ಯುಎಇಗೆ ಕಾಲಿಟ್ಟ ಮೇಲೆ ಕೊಲ್ಕತ್ತಾ ನೈಟ್ ರೈಡರ್ಸ್ ಅದೃಷ್ಟೇ ಬದಲಾಗಿದೆ. ಲೀಗ್ನಲ್ಲಿ ಆಡಿದ್ದ 7 ಪಂದ್ಯಗಳಲ್ಲಿ 5ನ್ನು ಗೆದ್ದು ನೆಟ್ ರನ್ ರೇಟ್ ಮೂಲಕ ಎಲಿಮಿನೇಟರ್ ತಲುಪಿದ್ದು ದೊಡ್ಡ ಸಾಧನೆ.
ಎಲಿಮಿನೇಟರ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಣ್ಣು ಮುಕ್ಕಿಸಿದ್ದು ಶಾಕಿಂಗ್. ಈಗ ಇಯಾನ್ ಮೊರ್ಗಾನ್ ಬಳಕ ಫೈನಲ್ ನಲ್ಲಿ ಸ್ಥಾನ ಪಡೆಯಲು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.
ಶಾರ್ಜಾದಲ್ಲಿ ಆಡಿರುವ 7 ಪಂದ್ಯಗಳ ಪೈಕಿ 5 ಪಂದ್ಯಗಳಲ್ಲಿ ಚೇಸಿಂಗ್ ಮಾಡಿದ ತಂಡಕ್ಕೆ ಗೆಲುವು ಲಭಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ಕೂಡ ಚೇಸಿಂಗ್ನಲ್ಲಿ ಬಲಿಷ್ಠ.
ಈ ಸೀಸನ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬ್ಯಾಟಿಂಗ್ ಮಾಡಿದ್ದ 4 ಪಂದ್ಯಗಳಲ್ಲಿ ಸೋಲು ಕಂಡಿತ್ತು. ಮತ್ತೊಂದೆಡೆ ಕೊಲ್ಕತ್ತಾ ನೈಟ್ ರೈಡರ್ಸ್ ಯುಎಇ ಆವೃತ್ತಿಯಲ್ಲಿ 5 ಬಾರಿ ಚೇಸಿಂಗ್ ಮಾಡಿ ಗೆದ್ದಿದೆ. ಹೀಗಾಗಿ ಶಾರ್ಜಾದಲ್ಲಿ ಟಾಸ್ ಗೆದ್ದವರು ಮೊದಲು ಫೀಲ್ಡಿಂಗ್ ಆರಿಸಿಕೊಳ್ಳುವುದು ಬಹುತೇಕ ಖಚಿತ.
ಟೀಮ್ ವಿಷಯಕ್ಕೆ ಬಂದರೆ ಕೆಕೆಆರ್ ಯುಎಇಗೆ ಬಂದ ಮೇಲೆ ಅದೃಷ್ಟವೇ ಬದಲಿಸಿದೆ. ಟಾಪ್ ಆರ್ಡರ್ ಬ್ಯಾಟಿಂಗ್ ಮಿಂಚಿನ ಆಟ ಆಡುತ್ತಿದೆ.
ಶುಭ್ಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ ಮತ್ತು ನಿತೀಶ್ ರಾಣಾ ಪಂದ್ಯವನ್ನು ಆಲ್ ಮೋಸ್ಟ್ ಮುಗಿಸಿಕೊಟ್ಟಿದ್ದಾರೆ.
ದಿನೇಶ್ ಕಾರ್ತಿಕ್, ಶಕಿಬ್ ಅಲ್ ಹಸನ್ ಮತ್ತು ಕ್ಯಾಪ್ಟನ್ ಮೊರ್ಗಾನ್ ಹೇಳಿಕೊಳ್ಳುವಂತಹ ಟಚ್ನಲ್ಲಿ ಇಲ್ಲದಿದ್ದರೂ ಡೇಂಜರಸ್.
ವರುಣ್ ಚಕ್ರವರ್ತಿ ಮತ್ತು ಸುನೀಲ್ ನರೈನ್ ಬೌಲಿಂಗ್ನ ಟ್ರಂಪ್ಕಾರ್ಡ್ ಗಳು. ಶಿವಂ ಮಾವಿ ಮತ್ತು ಲೊಕಿ ಪರ್ಗ್ಯೂಸನ್ ನಂಬಿಕಸ್ಥರು.
ಶಕೀಬ್ ಮತ್ತು ರಸೆಲ್ ನಡುವೆ ಸ್ಥಾನಕ್ಕಾಗಿ ಫೈಟ್ ಇದೆ. ರಸೆಲ್ ಪಿಟ್ ಆಗಿದ್ದರೂ ಶಾರ್ಜಾ ಪಿಚ್ನಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಶಕೀಬ್ ಆಡುವ ಸಾಧ್ಯತೆ ಹೆಚ್ಚಿದೆ.
