ಕೋಡಿಹಳ್ಳಿ ಚಂದ್ರಶೇಖರ್ ಒಬ್ಬ ನಾಲಾಯಕ್ : ರೇಣುಕಾಚಾರ್ಯ
ದಾವಣಗೆರೆ : ರಾಜ್ಯ ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲ ನೀಡಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಬಿಜೆಪಿ ಶಾಸಕ ರೇಣುಕಾಚಾರ್ಯ ಕಿಡಿಕಾರಿದ್ದು, ಕೋಡಿಹಳ್ಳಿ ಚಂದ್ರಶೇಖರ್ ಒಬ್ಬ ನಾಲಾಯಕ್ ಎಂದು ಟೀಕಿಸಿದ್ದಾರೆ.
ಸಾರಿಗೆ ನೌಕರರ ಪ್ರತಿಭಟನೆ ಬಗ್ಗೆ ದಾವಣಗೆರೆಯಲ್ಲಿ ಮಾತನಾಡುತ್ತ, ಕೋಡಿಹಳ್ಳಿ ಚಂದ್ರಶೇಖರ್ ಬಗ್ಗೆ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, ಕೋಡಿಹಳ್ಳಿ ಚಂದ್ರಶೇಖರರ್ ಅವರಿಗೂ ಸಾರಿಗೆ ನೌಕರರಿಗೆ ಏನು ಸಂಬಂಧ.
ಚಂದ್ರಶೇಖರ್ ಸಮಸ್ಯೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಕೋಡಿಹಳ್ಳಿಯಿಂದ ಸಮಸ್ಯೆ ಪರಿಹಾರ ಆಗಲ್ಲ. ಬೇಕಿದ್ದರೆ ಸಾರಿಗೆ ನೌಕರರು ಬಂದು ಸರ್ಕಾರದ ಜೊತೆ ಮಾತಾಡಲಿ ಎಂದು ಹೇಳಿದರು.
ಇನ್ನ ಕೋಡಿಹಳ್ಳಿ ಚಂದ್ರಶೇಖರ್ ಒಬ್ಬ ನಾಲಾಯಕ್. ಎಲ್ಲಿ ಜನ ಸೇರುತ್ತಾರೋ ಅಲ್ಲಿ ಕೂತು ಬಿಟ್ಟಿ ಭಾಷಣ ಮಾಡುವ ವ್ಯಕ್ತಿಗೆ ಸಾರಿಗೆ ನೌಕರರು ತಮ್ಮ ವೇದಿಕೆಯಲ್ಲಿ ಅವಕಾಶ ನೀಡಬಾರದು. ದಲ್ಲಾಳಿಗಳ ಮುಖ್ಯಸ್ಥನಿಗೆ ಅವಕಾಶ ಕೊಡಬಾರದು ಎಂದು ರೇಣುಕಾಚಾರ್ಯ ಕಿಡಿಕಾರಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel