KL Rahul | ಕೆ.ಎಲ್. ರಾಹುಲ್ ಗೆ ರಾಹು ಕಾಟ..!!
ರಾಮೇಶ್ವರಕ್ಕೆ ಹೋದರೂ ಶನೇಶ್ವರನ ಕಾಟ ತಪ್ಪಲಿಲ್ಲ ಎಂಬಂತಾಗಿ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಕೆ.ಎಲ್.ರಾಹುಲ್ ಅವರ ಪರಿಸ್ಥಿತಿ.
ಯಾಕಂದರೇ ಈ ಹಿಂದೆ ಇಂಜೂರಿಯಾಗಿ ದಕ್ಷಿಣ ಆಫ್ರಿಕಾ ಸರಣಿಯಿಂದ ಹೊರ ಬಂದ ರಾಹುಲ್ ಇಲ್ಲಿಯವರೆಗೂ ಮತ್ತೆ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಲು ಆಗುತ್ತಲೇ ಇಲ್ಲ.
ಮೊನ್ನೆ ಮೊನ್ನೆ ಇಂಜೂರಿಯಿಂದ ಚೇತರಿಸಿಕೊಂಡಿದ್ದ ಕೆ.ಎಲ್.ರಾಹುಲ್, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ದರು.
ಅಲ್ಲದೆ ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿಯಲ್ಲೂ ಆಡುತ್ತಿದ್ದರು. ಆದ್ರೆ ವೆಸ್ಟ್ ಇಂಡೀಸ್ ಗೆ ಪ್ರಯಾಣ ನಡೆಸುವ ಮುನ್ನ ಶನಿಯಂತೆ ರಾಹುಲ್ ಗೆ ಕೋವಿಡ್ ವಕ್ಕರಿಸಿತ್ತು.
ಹೀಗಾಗಿ ಅವರು ಐಸೋಲೇಷನ್ ನಲ್ಲಿದ್ದಾರೆ. ಆದ್ರೆ ಇಂದು ಐಸೊಲೇಷನ್ ಅವಧಿ ಮುಗಿದ್ರೂ ಕೆ.ಎಲ್. ರಾಹುಲ್ ಅವರಿಗೆ ಒಂದು ವಾರಗಳ ವಿಶ್ರಾಂತಿಯ ಅಗತ್ಯವಿದೆ ಎಂದು ಬಿಸಿಸಿಐನ ವೈದ್ಯರು ಸಲಹೆ ನೀಡಿದ್ದಾರೆ. ಹೀಗಾಗಿ ಅವರು ಕೆರೆಬಿಯನ್ ಪ್ರವಾಸವನ್ನು ಮಿಸ್ ಮಾಡಿಕೊಂಡಿದ್ದಾರೆ.
ಹೀಗಾಗಿ ಕೆ.ಎಲ್. ರಾಹುಲ್ ಟೀಮ್ ಇಂಡಿಯಾಗೆ ಮತ್ತೆ ಕಮ್ ಬ್ಯಾಕ್ ಮಾಡಲು ಜಿಂಬಾಬ್ವೆ ಸರಣಿಯನ್ನು ಎದುರು ನೋಡಬೇಕಾಗಿದೆ. ಆನಂತರ ಏಷ್ಯಾಕಪ್ ಟೂರ್ನಿ ನಡೆಯಲಿದೆ. ಇದರಲ್ಲಿ ರಾಹುಲ್ ಕಾಣಿಸಿಕೊಳ್ಳಬಹುದು.

ಆದ್ರೆ ಕೆ.ಎಲ್.ರಾಹುಲ್ ಇಂಡಿಯನ್ ಪ್ರಿಮಿಯರ್ ಲೀಗ್ ನಂತರ ಯಾವುದೇ ಟೂರ್ನಿಯಲ್ಲಿ ಆಡಿಲ್ಲ. ಐಪಿಎಲ್ ನಂತರ ಕೆ.ಎಲ್. ರಾಹುಲ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಗೆ ನಾಯಕನಾಗಿ ತಂಡವನ್ನು ಮುನ್ನಡೆಸಬೇಕಿತ್ತು.
ಆಗ ರಾಹುಲ್ ಗೆ ನೋವು ಕಾಣಿಸಿಕೊಂಡ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಜರ್ಮನಿಗೆ ತೆರಳಿದ್ದರು. ಹೀಗಾಗಿ ಕೆ.ಎಲ್. ರಾಹುಲ್ ಅವರು ಇಂಗ್ಲೆಂಡ್ ಪ್ರವಾಸದಿಂದಲೂ ದೂರವೇ ಉಳಿದುಕೊಂಡಿದ್ದರು.
ಈ ನಡುವೆ ಕೆ.ಎಲ್.ರಾಹುಲ್ ಮತ್ತೆ ತಂಡಕ್ಕೆ ಬಂದರೇ ಯಾವ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆ ಕೂಡ ಉದ್ಭವವಾಗಿದೆ. ಯಾಕಂದರೇ ಸದ್ಯ ಏಕದಿನ ಕ್ರಿಕೆಟ್ ನಲ್ಲಿ ಶಿಖರ್ ಜೊತೆ ರೋಹಿತ್ ಇನ್ನಿಂಗ್ಸ್ ಆರಂಭಿಸುತ್ತಾರೆ.
ಬ್ಯಾಕ್ ಅಪ್ ಓಪನರ್ ಆಗಿ ಶುಭ್ ಮನ್ ಗಿಲ್ ಇದ್ದಾರೆ. ಇತ್ತ ಟಿ 20 ಕ್ರಿಕೆಟ್ ನಲ್ಲಿ ರೋಹಿತ್ ಶರ್ಮಾ ಜೊತೆ ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸಿದ್ದರು. ಜೊತೆಗೆ ರಿಷಬ್ ಪಂತ್ ಕೂಡ ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸಿದ್ರು.
ಹೀಗಾಗಿ ಒಂದು ವೇಳೆ ಕೆ.ಎಲ್.ರಾಹುಲ್ ತಂಡಕ್ಕೆ ವಾಪಸ್ ಆದ್ರೆ ಇನ್ನಿಂಗ್ಸ್ ಓಪನ್ ಮಾಡ್ತಾರಾ..? ಅಥವಾ ಮಿಡಲ್ ಆರ್ಡರ್ ನಲ್ಲಿ ರಾಹುಲ್ ಕಾಣಿಸಿಕೊಳ್ಳುತ್ತಾರಾ ಅನ್ನೋದನ್ನ ಕಾದು ನೋಡಬೇಕು.








