KKR | ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಜೆರ್ಸಿ ಅನಾವರಣ
ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಜೆರ್ಸಿ ಅನಾವರಣ
2021ರ ಐಪಿಎಲ್ ನಲ್ಲಿ ರನ್ನರ್ ಅಪ್ ಆಗಿದ್ದ ಕೆಕೆಆರ್
ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿರುವ ಕೆಕೆಆರ್
ಶಾರೂಖ್ ಖಾನ್ ಒಡೆತನದ ನೈಟ್ ರೈಡರ್ಸ್ ತಂಡ
ಈ ಬಾರಿಯ ಇಂಡಿಯಲ್ ಪ್ರಿಮಿಯರ್ ಲೀಗ್ ಗಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ.
ತಂಡದ ಮ್ಯಾನೆಜಿಂಗ್ ಡೈರೆಕ್ಟರ್ ವೆಂಕಿ ಮೈಸೂರು ಮತ್ತು ತಂಡದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಸಮ್ಮುಖದಲ್ಲಿ ಕೆಕೆಆರ್ ತಂಡದ ಜೆರ್ಸಿ ರಿಲೀಸ್ ಆಗಿದೆ.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಫ್ರಾಂಚೈಸಿ ಈ ಕುರಿತಾದ ವಿಡಿಯೋವನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ.
ಕೆಕೆಆರ್ ಜೆರ್ಸಿ ಚಿನ್ನ ಮತ್ತು ನೇರಳೆ ಬಣ್ಣಗಳ ಹೊಸ ಸಂಯೋಜನೆಯೊಂದಿಗೆ ಬಂದಿದೆ.
IPL-2021 ರನ್ನರ್ ಅಪ್ ಆಗಿರುವ KKR ಈ ಬಾರಿ ಹೊಸ ನಾಯಕನೊಂದಿಗೆ ಕಣಕ್ಕೆ ಇಳಿಯಲಿದೆ.
ಐಪಿಎಲ್-2022 ಮೆಗಾ ಹರಾಜಿನಲ್ಲಿ ಟೀಂ ಇಂಡಿಯಾ ಯುವ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರನ್ನ 12.25 ಕೋಟಿ ರೂ.ಗೆ ಕೆಕೆಆರ್ ಖರೀದಿ ಮಾಡಿದೆ.
ಜೆರ್ಸಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕೆಕೆಆರ್ ಎಂಡಿ ವೆಂಕಿ ಮೈಸೂರು, ”ಶ್ರೇಯಸ್ ನಾಯಕತ್ವದ ಮೇಲೆ ನಮಗೆ ನಂಬಿಕೆ ಇದೆ.
ಆಟದಲ್ಲಿ ಸೋಲು ಗೆಲುವು ಸಹಜ, ತಮ್ಮ ಪಯಣದಲ್ಲಿ ಎದುರಾಗುವ ಪ್ರತಿಯೊಂದು ಸವಾಲುಗಳನ್ನು ಎದುರಿಸಲು ಸಿದ್ಧರಿದ್ದೇವೆ ಎಂದಿದ್ದಾರೆ.
kolkata-knight-riders-unveiled-their-jersey









