Kohli Jersey Gift | 12ನೇ ಪ್ಲೇಯರ್ ಗೆ ಜೆರ್ಸಿ ಕೊಟ್ಟ ವಿರಾಟ್… ಯಾರದು ಗೊತ್ತಾ..?
ಮೊಹಾಲಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇನ್ನಿಂಗ್ಸ್ ಮತ್ತು 222 ರನ್‌ಗಳ ಜಯ ಸಾಧಿಸಿದೆ.
ಕೊಹ್ಲಿಯ 100ನೇ ಟೆಸ್ಟ್ ಪಂದ್ಯದಲ್ಲಿ ಜಡೇಜಾ ಮೇನಿಯಾ ನಡೆಯಿತು. ಇನ್ನು ಪಂದ್ಯದಲ್ಲಿ ವಿರಾಟ್ ಕೊಹ್ಲಿ ಒಂದು ಬಾರಿ ಮಾತ್ರ ಬ್ಯಾಟಿಂಗ್ ಬಂದು 45 ರನ್ ಗಳಿಸಿದರು.
ಬಳಿಕ ಫೀಲ್ಡಿಂಗ್ ವೇಳೆ ಅಭಿಮಾನಿಗಳತ್ತ ಮುಖ ಮಾಡಿ ಪುಷ್ಪ ಸಿನಿಮಾದ ಡೈಲಾಗ್ ಗಳನ್ನ ಹೊಡೆದರು.
ಇನ್ನು ಪಂದ್ಯದ ನಂತರ, ಟೀಂ ಇಂಡಿಯಾದ ಅನಧಿಕೃತ 12 ನೇ ಆಟಗಾರನಿಗೆ ಕೊಹ್ಲಿ ತಮ್ಮ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಟೀಂ ಇಂಡಿಯಾದ ಅನಧಿಕೃತ 12ನೇ ಆಟಗಾರ ಧರಂವೀರ್ ಪಾಲ್.
ಮಧ್ಯಪ್ರದೇಶದ ಧರ್ಮವೀರ್ ಪಾಲ್ ಹುಟ್ಟುವಾಗಲೇ ಪೋಲಿಯೊಗೆ ತುತ್ತಾಗಿದ್ದರು. ಕ್ರಿಕೆಟ್ ಅನ್ನು ಇಷ್ಟಪಡುವ ಧರಂವೀರ್ ಟೀಂ ಇಂಡಿಯಾ ಆಡುವ ಪ್ರತಿಯೊಂದು ಪಂದ್ಯಕ್ಕೂ ಬರುತ್ತಾರೆ.
ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಹಲವು ಆಟಗಾರರಿಗೆ ಧರಂವೀರ್ ಪಾಲ್ ಅಭಿಮಾನಿಯಾಗಿದ್ದಾರೆ.
ಆ ಪಟ್ಟಿಯಲ್ಲಿ ಕೊಹ್ಲಿ ಕೂಡ ಇದ್ದಾರೆ. ಹೀಗಾಗಿಯೇ ಧರಂವೀರ್ ಅವರನ್ನು ಟೀಂ ಇಂಡಿಯಾದ 12ನೇ ಅನಧಿಕೃತ ಆಟಗಾರ ಎಂದು ಕರೆಯಲಾಗುತ್ತದೆ.
ಮೊಹಾಲಿಯಲ್ಲಿ ನಡೆದ ಪಂದ್ಯದ ಬಳಿಕ ಟೀಂ ಇಂಡಿಯಾ ಬಸ್ ಹತ್ತಲು ಸಿದ್ಧವಾಗಿತ್ತು. ಅದೇ ಸಮಯಕ್ಕೆ ಧರಂವೀರ್ ಪಾಲ್ ಬಸ್ಸಿನ ಹತ್ತಿರ ಬಂದರು.
ಇದನ್ನು ಗಮನಿಸಿದ ಕೊಹ್ಲಿ ಬಸ್‌ನಿಂದ ಕೆಳಗಿಳಿದು ತಮ್ಮ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು.
ಇದಕ್ಕೆ ಸಂಬಂಧಿಸಿದ ವೀಡಿಯೋವನ್ನು ಕೂಡ ಧರಂವೀರ್ ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. “ಥ್ಯಾಂಕ್ಯೂ ಸೋ ಮಚ್ ಚಾಂಪಿಯನ್. ನೀನು ಯಾವತ್ತೂ ನನ್ನ ಚಾಂಪಿಯನ್ ಎಂದು ಬರೆದುಕೊಂಡಿದ್ದಾರೆ. kohli-gifts-jersey-india-unofficial-12th-man









