14 ವರ್ಷಗಳ ದಾಖಲೆಯನ್ನ ಪುಡಿಗಟ್ಟಿದ `ರೋ’`ರಾ’ ಜೋಡಿ
ದುಬೈ : ಐಸಿಸಿ ಟಿ 20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಗೆಲುವಿನ ಖಾತೆ ತೆರೆದಿದೆ.
ಅಫ್ಘಾನ್ ವಿರುದ್ಧ ಭಾರತ ಕ್ರಿಕೆಟ್ ತಂಡ ಭರ್ಜರಿ ಜಯ ಸಾಧಿಸಿದೆ.
ಈ ಪಂದ್ಯದಲ್ಲಿ ಭಾರತ ತಂಡದ ಆರಂಭಿಕರಾದ ರೋಹಿತ್ ಶಮಾ ಮತ್ತು ಕೆ.ಎಲ್ ರಾಹುಲ್ ಆಫ್ಘಾನ್ ಬೌಲರ್ ಗಳ ಬೆಂಡೆತ್ತಿದರು.
ಈ ಜೋಡಿ ಅಬ್ಬರಕ್ಕೆ 14 ವರ್ಷಗಳ ಹಿಂದಿನ ಆರಂಭಿಕ ಜೋಡಿಯ ದಾಖಲೆಯೊಂದು ಛಿದ್ರವಾಗಿದೆ.
ಹೌದು..! ಅಫ್ಘಾನ್ ವಿರುದ್ಧ ಟಾಸ್ ಸೋತ ಭಾರತ ನಿಗದಿತ 20 ಓವರ್ ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 210 ರನ್ ಗಳಿಸಿತ್ತು.
ಈ ಟಾರ್ಗೆಟ್ ಬಿನ್ನುಹತ್ತಿದ ಅಘ್ಘಾನಿಸ್ತಾನ ನಿಗದಿತ ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 144ರನ್ ಪೇರಿಸಲಷ್ಟೆ ಶಕ್ತವಾಯಿತು.
ಈ ಮೂಲಕ ಭಾರತ ತಂಡ 66 ರನ್ ಗಳ ಭರ್ಜರಿ ಜಯ ದಾಖಲಿಸಿತು.
ಭಾರತದ ಪರ ಉತ್ತಮವಾಗಿ ಬ್ಯಾಟ್ ಬೀಸಿದ ಆರಂಭಿಕ ಆಟಗಾರರಾದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ಮೊದಲ ವಿಕೆಟ್ ಗೆ ದಾಖಲೆಯ 140 ರನ್ ಗಳ ಜೊತೆಯಾಟವಾಡಿದರು. ಜೊತೆಗೆ ತಲಾ ಅರ್ಧಶತಕವನ್ನೂ ಕೂಡ ಪೂರೈಸಿಕೊಂಡರು.
ಬೌಂಡರ್, ಸಿಕ್ಸರ್ ಗಳ ಮಳೆ ಸುರಿಸಿದ ಈ ಜೋಡಿ 89 ಎಸೆತಗಳಲ್ಲಿ 140 ರನ್ ಗಳ ಜೊತೆಯಾಟವಾಡಿ ಭದ್ರಬುನಾದಿ ಹಾಕಿಕೊಟ್ಟಿತು.
ಅಲ್ಲದೆ 2007ರ ಟಿ20 ವಿಶ್ವಕಪ್ ನಲ್ಲಿ ಗೌತಮ್ ಗಂಭೀರ್ ಮತ್ತು ವೀರೇಂದ್ರ ಸೆಹ್ವಾಗ್ 136ರನ್ ಗಳ ಜೊತೆಯಾಟದ ದಾಖಲೆಯನ್ನು ಬ್ರೇಕ್ ಮಾಡಿದೆ.