ಸಚಿನ್ ತೆಂಡುಲ್ಕರ್, ವಿಶ್ವ ಕ್ರಿಕೆಟ್ ನ ದೇವರು. ತಮ್ಮ ಕ್ಲಾಸ್ ಬ್ಯಾಟಿಂಗ್ ನಿಂದಲೇ ಕ್ರಿಕೆಟ್ ದುನಿಯಾವನ್ನು ಆಳಿದ ಮಾಸ್ಟರ್. ಜಂಟನ್ ಮ್ಯಾನ್ ಗೇಮ್ ನ ರಿಯಲ್ ಹೀರೋ ಆಗಿ ಮಿಂಚಿದ ಸಚಿನ್ ಗೆ ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ.
ಸಚಿನ್ ಮೈದಾನದಲ್ಲಿದ್ರೆ ಅಲ್ಲಿ ಕೇಳಿಬರುತ್ತಿದ್ದದ್ದು ಒಂದೇ ಶಬ್ಧ ಅದುವೇ ಸಚಿನ್..ಸಚಿನ್.. ಸಚಿನ್ ಒನ್ ಓನ್ಲಿ ಸಚಿನ್ ಅಷ್ಟೆ. ಇದು ಕೇವಲ ಹೆಸರಾಗಿರಲಿಲ್ಲ, ಕೋಟ್ಯಾಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಎದೆಬಡಿತವೂ ಹೌದು..! ಕೇವಲ ಸಚಿನ್ ಅವರ ಬ್ಯಾಟಿಂಗ್ ವೈಭವವನ್ನು ಕಣ್ತುಂಬಿಕೊಳ್ಳಲು ಜಗತ್ತಿನಾದ್ಯಂತ ಕೋಟಿ ಕೋಟಿ ಅಭಿಮಾನಿಗಳು ಟಿವಿ ಮುಂದೆ ಕುಳಿತುಕೊಳ್ತಿದ್ರು. ಸಚಿನ್ ಮಿಂಚಲೇಬೇಕೆಂದು ದೇವರಿಗೆ ಹರಿಕೆ ಕಟ್ಟಿಕೊಳ್ತಿದ್ರು. ಅದರಂತೆ ಪ್ರತಿ ಪಂದ್ಯದಲ್ಲೂ ಮಿಂಚುತ್ತಿದ್ದ ಸಚಿನ್ ಟೀಂ ಇಂಡಿಯಾ ಗರ್ಭಗುಡಿಯ ಸಾಕ್ಷಾತ್ ದೇವರಾಗಿದ್ದರು. ಬರೊಬ್ಬರಿ 20 ವರ್ಷಗಳ ಕಾಲ ಮೈದಾನದಲ್ಲಿ ರಣಧೀರನಂತೆ ಅಬ್ಬರಿಸಿದ್ದ ಸಚಿನ್, ಕ್ರಿಕೆಟ್ ನ ಬಹುತೇಕ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಸಚಿನ್ ಟೀಂ ಇಂಡಿಯಾದಲ್ಲಿ ಇದ್ದಷ್ಟು ಕಾಲ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಯಾವುದೇ ಭಯವಿರಲಿಲ್ಲ. ಸಚಿನ್ ಕ್ರೀಸ್ ನಲ್ಲದ್ದರೇ ಗೆಲುವು ನಮ್ದೆ ಅಂತ ನಿಶ್ಚಿಂತೆಯಿಂದ ಇದ್ರು. ಆದ್ರೆ ಸಚಿನ್ ಬಳಿಕ ಯಾರು..?
ಸಚಿನ್ ಬಳಿಕ ಯಾರು..?
