Aakash Chopra | ವಿಶ್ವಕಪ್ ನಲ್ಲಿ ಟೀಂ ಇಂಡಿಯಾದ ಟಾಪ್ ಸ್ಕೋರರ್ ಯಾರಾಗ್ತಾರೆ ?
ಟಿ 20 ವಿಶ್ವಕಪ್ 2022 ಮೆಗಾ ಸಮರಕ್ಕೆ ಇನ್ನೆರಡು ದಿನಗಳು ಮಾತ್ರ ಬಾಕಿ ಉಳಿದಿವೆ. ಜಿಲಾಂಗ್ ವೇದಿಕೆಯಾಗಿ ಅಕ್ಟೋಬರ್ 16 ರಂದು ಶ್ರೀಲಂಕಾ – ನಮಿಬಿಯಾ ಮ್ಯಾಚ್ ನೊಂದಿಗೆ ಮೆಗಾ ಈವೆಂಟ್ ಶುರುವಾಗಲಿದೆ.
ಇನ್ನು ಟೀಂ ಇಂಡಿಯಾದ ವಿಷಯಕ್ಕೆ ಬಂದರೇ ರೋಹಿತ್ ಶರ್ಮಾ ಸೇನೆ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 23 ರಂದು ಮೆಲ್ ಬಾರ್ನ್ ವೇದಿಕೆಯಾಗಿ ಪಾಕಿಸ್ತಾನ ತಂಡದ ವಿರುದ್ಧ ಸೆಣಸಲಿದೆ.
ಇದಕ್ಕೂ ಮುನ್ನಾ ಟೀಂ ಇಂಡಿಯಾ ಸದ್ಯ ಎರಡು ಪ್ರಾಕ್ಟೀಸ್ ಮ್ಯಾಚ್ ಗಳನ್ನಾಡಿದ್ದು, ಒಂದು ಪಂದ್ಯದಲ್ಲಿ ಗೆಲುವು ಕಂಡಿದ್ದರೇ ಎರಡನೇ ಪಂದ್ಯದಲ್ಲಿ ಸೋಲು ಕಂಡಿದೆ.

ಸೋಲುಂಡ ಪಂದ್ಯದಲ್ಲಿ ಕೆ.ಎಲ್.ರಾಹುಲ್ 74 ರನ್ ಗಳಿಸಿದರು. ಇದು ಹೀಗಿದ್ದರೇ ಈ ಬಾರಿಯ ಟಿ 20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾದ ಉಪನಾಯಕ ಕೆ.ಎಲ್.ರಾಹುಲ್ ಟೀಂ ಇಂಡಿಯಾ ಪರ ಟಾಪ್ ಸ್ಕೋರರ್ ಆಗಿ ನಿಲ್ಲಲಿದ್ದಾರೆ ಎಂದು ಭಾರತದ ಮಾಜಿ ಆಟಗಾರ ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ.
ರಾಹುಲ್ ಓಪನರ್ ಆಗಿರುವುದರಿಂದ 20 ಓವರ್ ಗಳು ಬ್ಯಾಟ್ ಬೀಸುವ ಅವಕಾಶಗಳು ಲಭಿಸಲಿವೆ. ಅದೇ ರೀತಿ ಆಸ್ಟ್ರೇಲಿಯಾ ಪಿಚ್ ಗಳು ಬ್ಯಾಟಿಂಗ್ ಗೆ ಅನುಕೂಲಕರವಾಗಿರುತ್ತವೆ.
ಅಲ್ಲಿನ ಪಿಚ್ ಗಳು ರಾಹುಲ್ ಬ್ಯಾಟಿಂಗ್ ಸ್ಟೈಲ್ ಗೆ ಸರಿಹೊಂದುತ್ತದೆ ಎಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.








