ರಾಜ್ಯ ಮತ್ತು ದೇಶದ ರಾಜಕೀಯದಲ್ಲಿ ವಿಪ್ಲವ : ಕೋಡಿಮಠ ಶ್ರೀ ಭವಿಷ್ಯ
ದಾವಣಗೆರೆ : ದೇಶ ಮತ್ತು ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಆಗಲಿದೆ ಎಂದು ಕೋಡಿಮಠ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಗ್ರಹಣ ಫಲ ರಾಜಕೀಯ ವರ್ಗದ ಬಗ್ಗೆ ವಿಪ್ಲವ ಅಂತ ಬಂದಿದೆ. ಶೀಘ್ರದಲ್ಲೇ ರಾಜ್ಯ ಮತ್ತು ದೇಶದ ರಾಜಕೀಯದಲ್ಲಿ ವಿಪ್ಲವ ಆಗಲಿದೆ ಎಂದು ತಿಳಿಸಿದರು.
ರಾಜಕೀಯ ವಿಪ್ಲವಕ್ಕೆ ಜನವರಿಯವರೆಗೂ ಸಮಯವಿದೆ. ಈಗಾಗಲೇ ಅಮೆರಿಕ ಸೇರಿದಂತೆ ಜಗತ್ತಿನ ಬಹುತೇಕ ಕಡೆ ರಾಜಕೀಯ ಬದಲಾವಣೆ ಆಗುತ್ತಿವೆ.
ಡಿಸೆಂಬರ್ ಅಂತ್ಯದವರೆಗೆ 1ರಿಂದ ಪಿಯುಸಿವರೆಗೆ ಶಾಲೆ-ಕಾಲೇಜು ಆರಂಭ ಇಲ್ಲ: ಸಿಎಂ ಬಿಎಸ್‍ವೈ ಘೋಷಣೆ
ಅದೇ ರೀತಿ ನಮ್ಮಲ್ಲಿಯೂ ವಿಪ್ಲವ ಆಗಲಿದೆ ಎಂದು ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಸದ್ಯ ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆ ಶುರುವಾಗಿದ್ದು, ಇಂತಹ ಸಮಯದಲ್ಲಿ ಕೋಡಿಮಠ ಸ್ವಾಮೀಜಿ ನೀಡಿರುವ ಈ ಹೇಳಿಕೆ ಭಾರಿ ಕುತೂಹಲ ಕೆರಳಿಸಿದೆ..