ವೈಯಕ್ತಿಕ ವಿಚಾರಕ್ಕೆ ಯುವಕರ ನಡುವೆ ಗಲಾಟೆ | ಚಾಕು ಇರಿತ
ಬೆಂಗಳೂರು: ವೈಯಕ್ತಿಕ ಕಾರಣಕ್ಕೆ ಇಬ್ಬರು ಯುವಕರು ಓರ್ವ ಯುವಕನ ಎದೆಗೆ ಚಾಕು ಇರಿದ ಘಟನೆ ಕಾಟನ್ ಪೇಟೆಯ ಗೂಡ್ ಶೆಡ್ ರಸ್ತೆಯಲ್ಲಿ ನಡೆದಿದೆ.
ಸಂದೀಪ್ ಹಲ್ಲೆಗೊಳಗಾದ ಯುವಕ, ಸುನೀಲ್ ಮತ್ತು ಸೂರ್ಯ ಹಲ್ಲೆ ಮಾಡಿದ ಆರೋಪಿಗಳು. ಸಧ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ನಿನ್ನೆ ಭಾನುವಾರ ವೈಯಕ್ತಿಕ ವಿಚಾರಕ್ಕೆ ಮೂವರ ನಡುವೆ ಜಗಳ ಪ್ರಾರಂಭವಾಗಿದೆ. ಜಗಳ ತಾರಕಕ್ಕೇರಿ ಸುನೀಲ್ ಮತ್ತು ಸೂರ್ಯ, ಸಂದೀಪನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಸಂದೀಪ್ ಪ್ರಾಣಾಪಾಯದಿಂದ ಪಾರಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ ಈ ಗಲಾಟೆ ಯುವತಿಯೊಬ್ಬಳ ವಿಚಾರಕ್ಕೆ ಗಲಾಟೆ ಆರಂಭವಾಗಿದೆ ಎನ್ನಲಾಗುತ್ತಿದೆ. ಸದ್ಯ ಇಬ್ಬರು ಆರೋಪಿಗಳನ್ನು ಕಾಟನ್ ಪೇಟೆ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.








