Kolar : ಹತ್ತಿ ಮೂಟೆ ತುಂಬಿಕೊಂಡು ಹೋಗುತ್ತಿದ್ದ ಲಾರಿ ಪಲ್ಟಿ
ಕೋಲಾರ : ರಸ್ತೆ ಗುಂಡಿಯಲ್ಲಿ ಹತ್ತಿ ಮೂಟೆ ತುಂಬಿಕೊಂಡು ಹೋಗುತ್ತಿದ್ದ ಲಾರಿ ಪಲ್ಟಿಯಾಗಿರುವ ಘಟನೆಯು ಕೋಲಾರದಲ್ಲಿ ನಡೆದಿದೆ..
ಮಾಲೂರು-ಹೊಸೂರು ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ.. ಅತೀವ ಮಳೆಯಿಂದಾಗಿ ಮಾಲೂರು-ಹೊಸೂರು ಮುಖ್ಯ ರಸ್ತೆ ಕೃಷಿ ಹೊಂಡಗಳಂತಾಗಿದೆ..
ಸುಮಾರು18 ಕೋಟಿ ವ್ಯಚ್ಚದಲ್ಲಿ ನಿರ್ಮಾಣವಾಗಿರೊ ರಸ್ತೆ, ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ರಸ್ತೆ ಹಾಳಾಗಿದೆ.. ಗುಡಿಗಳು ಬಿದ್ದಿದ್ದು ಸಾರ್ವನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ..
ಮಾಲೂರು ಕೈಗಾರಿಕಾ ಪ್ರದೇಶಕ್ಕೆ ಹೋಗುವ ರಸ್ತೆಯಲ್ಲೇ ಬೃಹತ್ ಗುಂಡಿ ನಿರ್ಮಾಣವಾಗಿದೆ..
PWD ಅಧಿಕಾರಿಗಳು ಹಾಗೂ ಗುತ್ತಿಗೇದಾರರ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ..
ಹತ್ತಿ ಮೂಟೆ ತುಂಬಿಕೊಡು ಹೋಗ್ತಿದ್ದ ವೇಳೆ ಲಾರಿ ಪಲ್ಟಿ ಹಿನ್ನಲೆ,
ಮಾಲೂರು-ಹೊಸೂರು ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಬಹಳ ಸಮಯ ವಾಹನ ಸವಾರರು ಪರದಾಡುವಂತಾಗಿತ್ತು..