ಡೆಲ್ಲಿ ಕ್ಯಾಪಿಟಲ್ಸ್ ಕಳೆದ 3 ವರ್ಷಗಳಿಂದ ಸ್ಥಿರ ಆಟ ಆಡುತ್ತಿದೆ. ಕಳೆದ ಬಾರಿ ಫೈನಲ್ ತಲುಪಿದ್ದ ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ಕಪ್ ಎತ್ತುವ ಕನಸು ಕಾಣುತ್ತಿದೆ.
ಆದರೆ ಮಾರ್ಕಸ್ ಸ್ಟೋಯ್ನಿಸ್ ಗಾಯ ತಂಡದ ಬ್ಯಾಲೆನ್ಸ್ ತಪ್ಪಿಸಿದೆ. ಆದರೆ ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಸ್ಟೋಯ್ನಿಸ್ ಫಿಟ್ ಆಗುವ ನಂಬಿಕೆ ಇದೆ.
ಶಿಖರ್ ಧವನ್, ಪೃಥ್ವಿ ಷಾ, ಶ್ರೇಯಸ್ ಅಯ್ಯರ್, ನಾಯಕ ರಿಷಬ್ ಪಂತ್ ಮತ್ತು ಹೆಟ್ಮಯರ್ ಬ್ಯಾಟಿಂಗ್ನಲ್ಲಿ ಮಿಂಚಬೇಕಿದೆ.
ಅನ್ರಿಚ್ ನೋರ್ಟ್ಜೆ, ಕಗಿಸೊ ರಬಾಡಾ, ಆವೇಶ್ ಖಾನ್ ಫಾಸ್ಟ್ ಬೌಲಿಂಗ್ ನೋಡಿಕೊಂಡರೆ, ಅಶ್ವಿನ್ ಮತ್ತು ಅಕ್ಸರ್ ಪಟೇಲ್ ಸ್ಪಿನ್ ಬೌಲಿಂಗ್ ನೋಡಿಕೊಳ್ತಾರೆ.
ಸ್ಟೋಯ್ನಿಸ್ ಲಭ್ಯರಾದರೆ ಡೆಲ್ಲಿ ಬ್ಯಾಟಿಂಗ್ ಜೊತೆ ಬೌಲಿಂಗ್ ಗೂ ಬಲ ಸಿಗುತ್ತದೆ. ಮೇಲ್ನೋಟಕ್ಕೆ ಎರಡೂ ತಂಡಗಳು ಬಲಿಷ್ಠ ವಾಗಿ ಕಾಣುತ್ತಿರುವುದರಿಂದ ಶಾರ್ಜಾದಲ್ಲಿ ಧಮಾಕ ನಡೆಯಲಿದೆ ಅನ್ನುವ ಲೆಕ್ಕಾಚಾರವಿದೆ.
ಡೆಲ್ಲಿ ಕ್ಯಾಪಿಟಲ್ಸ್
- ಪೃಥ್ವಿ ಷಾ, 2. ಶಿಖರ್ ಧವನ್, 3.ಶ್ರೇಯಸ್ ಅಯ್ಯರ್, 4 ರಿಷಭ್ ಪಂತ್, 5.ಮಾರ್ಕಸ್ ಸ್ಟೋಯ್ನಿಸ್/ ಸ್ಟೀವನ್ ಸ್ಮಿತ್, 6. ಶಿಮ್ರಾನ್ ಹೆಟ್ಮಯರ್, 7.ಅಕ್ಸರ್ ಪಟೇಲ್, 8. ಆರ್.ಅಶ್ವಿನ್,9. ಕಗಿಸೋ ರಬಾಡಾ, 10. ಅನ್ರಿಚ್ ನೋರ್ಟ್ಜೆ, 11.ಆವೇಶ್ ಖಾನ್
ಕೊಲ್ಕತ್ತಾ ನೈಟ್ ರೈಡರ್ಸ್:
1.ಶುಭ್ಮನ್ ಗಿಲ್, 2. ವೆಂಕಟೇಶ್ ಅಯ್ಯರ್, 3. ರಾಹುಲ್ ತ್ರಿಪಾಠಿ, 5. ನಿತೀಶ್ ರಾಣಾ, 5. ಇಯಾನ್ ಮೊರ್ಗಾನ್, 6. ಆಂಡ್ರೆ ರಸೆಲ್, 7. ದಿನೇಶ್ ಕಾರ್ತಿಕ್, 8. ಸುನೀಲ್ ನರೈನ್, 9. ಲೂಕಿ ಫರ್ಗ್ಯೂಸನ್, 10. ವರುಣ್ ಚಕ್ರವರ್ತಿ, 11. ಶಿವಂ ಮಾವಿ