KOLAR | ಮಾಲೂರು ತಾಲೂಕಿನಲ್ಲಿ ಭ್ರಷ್ಟಾಚಾರ : ಕೆ.ಎಸ್.ಮಂಜುನಾಥ್ ಗೌಡ
ಕೋಲಾರ : ಮಾಲೂರು ತಾಲೂಕಿನಲ್ಲಿ ಭ್ರಷ್ಟಾಚಾರ ತಂಡವಾಡುತ್ತಿದೆ ಎಂದು ಶಾಸಕ ನಂಜೇಗೌಡ ವಿರುದ್ಧ ಮಾಜಿ ಶಾಸಕ ಕೆ.ಎಸ್.ಮಂಜುನಾಥ್ ಗೌಡ ವಾಗ್ದಾಳಿ ನಡೆಸಿದ್ದಾರೆ.
ಮಾಲೂರಿನ ಲಕ್ಕೂರಿನಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮಂಜುನಾಥ್ ಗೌಡ, ಮಾಲೂರಿನಲ್ಲಿ ನಾಲ್ಕು ವರ್ಷದಲ್ಲಿ ಎಷ್ಟು ಭ್ರಷ್ಟಾಚಾರ ಆಗಿದೆ ಅಂತಾ ಜನತೆಗೆ ಗೊತ್ತಿದೆ.
ನಾಲ್ಕು ವರ್ಷದಲ್ಲಿ ಎಲ್ಲಿ ಎಷ್ಟು ಅವ್ಯವಹಾರ ಆಗಿದೆ ಅಂತಾ ನಾನು ಪ್ರೆಸ್ ಮೀಟ್ ಮಾಡಿ ಹೇಳಿಲ್ಲ. ಐದು ವರ್ಷದಲ್ಲಿ ನಾನು ಮಾಡಿರುವ ಕೆಲಸ ಜನ ನೋಡಿದ್ದಾರೆ,

ಈಗ ಇವರು ಮಾಡಿರುವ ಕೆಲಸ ನೋಡ್ತಿದ್ದಾರೆ. ರಾಜಕಾರಣಿಗಳು ಅಧಿಕಾರಿಗಳು, ಗುತ್ತಿಗೆದಾರರ ಬಳಿ ಕಮಿಷನ್ ತಗೊಂಡ್ರೆ ಕಾಮಗಾರಿ ಕಳಪೆ ಆಗಿರುತ್ತೆ, ಅದಕ್ಕೆ ಮಾಲೂರು ತಾಲೂಕಿನಲ್ಲಿ ನಡೆಯುತ್ತಿರುವ ಕಾಮಗಾರಿಗಳೇ ಸಾಕ್ಷಿ ಎಂದು ಗುಡುಗಿದರು.
ಮಾಲೂರು ತಾಲ್ಲೂಕಿನಲ್ಲಿ ಭ್ರಷ್ಟಾಚಾರ ತಂಡವಾಡುತ್ತಿದೆ. ರೈತರು ತಾಲೂಕು ಕಚೇರಿಗೆ ಅಲೆದಾಡುವ ಪರಿಸ್ಥಿತಿ ಬಂದಿದೆ. ಮಾಲೂರು ತಾಲೂಕು ಕಚೇರಿಯಲ್ಲಿ ದುಡ್ಡು ಕೊಡ್ದೆ ಯಾವುದೇ ಕೆಲಸ ಆಗ್ತಿಲ್ಲ, ತಾಲೂಕು ಕಚೇರಿ ಹಾಗೂ ಪೊಲೀಸ್ ಠಾಣೆ ಮಧ್ಯದಲ್ಲಿ ಎಸಿಬಿ ಕೌಂಟರ್ ನೀಡಬೇಕು.
ತಾಲೂಕಿನ ಜನತೆ ಭ್ರಷ್ಟಾಚಾರಕ್ಕೆ ಬೇಸತ್ತಿದ್ದಾರೆ. ಮುಸ್ಲಿಂ ಸಮುದಾಯದ ಮುಖಂಡರು ಬಿಜೆಪಿ ಎಂದು ಭಯ ಪಡಬೇಕಿಲ್ಲ. ನಾವೆಲ್ಲಾ ಒಂದೇ, ಎಲ್ಲಾ ಅಣ್ಣಾ ತಮ್ಮಂದಿರಂತೆ ಜೀವಿಸಬೇಕಿದೆ ಎಂದು ಮಂಜುನಾಥ್ ಹೇಳಿದರು.








