Kodihalli Chandrasekhar | ರಾಜಕಾರಣದಲ್ಲಿ ಕೇವಲ ಭ್ರಷ್ಟಾಚಾರ ತುಂಬಿದೆ
ಬೆಂಗಳೂರು: ರಾಜಕಾರಣದಲ್ಲಿ ಕೇವಲ ಭ್ರಷ್ಟಾಚಾರ ತುಂಬಿದೆ. ಇಲ್ಲಿ ಒಂದಕ್ಕೆ ಮತ್ತೊಂದು ಭ್ರಷ್ಟಾಚಾರ ಬಯಲು ಮಾಡುವ ಮೂಲಕ ತಮ್ಮ ತಪ್ಪನ್ನು ಮುಚ್ಚಿ ಹಾಕುವ ಕಾರ್ಯ ನಡೆಯುತ್ತಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದ ಸಮರ್ಥನೆ ಮಾಡಿಕೊಳ್ಳುವ ಕಾರ್ಯ ಆಗುತ್ತಿದೆ. ಆದರೆ ಇದೇ ರೀತಿ ಮುಂದುವರೆಯುತ್ತಾ ಹೋದರೆ ಅದರಿಂದ ರಾಜ್ಯದ ರಾಜಕಾರಣ ಮತ್ತು ಸಮಾಜದ ಇನ್ನಷ್ಟು ಹಾಳಾಗುತ್ತದೆ. ಅದರ ಬದಲು ಎಲ್ಲಾ ಪಕ್ಷಗಳು ಒಟ್ಟಿಗೆ ಸೇರಿ ಎಲ್ಲರೂ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಕೈಜೋಡಿಸಬೇಕು.
ಅದರೊಂದಿಗೆ ನನ್ನನು ಸೇರಿಸಿ ತಪ್ಪು ಮಾಡಿದವರಿಗೆ ಸರಿಯಾದ ತನಿಖೆ ಮಾಡಿ ಭ್ರಷ್ಟಾಚಾರ ಮಾಡಿರುವುದು ಸಾಬೀತಾದಲ್ಲಿ ಶಿಕ್ಷೆ ನೀಡಬೇಕು ಎಂದು ಹೇಳಿದರು.
ಬೆಂಬಲ ಬೆಲೆ ಸರಿಯಾಗಿ ನೀಡಿ:
ದೇಶಾದ್ಯಂತ ಕೇಂದ್ರ ಸರ್ಕಾರ ಎಂ.ಎಸ್.ಪಿ (ಕನಿಷ್ಠ ಬೆಂಬಲ ಬೆಲೆ) ನೀಡಬೇಕು ಎಂದು ಘೋಷಸಿದೆ. ಅದನ್ನು ರಾಜ್ಯದಲ್ಲಿ ಸರಿಯಾಗಿ ಜಾರಿಯಾಗಬೇಕು. ರೈತರಿಗೆ ಉಪಯೋಗ ಆಗುವಂತೆ ಹಾಗೂ ತಲುಪುವಂತೆ ಮಾಡಬೇಕು. ಇನ್ನು ಮುಂಗಾರು ಆರಂಭವಾಗಿದ್ದು, ರಾಸಾಯಿನಿಕ ಗೊಬ್ಬರಗಳ ಬೆಲೆ ಗಗನಕ್ಕೆ ಏರುತ್ತಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಅಲ್ಲದೆ ಕೃಷಿ ಇಲಾಖೆಗಳು ಇದರತ್ತ ಗಮನ ನೀಡುತ್ತಿಲ್ಲ. ಹಾಗಾಗಿ ಸರ್ಕಾರ ಇದರತ್ತ ಗಮನಹರಿಸಬೇಕು.ಮತ್ತೊಂದು ಹಾವೇರಿ ಘಟನೆ ನಡೆಯೋ ಹಾಗೆ ನೋಡಿಕೊಳ್ಳಿ ಎಂದು ಸಿ ಎಂ ಗೆ ಮನವಿ ಮಾಡಿದರು.
ಪಠ್ಯ ಪುಸ್ತಕ ಪರಿಷಕರಣೆ ವಾದ ವಿವಾದ ಬೇಡ:
ಮಕ್ಕಳ ಜೀವನದೊಂದಿಗೆ ಚೆಲ್ಲಾಟ ಬೇಡ. ಪಠ್ಯ ಪುಸ್ತಕ ಪರಿಷ್ಕರಣೆ ವಾದ ವಿವಾದದಿಂದ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ನಾವು ಮೇಲೆ ಎಂದು ಹೇಳುವ ಬದಲು ಮಕ್ಕಳ ಭವಿಷ್ಯಕ್ಕಾಗಿ ತೊಂದರೆ ಆಗದಂತೆ ಕೆಲಸ ಮಾಡಿ. ಪಠ್ಯ ಪುಸ್ತಕ ಪರಿಷಕರಣೆ ಮಾಡಿ ಆದರೆ ಸರಿಯಾದ ದಾರಿಯಲ್ಲಿ ಮಾಡಿ ಎಂದು ಹೇಳಿದರು.
ರೈತ ಸಂಘದಲ್ಲಿ ಯಾವುದೇ ಬಿರುಕು ಇಲ್ಲ:
ರೈತ ಸಂಘದಲ್ಲಿ ಯಾವುದೇ ಬಿರುಕು ಇಲ್ಲ. ಎಲ್ಲವೂ ಸರಿಯಾಗಿಯೇ ಇದೆ. ನಾನು ಮುಂಚಿನ ರೀತಿಯಲ್ಲೇ ಅಧಿಕಾರದಲ್ಲಿದ್ದೇನೆ. ಯಾರು ಏನು ಹೇಳಿದರು ನಾನೇ ಈಗ ಅಧಿಕಾರದಲ್ಲಿ ಇರುವುದು. ಬೇರೆ ಯವರು ಹೇಳಿದ ಮಾತೆಲ್ಲ ಸುಳ್ಳು. ಸುಖಾ ಸುಮ್ಮನೆ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.