Bengaluru : ಫೆಬ್ರವರಿ 14 ವಿಧಾನಸೌಧ ಮುತ್ತಿಗೆ ತೀರ್ಮಾನ – ಕೋಡಿಹಳ್ಳಿ ಚಂದ್ರಶೇಖರ್
ಕೇಂದ್ರ ಸರ್ಕಾರ ಕೃಷಿ ಕಾಯ್ದೆ ಹಿಂಪಡೆದ್ರೂ ರಾಜ್ಯ ಸರ್ಕಾರ ಮಾತ್ರ ಹಿಂಪಡೆಯದ ಹಿನ್ನಲೆ ಮತ್ತೆ ಸರ್ಕಾರದ ವಿರುದ್ಧ ಸಿಡಿದೇಳಲು ಕೋಡಿಹಳ್ಳಿ ಚಂದ್ರಶೇಖರ್ ತೀರ್ಮಾನ ಮಾಡಿದ್ದಾರೆ.. ಈ ಬಗ್ಗೆ ಮಾತನಾಡಿದ ಅವರು ಫೆ.14 ರಿಂದ ಅಧಿವೇಶನ ಆರಂಭವಾಗ್ತಿದ್ದಂತೆ ಪ್ರತಿಭಟನೆಗೆ ನಿರ್ಧಾರ ಮಾಡಿರೋದಾಗಿ ತಿಳಿಸಿದ್ದಾರೆ..
ಕೇಂದ್ರ ಸರ್ಕಾರ ವಾಪಾಸ್ ಪಡೆದಿರುವ ಕೃಷಿ ಕಾಯ್ದೆಗಳನ್ನ ಹಿಂಪಡೆಯುವಂತೆ ಒತ್ತಾಯಿಸಿ ವಿಧಾನಸೌಧ ಮುತ್ತಿಗೆ ಹಾಕಲಾಗುವುದು.. ಕರ್ನಾಟಕ ವಿಧಾನಸಭಾ ಅಧಿವೇಶನ ಮುತ್ತಿಗೆ ಹಾಕುವುದಾಗಿ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಘೋಷಣೆ ಮಾಡಿದ್ದಾರೆ.
ಕೇಂದ್ರ ಸರ್ಕಾರ ವಾಪಸ್ ಪಡೆದಿರುವ ಮೂರು ಕೃಷಿ ಕಾಯ್ದೆಯಗಳನ್ನ ವಾಪಸ್ ಪಡೆಯಲಾಯಿತು. ಆದ್ರೆ ಕರ್ನಾಟಕ ಸರ್ಕಾರ ಕೇಂದ್ರ ವಾಪಸ್ ಪಡದ ನಂತರ ರಾಜ್ಯಸರ್ಕಾರ ವಾಪಾಸ್ ಪಡೆದಿಲ್ಲ.
ಮೂರು ಕೃಷಿ ಕಾಯ್ದೆ ವಾಪಾಸ್ ಪಡೆಯದೆ ಕಾಲಾಹರಣ ಮಾಡ್ತಿದ್ದಾರೆ. ಸಿಎಂ ಬೊಮ್ಮಾಯಿ ಈ ಕಾಯ್ದೆಗಳನ್ನ ವಾಪಾಸ್ ಪಡೆಯಲು ಕಾಲಾವಕಾಶ ಕೇಳಿದ್ರು. ಕಾನೂನು ವಾಪಾಸ್ ಪಡೆಯುವ ವಿಷಯವನ್ನ ಸರ್ಕಾರ ಸ್ಪೀಕರ್ ಗೆ ಕಳುಹಿಸಿದ ಅಜೆಂಡಾದಲ್ಲಿ ಸೇರಿಸಿಲ್ಲ. ಸರ್ಕಾರ ಭರವಸೆಯಂತೆ ಈ ಮೂರು ಕೃಷಿ ಕಾಯ್ದೆಗಳನ್ನ ವಾಪಾಸ್ ಪಡೆಯಬೇಕು. ಈಗಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರ ರಾಗಿ, ಜೋಳ, ಭತ್ತ ಖರೀದಿ ನಿಲ್ಲಿಸಿದೆ. ಇದ್ರಿಂದ ರೈತರು ಆತಂಕಕ್ಕೆ ಸಿಲುಕಿದ್ದಾರೆ. ಸರ್ಕಾರದ ಕೂಡಲೇ ಖರೀದಿ ಮಾಡಬೇಕು. ಕೃಷಿ ಮಾರುಕಟ್ಟೆ ಕಾಯ್ದೆ, ಭೂಸುಧಾರಣಾ ತಿದ್ದುಪಡಿ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದಾರೆ.
ಈ ಎಲ್ಲಾ ಕಾಯ್ದೆಗಳು ಕೃಷಿಯ ಮೇಲೆ ಹಾಗೂ ರೈತರ ಮೇಲೆ ನೇರ ಪರಿಣಾಮ ಬೀರಿದೆ. ಕೂಡಲೆ ಈ ಕಾಯ್ದೆಗಳನ್ನ ಹಿಂಪಡೆಯಬೇಕು. ಇಲ್ಲದಿದ್ರೆ 10 ಸಾವಿರ ರೈತರೊಂದಿಗೆ 14 ರಂದು ವಿಧಾನಸೌಧ ಮುತ್ತಿಗೆ ಹಾಕ್ತಿವಿ ಎಂದು ಘೋಷಿಸಿದ್ದಾರೆ..








