ವಿರಾಟ್ – ದ್ರಾವಿಡ್ ಗೆ ಅವರದ್ದೇ ಚಿಂತೆ..
ದಕ್ಷಿಣಾ ಆಫ್ರಿಕಾದಲ್ಲಿ ಟೀಂ ಇಂಡಿಯಾ ಈವರೆಗೂ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಕಳೆದ 29 ವರ್ಷಗಳಿಂದ ಭಾರತದ ಹುಲಿಗರು ಆಫ್ರಿಕಾ ಮೇಲೆ ದಂಡೇತ್ತಿ ಹೋಗುತ್ತಿದ್ದರೂ ಒಂದೇ ಒಂದು ಬಾರಿ ಕೂಡ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿಲ್ಲ.
2018 ರಲ್ಲಿ ದಕ್ಷಿಣಾ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು ಡ್ರಾ ಮಾಡಿಕೊಂಡಿರುವುದೇ ಆಫ್ರಿಕಾ ನೆಲದಲ್ಲಿ ಭಾರತದ ಸಾಧನೆಯಾಗಿದೆ.
ಆಸ್ಟ್ರೇಲಿಯಾ, ಇಂಗ್ಲೆಂಡ್ ದೇಶಗಳಲ್ಲಿ ಸರಣಿ ಗೆದ್ದಿರುವ ಭಾರತಕ್ಕೆ ದಕ್ಷಿಣಾ ಆಫ್ರಿಕಾದಲ್ಲಿ ಮಾತ್ರ ಸರಣಿ ಗೆಲ್ಲೋದು ಕನಸಾಗಿಯೇ ಉಳಿದಿದೆ. ಹೀಗಾಗಿ ಈ ಬಾರಿ ಕೊಹ್ಲಿ ಸೈನ್ಯ ಆ ಐತಿಹಾಸಿಕ ಸಾಧನೆ ಮಾಡುವ ವಿಶ್ವಾಸದಲ್ಲಿದೆ.
ಸದ್ಯ ಆಫ್ರಿಕಾ ಪ್ರವಾಸ ಕೈಗೊಂಡಿರುವ ವಿರಾಟ್ ಸೇನೆ ಮೂರು ಟೆಸ್ಟ್ ಮ್ಯಾಚ್ ಗಳ ಸರಣಿಯನ್ನು ಆಡಲಿದೆ. ಡಿಸೆಂಬರ್ 26 ರಿಂದ ಉಭಯ ತಂಡಗಳ ಮಧ್ಯೆ ಬಾಕ್ಸಿಂಗ್ ಡೇ ದಿನದಂದು ಟೆಸ್ಟ್ ಮ್ಯಾಚ್ ಆರಂಭವಾಗಲಿದೆ.
ಸದ್ಯ ಆಫ್ರಿಕಾದಲ್ಲಿ ಕಾಲಿಟ್ಟಿರುವ ಟೀಂ ಇಂಡಿಯಾ ಆಟಗಾರರು ಹೆಡ್ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಕಸರತ್ತು ಆರಂಭಿಸಿದ್ದಾರೆ.
ಈ ಮಧ್ಯೆ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರಿಗೆ ತಂಡ ಆಯ್ಕೆ ಬಗ್ಗೆ ತಲೆನೋವು ಶುರುವಾಗಿದೆ. ಆಡುವ ಹನ್ನೊಂದರಲ್ಲಿ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು..
ಅನ್ನುವುದರ ಬಗ್ಗೆ ದ್ರಾವಿಡ್ – ವಿರಾಟ್ ಚರ್ಚೆ ನಡೆಸುತ್ತಿದ್ದಾರೆ. ಬ್ಯಾಡ್ ಪಾರ್ಮ್ ನಲ್ಲಿದ್ದರೂ ಅಜಿಂಕ್ಯಾ ರಹಾನೆಗೆ ಬಿಸಿಸಿಐ ಮತ್ತೊಂದು ಅವಕಾಶ ಕೊಟ್ಟಿದೆ. ಕಳೆದ ಆಫ್ರಿಕಾ ಪ್ರವಾಸದಲ್ಲಿ ರಹಾನೆ ಆಫ್ರಿಕಾ ನೆಲದಲ್ಲಿ ಅದ್ಭತವಾಗಿ ಆಡಿದ್ದರು.
ಜೋಹಾನ್ಸ್ ಬರ್ಗ್ ಟೆಸ್ಟ್ ನಲ್ಲಿ ಟೀಂ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದ್ರೆ ಭಾರತದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರಹಾನೆ ದಾರುಣವಾಗಿ ವಿಫಲರಾಗಿದ್ದರು.
ಇದರಿಂದ ಉಪ ನಾಯಕನ ಪಟ್ಟವನ್ನು ಕಳೆದುಕೊಂಡ ರಹಾನೆ, ಲಾಸ್ಟ್ ಚಾನ್ಸ್ ಎಂಬಂತೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆ ಆಗಿದ್ದಾರೆ.
ಇನ್ನು ರಹಾನೆ ಕಳೆದ 12 ಟೆಸ್ಟ್ ಪಂದ್ಯದಲ್ಲಿ 411 ರನ್ ಗಳಿಸಿದ್ದಾರೆ. ಇದೇ ಸಮಯದಲ್ಲಿ ಶ್ರೇಯಸ್ ಅಯ್ಯರ್, ಹನುಮ ವಿಹಾರಿ ಅಧ್ಭುತ ಪಾರ್ಮ್ ನಲ್ಲಿದ್ದಾರೆ.
ಅದರಲ್ಲೂ ಶ್ರೇಯಸ್ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ನಲ್ಲಿ ಶತಕ ಸಿಡಿಸಿ ಆಫ್ರಿಕಾ ಟೂರ್ ಗೆ ಸೆಲೆಕ್ಟ್ ಆಗಿದ್ದಾರೆ. ಹೀಗಾಗಿ ತಂಡದ ಪ್ಲೇಯಿಂಗ್ ಇಲೆವೆನ್ ಆಯ್ಕೆ ನಾಯಕ- ಕೋಚ್ ಗೆ ತಲೆನೋವಾಗಿದೆ.