ಈ ಪ್ರಶ್ನೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲದೆ ವಿಶ್ವ ಕ್ರಿಕೆಟ್ ಅಭಿಮಾನಿಗಳಿಗೂ ಕಾಡುತ್ತಿತ್ತು . ಆದ್ರೆ ಯಾರಲ್ಲೂ ಇದಕ್ಕೆ ನಿರ್ದಿಷ್ಟವಾದ ಉತ್ತರ ಇರಲ್ಲಿಲ್ಲ. ಅದರಲ್ಲೂ ಸಚಿನ್ ಬಳಿಕ ಅವರ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಮಾತಿತ್ತು. ಈ ಎಲ್ಲ ವಾದಗಳ ನಡುವೆ ವಿಶ್ವ ಕ್ರಿಕೆಟ್ ನಲ್ಲಿ ಒಬ್ಬ ಆಟಗಾರ ರಾಕೆಟ್ ವೇಗದಲ್ಲಿ ಮಿಂಚುತ್ತಿದ್ದ. ಆತನ ಬ್ಯಾಟಿಂಗನ್ನು ನೋಡಿದ ಕ್ರಿಕೆಟ್ ಅಭಿಮಾನಿಗಳು ಅಬ್ಬಾಬ್ಬ ಎನ್ನುತ್ತಾ ಪಿಧಾ ಆಗುತ್ತಿದ್ದರು. ಆ ಆಟಗಾರ ಬರ‍್ಯಾರು ಅಲ್ಲ ಒನ್ ಅಂದ್ ಓನ್ಲಿ ಕಿಂಗ್ ಕೊಹ್ಲಿ..
ವಿರಾಟ್ ಕೊಹ್ಲಿ.. ಈ ಹೆಸರು ಅನೇಕರ ಪ್ರಶ್ನೆಗೆ ಉತ್ತರ ನೀಡ್ತು. ಮೆಲ್ಲಮೆಲ್ಲಗೆ ವಿಶ್ವಕ್ರಿಕೆಟ್ ನಲ್ಲಿ ಈ ಹೆಸರು ದಿಗ್ಗಜ ಸಾಲಿಗೆ ಸೇರತೊಡಗಿತು. ಕ್ರಿಕೆಟ್ ದೇವರು ಟೀಂ ಇಂಡಿಯಾದಲ್ಲಿ ಅಬ್ಬರಿಸುವಾಗಲೇ ಭಾರತ ತಂಡಕ್ಕೆ ಎಂಟ್ರಿ ಕೊಟ್ಟ ವಿರಾಟ್. ಸಚಿನ್, ದ್ರಾವಿಡ್, ಧೋನಿ ಗರಡಿಯಲ್ಲಿ ಪಳಗಿದರು. ಹಾಗೇ ಪಂದ್ಯದಿಂದ ಪಂದ್ಯಕ್ಕೆ ಮಿಂಚಿದ್ರು. ಸಚಿನ್ ನಿವೃತ್ತಿಯ ಬಳಿಕ ಅವರ ಸ್ಥಾನ ತುಂಬುವ ರೀತಿ ಬ್ಯಾಟ್ ಬೀಸಿದ್ರು, ಭಾರತೀಯರ ಪಾಲಿನ ಹೊಸ ಕ್ರಿಕೆಟ್ ದೇವರಾದರು.
ಕೊಹ್ಲಿ ಪಕ್ಕಾ ಒರಟ.. ಕ್ಲಾಸಿಗೂ ಮಾಸಿಗೂ ಈತನೇ ನೆಂಟ. ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತೆ ಇವನದ್ದೇ ಆರ್ಭಟ. ಯಾರ್ ಏನೇ ಹೇಳಿದರೂ ಕೇರ್ ಮಾಡದ ಪರಿಪಾಠ. ಸೋಲನ್ನು ಒಪ್ಪಿಕೊಳ್ಳದ ಬಂಟ, ಕ್ರಿಕೆಟ್ ದುನಿಯಾದಲ್ಲಿ ರಾರಾಜಿಸುತ್ತಿದೆ ಇವನ ಪಟ. ಸದ್ಯ ಕ್ರಿಕೆಟ್ ಲೋಕಕ್ಕೆ ಈತನೇ ಸಾಮ್ರಾಟ.
