Kolkata – ಸಲಿಂಗಿ ಜೋಡಿಗಳ ಅದ್ಧೂರಿ ವಿವಾಹ – ಪೊಟೋ ವೈರಲ್
ಪ್ರೀತಿಯೇ ಹಾಗೇ…ಅದು ಯಾವಾಗ, ಎಲ್ಲಿ, ಯಾರ ನಡುವೆ ಚಿಗುರುತ್ತದೆಯೋ ಗೊತ್ತಿಲ್ಲ. ಕೋಲ್ಕತ್ತಾದ ಸಲಿಂಗಕಾಮಿ ದಂಪತಿಗಳು ಭಾನುವಾರ, ಜುಲೈ 3 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಸೆಮಣೆ ಏರುವ ಮೂಲಕ ತಮ್ಮ ಸಂಬಂಧವನ್ನ ಅಧಿಕೃತಗೊಳಿಸಿಕೊಂಡಿದ್ದಾರೆ. ಅವರ ವಿವಾಹ ಸಮಾರಂಭದಲ್ಲಿ ಆತ್ಮೀಯ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಭಾಗವಹಿಸಿದ್ದು ವಿಶೇಷವಾಗಿತ್ತು.
ಅಭಿಷೇಕ್ ರೇ ಮತ್ತು ಚೈತನ್ಯ ಶರ್ಮಾ ಪರಸ್ಪರ ದಾಪಂತ್ಯ ಜೀವನಕ್ಕೆ ಕಾಲಿಟ್ಟಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸಲಿಂಗಕಾಮಿ ದಂಪತಿಗಳ ಅರಿಶಿಣ ಶಾಸ್ತ್ರ ಮತ್ತು ವಿವಾಹ ಸಮಾರಂಭಗಳ ಚಿತ್ರಗಳು ಮತ್ತು ವೀಡಿಯೊಗಳನ್ನ Instagram ನಲ್ಲಿ ಹಂಚಿಕೊಳ್ಳಲಾಗಿದೆ. ಅಭಿಷೇಕ್ ಧೋತಿ ಮತ್ತು ಕುರ್ತಾದಲ್ಲಿ ಸಾಂಪ್ರದಾಯಿಕ ಬಂಗಾಳಿ ವರನಂತೆ ಕಾಣಿಸಿಕೊಂಡಿದ್ದಾರೆ. ಚೈತನ್ಯ ಶೆರ್ವಾನಿ ಧರಿಸಿ ಮಿಂಚಿದ್ದಾರೆ.
ಅಭಿಷೇಕ್ ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್ ಆಗಿದ್ದರೆ, ಚೈತನ್ಯ ಜಿತಲ್ ಮಾರ್ಕೆಟಿಂಗ್ ಎಕ್ಸ್ ಪರ್ಟ್ ತಮ್ಮ ಮದುವೆಯ ಬಗ್ಗೆ ಮಾತನಾಡಿದ ಅಭಿಷೇಕ್, “ಅಂತಿಮವಾಗಿ, ಪ್ರೀತಿಯು ಎಲ್ಲವನ್ನೂ ಗೆಲ್ಲುತ್ತದೆ” ಅದಕ್ಕೆ ಜಾತಿ, ಧರ್ಮ, ಅದರಲ್ಲೂ ಲಿಂಗ ಬೇಕಾಗಿಲ್ಲ. “ಸಮಾಜ ಏನು ತಿಳಿದುಕೊಳ್ಳುತ್ತೆ ಎಂದು ಯೋಚಿಸುವುದನ್ನ ನಿಲ್ಲಿಸಿ. ನಿಮ್ಮ ಜೀವನವನ್ನು ನೀವು ಬಯಸಿದ ರೀತಿಯಲ್ಲಿ ಬದುಕಲು ಪ್ರಾರಂಭಿಸಿ” ಎಂದು ಅಭಿಷೇಕ್ ಹೇಳಿದ್ದಾರೆ.
Gay couple ties the knot in presence of family members in Kolkata, wedding pictures go viral