KODAGU RAIN | ಮಳೆ ಹಾನಿ ಪ್ರದೇಶಗಳಿಗೆ ಪ್ರತಾಪ್ ಸಿಂಹ ಭೇಟಿ
ಕೊಡಗು : ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ನಾನಾ ಅವಾಂತರಗಳು ಸೃಷ್ಠಿಯಾಗಿವೆ.
ಈ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಂಸದರಿಗೆ ಶಾಸಕ ಬೋಪಯ್ಯ ಸಾಥ್ ನೀಡಿದ್ದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, ಕಳೆದ ಬಾರಿ ಕುಸಿದಿದ್ದ ಸ್ಥಳದಲ್ಲಿಯೇ ಗುಡ್ಡ ಕುಸಿಯುತ್ತಿದೆ.
ಸದ್ಯ ಮಣ್ಣು ತೆಗೆದು ಸಂಚಾರಕ್ಕೆ ಅನುಕೂಲ ಮಾಡಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಅದಕ್ಕೆ ಶಾಶ್ವತ ಕಾಮಗಾರಿ ಮಾಡಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಜಿಲ್ಲಾಧಿಕಾರಿ ಕಚೇರಿಗೆ ತಡೆಗೋಡೆ ನಿರ್ಮಾಣ ಕುಸಿಯುತ್ತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಂಸದರು, ಎಂಜಿನಿಯರ್ ಅವರ ನಿರ್ಲಕ್ಷ್ಯದಿಂದ ಕಾಮಗಾರಿಗೆ ಹೋಗಿದೆ.
ಆದ್ದರಿಂದ ತಡೆಗೋಡೆ ಉಬ್ಬುತ್ತಿದೆ.
ಮಳೆಗಾಲ ಮುಗಿದ ಬಳಿಕ ಅದನ್ನು ಬಿಚ್ಚಿ ಹೊಸದಾಗಿ ಕಾಮಗಾರಿ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.