Hijab Controvercy : ಮಕ್ಕಳನ್ನು ಬೀದಿಗೆ ಇಳಿಸಿ ಕಲ್ಲಹೊಡೆಸಬೇಡಿ : ಕೋಡಿಹಳ್ಳಿ ಚಂದ್ರಶೇಖರ್
ಹಿಜಾಬ್ – ಕೇಸರಿ ಕಾಂಟ್ರವರ್ಸಿ ಕುರಿತು ರೈತಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ.. ಮಕ್ಕಳನ್ನು ಬೀದಿಗೆ ಇಳಿಸಿ ಕಲ್ಲಹೊಡೆಸಬೇಡಿ.. ಬಿಜೆಪಿ ಸರ್ಕಾರದ ಸಾಧನೆಗಳೇನು ಹೇಳಿ.. ಮುಸ್ಲಿಂ ಪರ ಹೇಳಿದರೆ ಕಾಂಗ್ರೆಸ್ ಗೆ ಓಟ್ ಬರುತ್ತೆ, ಹಿಂದುತ್ವ ಪರ ಧ್ವನಿ ಎತ್ತಿದರೆ ಬಿಜೆಪಿಗೆ ಓಟ್ ಬೀಳುತ್ತೆ ಅಂತ ವಿವಾದ ಹಬ್ಬಿಸುತ್ತಿದ್ದಾರೆ ಎಂದು ಕಿಡಿಕಾರಿದ್ಧಾರೆ..
ಅಲ್ಲದೇ ಸರ್ಕಾರದ ಮೂರ್ಖತನಕ್ಕೆ ಇದೊಂದು ಕೈಗನ್ನಡಿ, ನಿಮ್ಮ ಸರಕಾರದ ಸಾಧನೆಗಳನ್ನು ತಿಳಿಸಿ ಬೊಮ್ಮಾಯಿಯವರೆ. ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀಳ್ತಿದೆ. ಆಡಳಿತ ಹಾಗೂ ವಿರೋಧ ಪಕ್ಷದವರು ಮಕ್ಕಳನ್ನು ಬೀದಿಗೆ ತರುವ ಕೆಲ್ಸ ಮಾಡ್ತಿದೆ. ವೋಟ್ ಬ್ಯಾಂಕಿಂಗ್ ಗಾಗಿ ರಾಜಕೀಯ ಮಾಡ್ತಿದೆ ಎಂದಿದ್ದಾರೆ.
ಇದೇ ವೇಳೆ ಹಸಿರು ಶಾಲು ಹಾಕೊಂಡು ಬರೋಕೂ ಹೇಳ್ತಿನಿ ಅನ್ನೋ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ಇದು ಇನ್ನೊಂದು ಮೂರ್ಖತನದ ಮಾತು. ನಾವು ಇದನ್ನ ಬೆಂಬಲಿಸೋದಿಲ್ಲ ಎಂದಿದ್ದಾರೆ..








