ಲಿದ್ದಾರೆ. ಶ್ರೇಯಸ್ ಅಯ್ಯರ್ ಅವರನ್ನು ಯಶ್ ಔಟ್ ಮಾಡಿದರು.
ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು. ನಾಯಕ ಹಾರ್ದಿಕ್ ಪಾಂಡ್ಯ ಸತತ ಮೂರನೇ ಅರ್ಧಶತಕ ಗಳಿಸಿ ಗರಿಷ್ಠ 67 ರನ್ ಗಳಿಸಿದರು. ಕೆಕೆಆರ್ ಪರ ಆಂಡ್ರೆ ರಸೆಲ್ 4 ವಿಕೆಟ್ ಪಡೆದು ಮಿಂಚಿದರು.
ಗುರಿ ಬೆನ್ನಟ್ಟಿದ ಕೆಕೆಆರ್ ಕಳಪೆ ಆರಂಭ ಪಡೆಯಿತು. ಮೊದಲ ಓವರ್ನಲ್ಲಿ ಸ್ಯಾಮ್ ಬಿಲ್ಲಿಂಗ್ಸ್ (4) ಮತ್ತು ಮೂರನೇ ಓವರ್ನಲ್ಲಿ ಸುನಿಲ್ ನರೈನ್ (5) ಔಟಾದರು. ಈ ಎರಡೂ ವಿಕೆಟ್ಗಳು ಶಮಿ ಖಾತೆಗೆ ಬಂದು ಬಿದ್ದವು. ನಿತೀಶ್ ರಾಣಾ ಕೂಡ 2 ರನ್ ಗಳಿಸಿ ಫರ್ಗುಸನ್ ಗೆ ವಿಕೆಟ್ ನೀಡಿದರು. ಪವರ್ ಪ್ಲೇ ತನಕ ಕೆಕೆಆರ್ ಸ್ಕೋರ್ 34/3 ಆಗಿತ್ತು.
ಗುಜರಾತ್ ಆಡುವಾಗದ ಕೊನೆಯ ಓವರ್ ಎಸೆಯಲು ಆಂಡ್ರೆ ರಸೆಲ್ ಬೌಲ್ ಕೈಗೆತ್ತಿಕೊಂಡರು. 6 ಎಸೆತಗಳಲ್ಲಿ ಕೇವಲ 5 ರನ್ ನೀಡಿ 4 ವಿಕೆಟ್ ಕಬಳಿಸಿ ಟೈಟಾನ್ಸ್ ತಂಡವನ್ನು ನಡುಗಿಸಿದರು. ಓವರ್ನ ಮೊದಲ ಎರಡು ಎಸೆತಗಳಲ್ಲಿ ಅಭಿನವ್ ಮನೋಹರ್ (2) ಮತ್ತು ಲಾಕಿ ಫರ್ಗುಸನ್ (0) ಅವರನ್ನು ಔಟ್ ಮಾಡಿದರು. ಇಬ್ಬರೂ ಡೀಪ್ ಮಿಡ್ವಿಕೆಟ್ನಲ್ಲಿ ರಿಂಕು ಸಿಂಗ್ಗೆ ಕ್ಯಾಚ್ ನೀಡಿದರು. ಓವರ್ನ 5ನೇ ಎಸೆತದಲ್ಲಿ ರಾಹುಲ್ ತೆವಾಟಿಯಾ (17) ಕೊನೆಯ ಎಸೆತದಲ್ಲಿ ಯಶ್ ದಯಾಳ್ ಶೂನ್ಯಕ್ಕೆ ಔಟಾದರು.
ಐಪಿಎಲ್ನಲ್ಲಿ ಇತಿಹಾಸದಲ್ಲಿ ಕೇವಲ 1 ಓವರ್ನಲ್ಲಿ 4 ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ರಸೆಲ್ ಪಾತ್ರರಾದರು.