ಕೊಡಗು ಜಿಲ್ಲೆಯಲ್ಲಿ ತಣ್ಣಗಾದ ವರುಣನ ಅಬ್ಬರ kodagu rain
ಕೊಡಗು : ಜಿಲ್ಲೆಯಲ್ಲಿ ವರುಣನ ಅಬ್ಬರ ತುಸು ತಗ್ಗಿದ್ದು, ಮುಂಜಾನೆಯಿಂದಲೇ ತುಂತುರು ಮಳೆ ಬೀಳುತ್ತಿದೆ.
ಜಿಟಿ ಜಿಟಿ ಮಳೆಯಲ್ಲೂ ಕೂಡ ಜನರು ಕೊಡೆ ಹಿಡಿದು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ.
ಕೊರೊನಾ ಕಡಿವಾಣ ಹಾಕಲು ಜಿಲ್ಲಾಡಳಿತ ವಾರದಲ್ಲಿ ಮೂರು ದಿನ ಮಾತ್ರ ಅಗತ್ಯಗಳ ಖರೀದಿಗೆ ಅವಕಾಶ ಮಾಡಿಕೊಟ್ಟಿದೆ.
ಈ ಹಿನ್ನೆಲೆಯಲ್ಲಿ ಇಂದು ಜನರು ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.
ಪರಿಣಾಮ ಪ್ರಮುಖ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿದೆ.
ಪೊಲೀಸರು ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ರೂ ಜನರು ಕ್ಯಾರೆ ಎನ್ನುತ್ತಿಲ್ಲ.










