ಕೋಲ್ಕತ್ತಾ: ಕೋಲ್ಕತ್ತಾ ಅತ್ಯಾಚಾರ ಪ್ರಕರಣದ (Kolkata Horror) ಆರೋಪಿ ಈಗ ಜೈಲಿನಲ್ಲಿದ್ದಾನೆ. ಇನ್ನೊಂದೆಡೆ ಈ ಪ್ರಕರಣ ರಾಜ್ಯದಲ್ಲಿ ದೊಡ್ಡ ಮಟ್ಟದ ಕಿಚ್ಚು ಹಚ್ಚಿದೆ. ಆದರೆ, ಆತ ಪಶ್ಚಾತ್ತಾಪದಲ್ಲಿ ಬೇಯುವುದು ಬಿಟ್ಟು ಊಟದ ವಿಷಯವಾಗಿ ತಗಾದೆ ತೆಗೆದಿದ್ದಾನೆ ಎನ್ನಲಾಗಿದೆ.
ರೋಟಿ-ಸಬ್ಜಿಯಿಂದ ನನಗೆ ತೃಪ್ತಿಯಾಗ್ತಿಲ್ಲ. ಮೊಟ್ಟೆ ಚೌಮೆನ್ (ಮೊಟ್ಟೆ ಮಿಶ್ರಿತ ನೂಡಲ್ಸ್) (Egg Chowmein) ತಿನ್ನಲು ಅವಕಾಶ ನೀಡುವಂತೆ ಒತ್ತಾಯಿಸಿದ್ದಾನೆ ಎನ್ನಲಾಗಿದೆ. ಆರೋಪಿ ಸಂಜಯ್ ರಾಯ್ಗೆ (Sanjay Roy) ಸಾಮಾನ್ಯ ಕೈದಿಯಂತೆಯೇ ಜೈಲಿನ ಊಟ ನೀಡಲಾಗುತ್ತಿದೆ. ಶನಿವಾರ ರೋಟಿ ಮತ್ತು ಸಬ್ಜಿ ನೀಡಿದಾಗ ವಿರೋಧಿಸಿದ್ದಾನೆ ಎನ್ನಲಿಗದೆ. ಆಗ ಆರೋಪಿಗೆ ಜೈಲು ಸಿಬ್ಬಂದಿ ಸರಿಯಾಗಿ ಬಿಸಿ ಮುಟ್ಟಿಸಿದ್ದಾರೆ ಎಂದು ತಿಳಿದು ಬಂದಿದೆ.
ಆರ್.ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (CBI) ತನಿಖೆ ನಡೆಸುತ್ತಿದೆ. ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರನ್ನ ಸಿಬಿಐ ತಂಡ ಮತ್ತೆ ವಿಚಾರಣೆಗೊಳಪಡಿಸಿದೆ. 14 ದಿನ ತನ್ನ ಕಸ್ಟಡಿಗೆ ತೆಗೆದುಕೊಂಡಿದೆ. ಈಗಾಗಲೇ 140 ಗಂಟೆಗಳಿಗೂ ಹೆಚ್ಚು ಕಾಲ ಅವರನ್ನು ವಿಚಾರಣೆ ನಡೆಸಿದೆ ಎಂದು ತಿಳಿದು ಬಂದಿದೆ.








