ಟೂರ್ನಿ ನಡುವೆ ನಾಯಕತ್ವದಿಂದ ಕೊಹ್ಲಿ ಸನ್ಯಾಸತ್ವ..?
ಬೆಂಗಳೂರು : ಟೂರ್ನಿ ಮಧ್ಯೆದಲ್ಲೇ ನಾಯಕತ್ವದಿಂದ ಕೊಹ್ಲಿ ಸನ್ಯಾಸತ್ವ ತೆಗೆದುಕೊಳ್ತಾರಾ ಎಂಬ ಪ್ರಶ್ನೆ ಉದ್ಭವವಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ವಹಿಸಿಕೊಂಡಿರುವ ವಿರಾಟ್ ಕೊಹ್ಲಿ ಕಳೆದ 9 ವರ್ಷಗಳಿಂದ ರೆಡ್ ಬ್ರಿಗೇಡ್ ಅನ್ನು ಮುನ್ನಡೆಸುತ್ತಿದ್ದಾರೆ. ಆದ್ರೆ ಈವರೆಗೂ ಐಪಿಎಲ್ ಟ್ರೋಪಿ ಮಾತ್ರ ಗೆದ್ದಿಲ್ಲ.
ಮುಂದಿನ ವರ್ಷದಿಂದ ಆರ್ಸಿಬಿಯ ನಾಯಕತ್ವ ವಹಿಸಿಕೊಳ್ಳೋದಿಲ್ಲ ಎಂದು ವಿರಾಟ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಆದ್ರೆ ಇದೀಗ ಕೊಹ್ಲಿ ಟೂರ್ನಿಯ ಮಧ್ಯೆದಲ್ಲೇ ತಮ್ಮ ನಾಯಕತ್ವ ತ್ಯೆಜಿಸಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿವೆ.

ಯಾಕೆಂದರೇ ವಿರಾಟ್ ಸದ್ಯ ಒತ್ತಡದಲ್ಲಿದ್ದು, ತಂಡವನ್ನು ಮುನ್ನಡೆಸಲು ಆಗುತ್ತಿಲ್ಲ. ಜೊತೆಗೆ ಬ್ಯಾಟಿಂಗ್ ವೈಫಲ್ಯ ಎದುರಿಸುತ್ತಿದ್ದಾರೆ.
ಹೀಗಾಗಿ ಅವರು ಟೂರ್ನಿಯ ಮಧ್ಯೆದಲ್ಲೇ ನಾಯಕತ್ವದಿಂದ ಕೆಳಗಿಳಿಯುತ್ತಾರೆ ಎಂದು ಮಾಜಿ ಕ್ರಿಕೆಟರ್ ವೊಬ್ಬರು ಹೇಳಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಕೆಕೆಆರ್ ವಿರುದ್ಧ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭಸಿದ್ರು. ಇದು ತಂಡದ ಮೇಲೂ ಪರಿಣಾಮ ಬೀರಿತ್ತು.
ಹೀಗಾಗಿ ದಿನೇಶ್ ಕಾರ್ತಿಕ್, ವಾರ್ನರ್ ರಂತೆ ಟೂರ್ನಿ ಮಧ್ಯೆಯೇ ವಿರಾಟ್ ಕೂಡ ನಾಯಕತ್ವ ತ್ಯಜಿಸಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿವೆ.








