K L Rahul | ನಾನು ಡಕೌಟ್ ನಲ್ಲಿ ಕುಳಿತುಕೊಳ್ಳಬೇಕಾ : ಕೆ.ಎಲ್.ರಾಹುಲ್ ಪ್ರಶ್ನೆ
ಏಷ್ಯಾಕಪ್ ಟೂರ್ನಿಯ ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ರೋಹಿತ್ ಶರ್ಮಾ ಗೈರಿನಲ್ಲಿ ತಂಡವನ್ನು ಮುನ್ನಡೆಸಿದ ಕೆ.ಎಲ್.ರಾಹುಲ್ ತಂಡವನ್ನು ಉತ್ತಮವಾಗಿ ಮುನ್ನಡೆಸಿದರು.
ಮ್ಯಾಚ್ ಬಳಿಕ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ ಕೆ.ಎಲ್.ರಾಹುಲ್, ಪತ್ರಕರ್ತರೊಬ್ಬರ ಪ್ರಶ್ನೆಗೆ ನಾನು ಡಕೌಟ್ ನಲ್ಲಿ ಕುಳಿತುಕೊಳ್ಳಲಾ ಎಂದು ಉತ್ತರಿಸಿದ್ದಾರೆ.
ಅಸಲಿಗೆ ನಡೆದಿದ್ದು ಏನಂದರೇ ವಿರಾಟ್ ಕೊಹ್ಲಿ ಟೀಂ ಇಂಡಿಯಾ ಪರ ಇನ್ನಿಂಗ್ಸ್ ಆರಂಭಿಸಿ ಸೆಂಚೂರಿ ಸಿಡಿಸಿದರು. ಹೀಗಾಗಿ ಪತ್ರಕರ್ತರೊಬ್ಬರು ಆರಂಭಿಕರಾಗಿ ವಿರಾಟ್ ಸಕ್ಸಸ್ ಆಗಿದ್ದಾರೆ.
ಐಪಿಎಲ್ ನಲ್ಲಿ ಓಪನರ್ ಆಗಿ ಐದು ಸೆಂಚೂರಿಗಳನ್ನು ಸಿಡಿಸಿದ್ದಾರೆ. ಒಬ್ಬ ತಂಡದ ವೈಸ್ ಕ್ಯಾಪ್ಟನ್ ಆಗಿ ಕೊಹ್ಲಿ ಅವರನ್ನು ನೀವು ಆರಂಭಿಕರಾಗಿ ಟ್ರೈ ಮಾಡ್ತೀರಾ ಎಂದು ಪ್ರಶ್ನಿಸಿದ್ರು.
ಇದಕ್ಕೆ ಉತ್ತರಿಸಿದ ಕೆ.ಎಲ್.ರಾಹುಲ್, ನೀವು ನನ್ನನ್ನ ಡಗೌಟ್ ನಲ್ಲಿ ಕುಳಿತುಕೊಳ್ಳಿ ಅಂತಾ ಪರೋಕ್ಷವಾಗಿ ಸಲಹೆ ನೀಡುತ್ತಿದ್ದೀರಾ ಎಂದು ಪ್ರಶ್ನಿಸಿದರು.
ಕೊಹ್ಲಿ ಸೆಂಚೂರಿ ಸಿಡಿಸಿದ್ದು ನಮಗೆ ಬೋನಸ್. ರೋಹಿತ್ ವಿಶ್ರಾಂತಿ ಪಡೆದ ಕಾರಣ ನನ್ನ ಮೇಲಿನ ಜವಾಬ್ದಾರಿ ಹೆಚ್ಚಿತ್ತು. ಒಳ್ಳೆ ಸ್ಕೋರ್ ಮಾಡಬೇಕು ಎಂದು ಭಾವಿಸಿದ್ದೆ.
ಅದಕ್ಕೆ ತಕ್ಕಂತೆ ಕೊಹ್ಲಿ ಜೊತೆ ಒಳ್ಳೆಯ ಹೊಂದಾಣಿಕೆ ಮಾಡಿಕೊಂಡು ಉತ್ತಮ ಇನ್ನಿಂಗ್ಸ್ ಕಟ್ಟಿದ್ವಿ. ಈ ದಿನ ನಿಸ್ಸಂದೇಹವಾಗಿ ಕೊಹ್ಲಿಯದ್ದೇ ಎಂದು ರೋಹಿತ್ ಹೇಳಿದ್ದಾರೆ.