Virat Kohli : ದಾಖಲೆಗಳಿಗೆ ವಿರಾಟ್ ಬಾಸ್.. ಯಾರೂ ಟಚ್ ಮಾಡೋಕೆ ಆಗಲ್ಲ
ಟೀಂ ಇಂಡಿಯಾದ ದಿಗ್ಗಜ ಬ್ಯಾಟ್ಸ್ಮನ್ ಯಾರು ಎಂದಾಕ್ಷಣ ನೆನಪಾಗುವ ಮೊದಲ ಹೆಸರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ತೆಂಡೂಲ್ಕರ್ ಬ್ಯಾಟ್ಸ್ ಮನ್ ಆಗಿ ಲೆಕ್ಕವಿಲ್ಲದಷ್ಟು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಅವರು ಏಕದಿನ ಕ್ರಿಕೆಟ್ ನಲ್ಲಿ 49 ಶತಕ ಮತ್ತು ಟೆಸ್ಟ್ನಲ್ಲಿ 51 ಶತಕಗಳನ್ನು ಗಳಿಸಿ 100 ಶತಕಗಳನ್ನು ಗಳಿಸಿದ್ದಾರೆ. 200 ಟೆಸ್ಟ್ ಪಂದ್ಯಗಳು.. 464 ಏಕದಿನ ಪಂದ್ಯಗಳು.. ಇಷ್ಟು ಪಂದ್ಯಗಳನ್ನು ಭವಿಷ್ಯದಲ್ಲಿ ಯಾವ ಕ್ರಿಕೆಟರ್ ಕೂಡ ಆಡಲು ಸಾಧ್ಯವಿಲ್ಲ.
ಈ ಹಂತದಲ್ಲಿ ವಿರಾಟ್ ಕೊಹ್ಲಿ ಟೀಂ ಇಂಡಿಯಾವನ್ನು ಪ್ರವೇಶಿಸಿದರು. ಆರಂಭದಿಂದಲೂ ಅವರ ಆಕ್ರಮಣಕಾರಿ ಪ್ರದರ್ಶನವನ್ನು ಕಂಡ ಕ್ರಿಕೆಟ್ ಪಂಡಿತರು, ವಿರಾಟ್ ಕೊಹ್ಲಿ ಸಚಿನ್ ತೆಂಡುಲ್ಕರ್ ಅವರ ಉತ್ತರಾಧಿಕಾರಿ ಎಂದು ಬಣ್ಣಿಸಿದರು.
ಅದಕ್ಕೆ ತಕ್ಕಂತೆ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ ಮೆಷಿನ್ ಗನ್ ನಂತೆ ರನ್ ಗಳಿಸಿದರು. ಕೊಹ್ಲಿ ಈಗಾಗಲೇ 43 ಶತಕಗಳನ್ನು ಬಾರಿಸಿದ್ದಾರೆ. ಇನ್ನೂ ಆರು ಶತಕ ಬಾರಿಸಿದರೆ ಸಚಿನ್ ದಾಖಲೆ ಮುರಿಯಲಿದ್ದಾರೆ. ಕನಿಷ್ಠ ಒಂದು ಮಾದರಿಯಲ್ಲಾದರೂ ಸಚಿನ್ ದಾಖಲೆಯನ್ನು ಮುರಿಯುವ ಅವಕಾಶ ಕೊಹ್ಲಿಗೆ ಮಾತ್ರವಿದೆ.
ಆದರೆ ಕಳೆದ ಎರಡು ವರ್ಷಗಳಿಂದ ವಿರಾಟ್ ಕೊಹ್ಲಿ ಬ್ಯಾಟ್ ನಿಂದ ದೊಡ್ಡ ಇನ್ನಿಂಗ್ಸ್ ಬರುತ್ತಿಲ್ಲ. ಕೊಹ್ಲಿ ಶತಕ ಬಾರಿಸಿ ಸುಮಾರು ಮೂರು ವರ್ಷಗಳಾಗಿವೆ.
ಈ ನಡುವೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ತಮ್ಮ 100ನೇ ಟೆಸ್ಟ್ ಆಡಿರುವ ವಿರಾಟ್ ಕೊಹ್ಲಿ ಮೇಲೆ ಹೊಗಳಿಕೆಯ ಸುರಿಮಳೆಗೈದಿದ್ದಾರೆ. ಸಚಿನ್ ಅವರ ದಾಖಲೆಗಳನ್ನು ತಲುಪುವ ತಾಕತ್ತು ಕೊಹ್ಲಿಗೆ ಮಾತ್ರ ಇದೆ. ವಿರಾಟ್ ಕೊಹ್ಲಿ ಅವರನ್ನ ಯಾರು ಟಚ್ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
”ಕೊಹ್ಲಿ ಅವರ 100ನೇ ಟೆಸ್ಟ್ ಒಂದು ಮೈಲಿಗಲ್ಲು. ಸರಿಯಾದ ಫಿಟ್ನೆಸ್ ಇಲ್ಲದ ಈ ಕಾಲದಲ್ಲಿ ಕೊಹ್ಲಿ ನೂರು ಟೆಸ್ಟ್ ಗಳ ಗಡಿ ದಾಟುತ್ತಿರುವುದು ದೊಡ್ಡ ವಿಷಯ.
ಈ ನೂರು ಟೆಸ್ಟ್ಗಳು ಅವರಿಗೆ ಉತ್ತಮ ಅನುಭವಗಳನ್ನ ನೀಡಿವೆ ಎಂದು ನಾನು ಭಾವಿಸುತ್ತೇನೆ. ಇನ್ನು ನೂರು ಟೆಸ್ಟ್ ಆಡುವ ಸಾಮರ್ಥ್ಯ ಕೊಹ್ಲಿಗಿದೆ. ಅವರ ಫಿಟ್ನೆಸ್ ಹೀಗೇ ಇದ್ದರೆ ವಿರಾಟ್ ಕೊಹ್ಲಿ ಅವರನ್ನ ಮುಟ್ಟುವುದು ಇನ್ನೂ ಕಷ್ಟ.
33 ವರ್ಷದ ಕೊಹ್ಲಿ ಏಕದಿನದಲ್ಲಿ 43 ಶತಕಗಳನ್ನು ಬಾರಿಸಿದ್ದಾರೆ. ಇನ್ನು ಆರು ಶತಕಗಳನ್ನ ಬಾರಿಸಿದ್ರೆ ಏಕದಿನ ಕ್ರಿಕೆಟ್ನಲ್ಲಿ ಅತಿ ಸೆಂಚೂರಿ ಸಿಡಿಸಿದ ಬ್ಯಾಟ್ಸ್ಮನ್ ಎಂಬ ಇತಿಹಾಸ ನಿರ್ಮಿಸಲಿದ್ದಾರೆ.
ಇನ್ನು ಮೂರ್ನಾಲ್ಕು ವರ್ಷ ಆಡುವ ಸಾಮರ್ಥ್ಯ ಹೊಂದಿರುವ ಕೊಹ್ಲಿ ಫಿಟ್ ನೆಸ್ ಕಾಯ್ದುಕೊಂಡರೆ ಮಾತ್ರ ಇನ್ನೂ ಹತ್ತು ವರ್ಷ ಮೈದಾನದಲ್ಲಿ ಕಾಣಿಸಿಕೊಳ್ಳಬಹುದು ಎಂದಿದ್ದಾರೆ.
kohli-equal-huge-tendulkar-record









