KKR vs RR Match | ರಾಜಸ್ಥಾನ್ ರಾಯಲ್ಸ್ ತಂಡದ ಪ್ಲೇಯಿಂಗ್ 11
ಸಂಜು ಸ್ಯಾಮ್ಸನ್ ನಾಯಕತ್ವ ರಾಜಸ್ಥಾನ್ ರಾಯಲ್ಸ್ ತಂಡ ಇಂದು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಾಟ ನಡೆಸಲಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದಿನ ಪಂದ್ಯ ನಡೆಯಲಿದ್ದು, 47ನೇ ಪಂದ್ಯವಾಗಿದೆ. ಈ ಆವೃತ್ತಿಯಲ್ಲಿ ಈ ಉಭಯ ತಂಡಗಳು ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿವೆ. ಕಳೆದ ಬಾರಿ ಸೆಣಸಾಟ ನಡೆಸಿದ್ದಾಗ ರಾಜಸ್ಥಾನ್ ರಾಯಲ್ಸ್ ತಂಡ ಏಳು ರನ್ ಗಳೊಂದಿಗೆ ಗೆಲುವು ಸಾಧಿಸಿತ್ತು.
ಶ್ರೇಯಸ್ ಅಯ್ಯರ್ ನಾಯಕತ್ವದ ಕೆಕೆಆರ್, ಸಂಜು ಸ್ಯಾಮ್ಸನ್ ಸಾರಥ್ಯದ ರಾಜಸ್ಥಾನ್ ತಂಡಗಳು ಈ ಆವೃತ್ತಿಯಲ್ಲಿ ತಲಾ 9 ಪಂದ್ಯಗಳನ್ನಾಡಿವೆ. ಈ ಪೈಕಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಮೂರು ಪಂದ್ಯಗಳಲ್ಲಿ ಗೆದ್ದು, ಆರು ಮ್ಯಾಚ್ ಗಳಲ್ಲಿ ಸೋಲು ಕಂಡಿದೆ. ಇತ್ತ ರಾಜಸ್ಥಾನ್ ರಾಯಲ್್ ತಂಡ ಆರು ಪಂದ್ಯಗಳಲ್ಲಿ ಗೆದ್ದು ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ. ರಾಜಸ್ಥಾನ್ ರಾಯಲ್ಸ್ ತಂಡ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ರಾಜಸ್ಥಾನ್ ರಾಯಲ್ಸ್ ತಂಡ ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲು ಕಂಡಿದೆ. ಈ ಪಂದ್ಯದಲ್ಲಿ ಜೋಸ್ ಬಟ್ಲರ್ 67 ರನ್ ಗಳಿಸಿದ್ದರು.

ರಾಜಸ್ಥಾನ್ ಇಂದಿನ ಪಂದ್ಯ ಗೆದ್ದರೇ ಪ್ಲೇ ಆಫ್ಸ್ ಗೆ ಮತ್ತಷ್ಟು ಹತ್ತಿರವಾಗಲಿದೆ. ಹೀಗಾಗಿ ಗೆಲುವಿಗಾಗಿ ಸಾಕಷ್ಟು ಪ್ಲಾನ್ ಮಾಡಿಕೊಂಡಿದೆ.
ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್ ಉತ್ತಮ ಆರಂಭ ನೀಡುತ್ತಿದ್ದಾರೆ. ನಾಯಕ ಸಂಜು ಸ್ಯಾಮ್ಸನ್, ಪರಾಗ್ ಮತ್ತು ಮಿಚೆಲ್ ಮಿಂಚುತ್ತಿದ್ದಾರೆ. ಶಿಮ್ರಾನ್ ಹಿಟ್ಮೇಯರ್ ಅಬ್ಬರಿಸಬೇಕಾಗಿದೆ. ಬೌಲಿಂಗ್ ನಲ್ಲಿ ಯಜುವೇಂದ್ರ ಚಹಲ್ ಚಮಕ್ ತೋರಿದ್ದಾರೆ. ಅಶ್ವಿನ್ ಸೈಲೆಂಟ್ ಫರ್ಫಾಮರ್. ಪ್ರಸಿಧ್ ಮತ್ತು ಕುಲ್ ದೀಪ್ ಸೇನ್ ವಿಕೆಟ್ ಬೇಟೆಯಾಡಿದ್ದಾರೆ. ಅನುಭವಿ ಟ್ರೆಂಟ್ ಬೋಲ್ಟ್ ಒಂಚೂರು ಮೊನಚು ಕಂಡುಕೊಳ್ಳಬೇಕಿದೆ. ಇಷ್ಟಾದರೆ ರಾಜಸ್ಥಾನ ತಂಡವನ್ನು ಸೋಲಿಸುವುದು ಕಷ್ಟ.
ಪ್ಲೇಯಿಂಗ್ ಇಲೆವೆಲ್
ಜೋಸ್ ಬಟ್ಲರ್
ದೇವದತ್ ಪಡಿಕ್ಕಲ್
ಸಂಜು ಸ್ಯಾಮ್ಸನ್
ಡೆರಿನ್ ಮಿಟ್ಚೆಲ್
ಶಿಮ್ರೋನ್ ಹೆಟ್ಮೇರ್
ರಿಯಾನ್ ಪರಾಗ್
ಆರ್. ಅಶ್ವಿನ್
ಟ್ರೆಂಟ್ ಬೌಲ್ಟ್
ಪ್ರಸಿದ್ದ್ ಕೃಷ್ಣ
ಯುಜುವೇಂದ್ರ ಚಾಹಲ್
ಕುಲದೀಪ್ ಸೇನ್
KKR vs RR Match Rajasthan Royals Playing 11








