ಬಿಜೆಪಿಯವರಿಗೆ ಮಾನ, ಮರ್ಯಾದೆ ಇಲ್ಲ : ಕೋಡಿಹಳ್ಳಿ ಚಂದ್ರಶೇಖರ
ಧಾರವಾಡ : ಮುಖ್ಯಮಂತ್ರಿಗಳು ಶಾಂತಿ ಮತ್ತು ನೆಮ್ಮದಿಯಿಂದ ಆಡಳಿತ ನಡೆಸಬೇಕು. ಆಡಳಿತದಲ್ಲಿದ್ದುಕೊಂಡು ಕೆಳ ದರ್ಜೆಯ ಕೆಲಸ ಮಾಡಲು ಬಿಜೆಪಿಯವರು ಹೊರಟಿದ್ದಾರೆ ಅವರಿಗೆ ಮಾನ, ಮರ್ಯಾದೆ ಇದೆಯಾ? ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಕಿಡಿಕಾರಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜನರಿಗೆ ಭರವಸೆ ನೀಡಬೇಕು. ಅದನ್ನ ಬಿಟ್ಟು ವಿರೋಧ ಪಕ್ಷಗಳ ವಿರುದ್ಧ ಜನರನ್ನ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ಅವರೇ ನೀವು ಸರ್ಕಾರ ನಡೆಸುತ್ತಿದ್ದಿರೋ ಅಥವಾ ಬೇರೆಯವರು ನಡೆಸುತಿದ್ದಾರೋ?. ಮಾರುಕಟ್ಟೆಯಲ್ಲಿ ಮಾವಿನ ದರ ಬಿದ್ದು ಹೋಯ್ತು, ಯಾರು ಕೊಡ್ತಾರೆ. ಬೊಮ್ಮಾಯಿ ಅವರು ಖರೀದಿ ಮಾಡಲು ತಯಾರಿದ್ದಾರಾ? ಎಂದು ವಾಗ್ದಾಳಿ ಮಾಡಿದರು.
ಇನ್ನೂ ಮಹದಾಯಿ ಯೋಜನೆ ಕುರಿತು ಮಾತನಾಡಿದ ಅವರು ಬೊಮ್ಮಾಯಿ ಅವರು ಮಹಾದಾಯಿ ಹಳ್ಳ ತೆಗೆಯೋಕೆ ಹೋಗಿದ್ದರು. ಅವರಿಗೆ ಈ ಬಗ್ಗೆ ಸ್ಪಷ್ಟತೆ ಇದ್ದಿದ್ದರೆ ನೀರು ಮಲಪ್ರಭಾ ನದಿ ಸೇರುತಿತ್ತು. ಗೋವಾದಲ್ಲಿ ಬಿಜೆಪಿ ಸರ್ಕಾರವಿದೆ, ಕೇಂದ್ರದಲ್ಲೂ ಬಿಜೆಪಿ ಸರ್ಕಾರ ಇದೆ. ಮತ್ತೇಕೆ ಯೋಜನೆ ಅನುಷ್ಠಾನಗೊಳ್ಳುತ್ತಿಲ್ಲ? ಎಂದು ಪ್ರಶ್ನಸಿದರು.
ಅಲ್ಲದೆ ಇವರು ನಾಟಕಕ್ಕೆ ಬಜೆಟ್ನಲ್ಲಿ ಹಣ ಇಟ್ಟಿದ್ದಾರೆ. ಎಲ್ಲಾ ವಸ್ತುಗಳ ಬೆಲೆ ಜಾಸ್ತಿಯಾಗಿದೆ. ಔಷಧಿಗಳು 12ರಷ್ಟು ರೇಟ್ ಜಾಸ್ತಿ ಆಗಿದೆ. ವಿದ್ಯುತ್ ದರ ಹೆಚ್ಚಳ ಮಾಡಿದ್ದಾರೆ. ಭತ್ತ ಹಾಗೂ ರಾಗಿ ದರ ಎಪಿಎಂಸಿ ದರಕ್ಕಿಂತ ಕಡಿಮೆ ಇದೆ. ರೈತರ ಬಗ್ಗೆ ಮಾತನಾಡುವ ಯೋಗ್ಯತೆಯನ್ನು ಬಿಜೆಪಿಯವರು ಕಳೆದುಕೊಂಡಿದ್ದಾರೆ ಎಂದು ಚಾಟಿ ಬೀಸಿದರು.








