kodi mutt swamiji | ಜನರು ಹುಚ್ಚರಾಗುತ್ತಾರೆ, ಬೀದಿಯಲ್ಲಿ ಸಾಯುತ್ತಾರೆ
ಹಾಸನ : ಜನ ಜನರ ಮೇಲೆ ನಿಯಂತ್ರಣ ಕಳೆದುಕೊಂಡು ಹುಚ್ಚರಾಗುತ್ತಾರೆ. ಹೆಚ್ಚಿನವರಿಗೆ ದೈಹಿಕ ಅಶಕ್ತಿ ಕಾಡಲಿದ್ದು, ಕೆಲವರು ದಾರಿಯಲ್ಲಿ ಬಿದ್ದು ಸಾಯುವ ಪ್ರಕರಣಗಳು ನಡೆದಾವು ಎಂದು ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಾರನಹಳ್ಳಿಯ ಕೋಡಿ ಮಠದಲ್ಲಿ ಮಾತನಾಡಿದ ಸ್ವಾಮೀಜಿ, ಮುಂದಿನ ಮೂರು ತಿಂಗಳು ಇಡೀ ಜಗತ್ತಿಗೆ ಭಾರಿ ಕಂಟಕ ಕಾದಿದೆ.

ಈ ಕಂಟಕಗಳು ಭೂ ಕಂಟಕದ ರೂಪದಲ್ಲಿರಬಹುದು, ಪ್ರಾದೇಶಿಕವಾಗಿಯೂ ಸಂಘರ್ಷವಿರಹುದು, ಪ್ರಾಕೃತಿಕವಾಗಿಯೂ ಇರಬಹುದು ಎಂದು ಹೇಳಿದ್ದಾರೆ.
ಜಾಗತಿಕವಾಗಿ ಬಾಂಬ್ ಗಳು, ಭೂಕಂಪನ, ಯುದ್ಧ ಭೀತಿ ಇದೆ ಎಂದಿರುವ ಕೋಡಿ ಶ್ರೀಗಳು, ದೇಶೀಯವಾಗಿ ಕೆಲವೊಂದು ಕಂಟಕಗಳಿವೆ,
ಜನ ಜನರ ಮೇಲೆ ನಿಯಂತ್ರಣ ಕಳೆದುಕೊಂಡು ಹುಚ್ಚರಾಗುತ್ತಾರೆ. ಕೆಲವರು ದಾರಿಯಲ್ಲಿ ಬಿದ್ದು ಸಾಯುವ ಪ್ರಕರಣಗಳೂ ನಡೆಯುತ್ತವೆ ಎಂದಿದ್ದಾರೆ.