ಹೌದು..! ವಿರಾಟ್ ಕೊಹ್ಲಿಯ ಆಟವೇ ಅಂತಹದ್ದು, ಅಲ್ಲಿ ಕ್ಲಾಸ್ ಮಾಸ್ ಶಾಟ್ ಗಳ ಮ್ರಿಶಣವಿರುತ್ತೆ. ಅಬ್ಬರ ವಿರುತ್ತೆ. ಸಿಂಹ ಘರ್ಜನೆ ಇರುತ್ತೆ. ಹೀಗಾಗಿ ವಿರಾಟ್ ಸದ್ಯ ಕ್ರಿಕೆಟ್ ಜಗತ್ತಿನ ಹುಲಿಯಾನಾಗಿ ಗುರುತಿಸಿಕೊಂಡಿದ್ದಾನೆ.
ಆದ್ರೆ ಸಚಿನ್ ತೆಂಡುಲ್ಕರ್, ವಿರಾಟ್ ಇಬ್ಬರಲ್ಲಿ ಯಾರು ಗ್ರೇಟ್..? ಈ ಪ್ರಶ್ನೆ ಪದೇ ಪದೇ ಕ್ರಿಕೆಟ್ ವಲಯದಲ್ಲಿ ಚರ್ಚೆಯಾಗುತ್ತಲೇ ಇದೆ. ಆದ್ರೆ ಇದಕ್ಕೆ ಸರಿಯಾದ ಉತ್ತರ ಮಾತ್ರ, ಇನ್ನೂ ಸಿಕ್ಕಲ್ಲ. ಇದೀಗ ಈ ಪ್ರಶ್ನೆ ಮತ್ತೊಮ್ಮೆ ಚರ್ಚೆಗೆ ಬಂದಿದ್ದು, ಇದಕ್ಕೆ ಟೀಮ್ ಇಂಡಿಯಾ ವೇಗಿ ಇಶಾಂತ್ ಶರ್ಮಾ, ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ಶರ್ಮಾ ನೀಡಿದ ಉತ್ತರ ಎಲ್ಲರಿಗೂ ಸರ್‌ಪ್ರೈಸ್ ನೀಡಿದ್ದು, ತೆಂಡುಲ್ಕರ್ ಗಿಂತ ಕೊಹ್ಲಿ ಗ್ರೇಟ್ ಎಂದಿದ್ದಾರೆ. ಇಶಾಂತ್ ಉತ್ತರದ ಮೂಲಕ ಸಚಿನ್ ತೆಂಡುಲ್ಕರ್ ಅಭಿಮಾನಿಗಳಲ್ಲಿ ಕಿಚ್ಚು ಹಚ್ಚಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಚಿನ್ ಅಭಿಮಾನಿಗಳು ಇಶಾಂತ್ ಅವರನ್ನು ಲೆಫ್ಟ್ ರೈಟ್ ಬಾರಿಸುತ್ತಿದ್ದಾರೆ.
ಇದೇಲ್ಲಾ ಏನೇ ಆಗಲಿ.. ಒಂದಂತೂ ನಿಜ. ವಿರಾಟ್ ಕೊಹ್ಲಿಯನ್ನ, ಕ್ರಿಕೆಟ್ ದೇವರು ಸಚಿನ್ ಗೆ ಹೊಲಿಕೆ ಮಾಡುವುದು ಉಚಿತವಲ್ಲ. ಮಾಸ್ಟರ್ ಬ್ಲಾಸ್ಟರ್ ಸಚಿನ್ ಆಟವೇ ಬೇರೆ, ವಿರಾಟ್ ರ ವೀರಾವೇಶವೇ ಬೇರೆ. ಆದರೇ ಒಂದಂತು ಸ್ಪಷ್ಟ. ವಿರಾಟ್, ಕ್ರಿಕೆಟ್ ದೇವರಂತೂ ಅಲ್ಲ ಆತ ಕ್ರಿಕೆಟ್ ರಾಕ್ಷಸ.

ಮಹೇಶ್ ಎಂ ದಂಡು.








